ಜಿಲ್ಲಾ ಸುದ್ದಿ

ದಮ್ಮಾಮ್ ನಿಂದ ಮಂಗಳೂರಿಗೆ ಬಂದಿಳಿದ ಚಾರ್ಟಡ್ ವಿಮಾನದ ಪ್ರಯಾಣಿಕರಿಗೆ ಬ್ಲಡ್ ಡೋನರ್ಸ್ ಮಂಗಳೂರು(ರಿ)ಸಂಸ್ಥೆಯ ವತಿಯಿಂದ ಮಂಗಳೂರಿನಲ್ಲಿ ಭವ್ಯ ಸ್ವಾಗತ

ಮಂಗಳೂರು :    ದಾದ ಬಾಯ್ ಟ್ರಾವೆಲ್ಸ್ ಇವರ ಪ್ರಾಯೋಜಕತ್ವದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯ ಸಹಕಾರದಲ್ಲಿ ದಮ್ಮಾಮ್ ನಿಂದ ಮಂಗಳೂರಿಗೆ 170 ಪ್ರಯಾಣಿಕರನ್ನು ಹೊತ್ತ ವಿಶೇಷ ವಿಮಾನವು ಹವಾಮಾನದ ವೈಪರೀತ್ಯದಿಂದ ತಡವಾಗಿ ಬೆಂಗಳೂರು ವಿಮಾನದಲ್ಲಿ ಬಂದಿಳಿಯಿತು..ನಂತರ ಬೆಂಗಳೂರಿನಿಂದ ಮರು ಪ್ರಯಾಣ ಆರಂಭಿಸಿ ಮಂಗಳೂರಿಗೆ ರಾತ್ರಿ 11:15 ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.

ಬಿರುಸಿನ ಮಳೆ ಮತ್ತು ತಾಂತ್ರಿಕ ಅಡಚಣೆಯಿಂದಾಗಿ 5ಗಂಟೆ ತಡವಾದ್ದರಿಂದ ಎಲ್ಲಾ ಪ್ರಯಾಣಿಕರು ಆಯಾಸ ಮತ್ತು ಹಸಿವಿನಲ್ಲಿರುವುದನ್ನು ಮನಗೊಂಡು ಮದ್ಯ ರಾತ್ರಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಸಂಸ್ಥೆಯು ದಾದ ಬಾಯ್ ಇವರ ಸಹಕಾರದಲ್ಲಿ ಎಲ್ಲಾ ಪ್ರಯಾಣಿಕರಿಗೆ ಆಹಾರದ ವ್ಯವಸ್ಥೆ ಹಾಗೂ ದೂರದ ಊರಿಗೆ ತೆರಳಲು ವಾಹನದ ವ್ಯವಸ್ಥೆ ಮಾಡಿ ಪ್ರಯಾಣಿಕರಿಗೆ ನಡು ರಾತ್ರಿಯಲ್ಲಿ ಎಲ್ಲಾ ರೀತಿಯ ಸಹಕಾರವನ್ನು ನೀಡಿತ್ತು.

ವಿಶೇಷ ವಿಮಾನದಲ್ಲಿ ನೌಕರಿ ಕಳೆದುಕೊಂಡಿರುವ ಕಾರ್ಮಿಕರು, ವೀಸಾ ಅವಧಿ ಮುಗಿದು ತ್ರಿಶಂಕು ಸ್ಥಿತಿಯಲ್ಲಿದ್ದವರು, ಮಧುಮೇಹ, ಹೃದ್ರೋಗ ಮತ್ತಿತರ ಕಾಯಿಲೆಯಿಂದ ಬಳಲುತ್ತಿದ್ದವರು, ಹಿರಿಯ ನಾಗರಿಕರು, ಗರ್ಭಿಣಿ, ಮಕ್ಕಳು ಸೇರಿದಂತೆ ಎಲ್ಲಾ ಪ್ರಯಾಣಿಕರು ತಾಯ್ನಾಡಿಗೆ ಸುರಕ್ಷಿತವಾಗಿ ತಲುಪಿದ್ದಾರೆ.ಇಂತಹ  ಯೋಜನೆಯನ್ನು ಕೈಗೊಂಡ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಕಾರ್ಯಗಳಿಗೆ ಪ್ರಯಾಣಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು.

ದಮ್ಮಾಮ್ ವಿಮಾನ ನಿಲ್ದಾಣದಿಂದ ಬಿಡಿಎಂ ಕಾರ್ಯನಿರ್ವಾಹಕರಾದ ಫರ್ಝಾನ್ ಸಿದ್ದಕಟ್ಟೆ,ಮುಝಮ್ಮಿಲ್ ಷಾ ಉಳ್ಳಾಲ, ಫಯಾಝ್, ನೌಫಲ್ ಬಜ್ಪೆ ಹಾಗೂ ಇಂಡಿಯನ್ ಸೋಷಿಯಲ್ ಫೋರಮ್ ನಾಯಕರಾದ ಅತಾವುಲ್ಲಾ, ಆದೀಲ್ ,ಶಬೀರ್ ಕೃಷ್ಣಾಪುರ, ಇಬ್ರಾಹಿಂ ವೇಣೂರು ಸಕಲ ವ್ಯವಸ್ಥೆ ಸಿದ್ದಪಡಿಸಿ ಪ್ರಯಾಣಿಕರನ್ನು ಬೀಳ್ಕೊಟ್ಟು ಶುಭ ಹಾರೈಸಿದರು.

ಮಂಗಳೂರಿಗೆ ಆಗಮಿಸಿದ ಪ್ರಯಾಣಿಕರನ್ನು ಸ್ವಾಗತಿಸಲು ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ, ಕಾರ್ಯದರ್ಶಿ ನವಾಝ್ ಕಲ್ಲರಕೋಡಿ,ಅಡ್ಮಿನ್ ಗಳಾದ ದಾವೂದ್ ಬಜಾಲ್,ರಝ್ಝಾಾಕ್ ಸಾಲ್ಮರ,ಆರಿಫ್ ಮೊಂಟೆಪದವು,ಫಾರೂಕ್ ರೋಮಾಂಟಿಕ್ ಬಿಡಿಎಂ 24×7 ಸದಸ್ಯರಾದ ಮನ್ಸೂರ್ ಕೋಡಿಜಾಲ್, ರಫೀಕ್ ಬಜ್ಪೆ, ರಿಝ್ವಾನ್ ಬಜ್ಪೆ,ನಿಝಾಾಮ್ ಮಂಜನಾಡಿ ಮೊದಲಾದವರು ಉಪಸ್ಥಿತರಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group