ರಾಷ್ಟ್ರೀಯ ಸುದ್ದಿ

ಶಂಖ ಊದುವುದರಿಂದ ಮತ್ತು ಕೆಸರು ಮೈಗೆ ಮೆತ್ತಿಕೊಳ್ಳುವುದರಿಂದ ಕೊರೋನಾ ನನ್ನ ಹತ್ತಿರ ಕೂಡಾ ಸುಳಿಯಲ್ಲವೆಂದಿದ್ದ ಬಿಜೆಪಿ ಸಂಸದನಿಗೆ ಪಾಸಿಟಿವ್ !

Sukhbir Singh Jaunapuria

 ವರದಿಗಾರ (ಸೆ 14): ಜನರು ಶಂಖ ಊದುವುದರಿಂದ ಮತ್ತು ಕೆಸರನ್ನು ಮೈಗೆ ಮೆತ್ತಿಕೊಳ್ಳುವುದರಿಂದ ಅಥವಾ ಕೆಸರಿನಲ್ಲಿ ಕುಳಿತುಕೊಳ್ಳುವುದರಿಂದ ಕೊರೋನಾ ನಮ್ಮ ಹತ್ತಿರವೂ ಸುಳಿಯಲ್ಲವೆಂದಿದ್ದ ಟೋಂಕ್ ಸವಾಯ್ ಮಾಧೋಪುರ್ ನ ಬಿಜೆಪಿಯ ಸಂಸದ ಸುಖ್ಬೀರ್ ಜೌನಪುರಿಯಾಗೆ ಇಂದು ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಈ ಸಂಸದ ತನ್ನ ಉಳುವ ಭೂಮಿಯಲ್ಲಿ ಕೂತು, ಇಡೀ ಮೈಗೆ ಕೆಸರು ಮೆತ್ತಿಕೊಂಡು ಶಂಖ ಊದುತ್ತಿದ್ದ ವಿಲಕ್ಷಣ ವೀಡಿಯೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಈ ಕುರಿತು ಅಲ್ಲಿದ್ದ ಸ್ಥಳೀಯರಲ್ಲಿ ಇವರು, “ಶಂಖ ಊದುವುದರಿಂದ ನಮ್ಮ ಶ್ವಾಸಕೋಶದ ಕ್ಷಮತೆ ಅಭಿವೃದ್ಧಿ ಹೊಂದುತ್ತದೆ ಮತ್ತು ಕೆಸರನ್ನು ಮೈಗೆ ಹಾಕಿಕೊಳ್ಳುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ” ಎಂದು ಹೇಳಿಕೆ ನೀಡಿದ್ದರು. ಆದುದರಿಂದ ಕೊರೋನಾ ನನ್ನ ಹತ್ತಿರವೂ ಸುಳಿಯಲು ಸಾಧ್ಯವಿಲ್ಲ ಎಂದು ಬಡಾಯಿ ಕೊಚ್ಚಿಕೊಂಡಿದ್ದರು. ಇದೀಗ ಇವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಬಿಜೆಪಿ ಮತ್ತೊಮ್ಮೆ ನಗೆಪಾಟಲಿಗೀಡಾಗಿದೆ.

ಈ ಕುರಿತು ಹಲವರು ಟ್ವಿಟ್ಟರ್ ನಲ್ಲಿ ಈ ಹಿಂದೆ ಅವರೇ ಮಾಡಿಕೊಂಡಿದ್ದ ವೀಡೀಯೋವನ್ನು ಪೋಸ್ಟ್ ಮಾಡಿ ಕಾಲೆಳೆದಿದ್ದಾರೆ. ಬಿಜೆಪಿ ಇಂತಹಾ ಹಲವು ಮೂರ್ಖರಿಂದ ತುಂಬಿಕೊಂಡಿದೆ ಎಂದು ಕಿಚಾಯಿಸಿದ್ದಾರೆ.

ವಿಡಿಯೋ ವೀಕ್ಷಿಸಿ:

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group