ರಾಷ್ಟ್ರೀಯ ಸುದ್ದಿ

ನಿಮ್ಮ ಜೀವವನ್ನು ನೀವೇ ರಕ್ಷಿಸಿಕೊಳ್ಳಿ, ಪ್ರಧಾನಿ ನವಿಲಿನೊಂದಿಗೆ ಬ್ಯುಸಿಯಾಗಿದ್ದಾರೆ: ರಾಹುಲ್ ಗಾಂಧಿ ವ್ಯಂಗ್ಯ

Modi with peacock

ಪೂರ್ವತಯಾರಿ ಇಲ್ಲದ ಲಾಕ್ ಡೌನ್ ಒಬ್ಬ ವ್ಯಕ್ತಿಯ ಅಹಂಕಾರದ ಉಡುಗೊರೆ

ವರದಿಗಾರ (ಸೆ.14) ದೇಶದ ಜನರು ಕೊರೊನಾ ಸೋಂಕಿನಿಂದ ತಮ್ಮ ಜೀವಗಳನ್ನು ತಾವೇ ರಕ್ಷಿಸಿಕೊಳ್ಳಬೇಕು, ಏಕೆಂದರೆ ಪ್ರಧಾನಮಂತ್ರಿಯವರು ನವಿಲಿನೊಂದಿಗೆ ಬ್ಯುಸಿಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

“ಭಾರತದಲ್ಲಿ ಕೊರೋನವೈರಸ್ ಪ್ರಕರಣಗಳು ಈ ವಾರ 50 ಲಕ್ಷ ದಾಟಲಿವೆ ಮತ್ತು ಸಕ್ರಿಯ ಪ್ರಕರಣಗಳು 10 ಲಕ್ಷ ದಾಟಲಿವೆ. ಪೂರ್ವತಯಾರಿ ಇಲ್ಲದ ಲಾಕ್ ಡೌನ್ ಒಬ್ಬ ವ್ಯಕ್ತಿಯ ಅಹಂಕಾರದ ಉಡುಗೊರೆಯಾಗಿತ್ತು. ಈ ಅಹಂನಿಂದಲೇ ದೇಶಾದ್ಯಂತ ಕೊರೋನವೈರಸ್ ಹರಡಲು ಕಾರಣವಾಯಿತು ಎಂದು ರಾಹುಲ್ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಸರ್ಕಾರ ಹೇಳಿರುವ” ಸ್ವಾವಲಂಬಿಗಳಾಗಿರಿ (ಆತ್ಮನಿರ್ಭರ್) ಎಂಬುದರ ಅರ್ಥ” ನಿಮ್ಮ ಪ್ರಾಣವನ್ನು ನೀವೇ ಉಳಿಸಿಕೊಳ್ಳಿ ಎಂಬುದಾಗಿದೆ, ಏಕೆಂದರೆ ಪ್ರಧಾನಿ ನವಿಲಿನೊಂದಿಗೆ ನಿರತರಾಗಿದ್ದಾರೆ” ಎಂದು ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group