ರಾಜ್ಯ ಸುದ್ದಿ

ವ್ಯವಸ್ಥೆಯನ್ನು ಪ್ರಶ್ನಿಸುವವರ ಧ್ವನಿ ಅಡಗಿಸಲು ಕೋಮುವಾದಿ ಶಕ್ತಿಗಳು ಜೀವ ತೆಗೆಯುವ ಕೃತ್ಯಕ್ಕೆ ಮುಂದಾಗುತ್ತಿವೆ: ಬಿಟಿ ಲಲಿತಾ ನಾಯಕ್

ವರದಿಗಾರ-ಬೆಂಗಳೂರು: ವ್ಯವಸ್ಥೆಯನ್ನು ಪ್ರಶ್ನಿಸುವವರ ಧ್ವನಿ ಅಡಗಿಸಲು ಇಂದು ಕೋಮುವಾದಿ ಶಕ್ತಿಗಳು ಇಂತಹ ಜೀವ ತೆಗೆಯುವ ಕೃತ್ಯಕ್ಕೆ ಮುಂದಾಗುತ್ತಿವೆ. ಅದರಿಂದಾಗಿ ವ್ಯಕ್ತಿಗಳ ಜೀವ ತೆಗೆಯಬಹುದು ಆದರೆ ಚಿಂತನೆಗಳ ಜೀವ ತೆಗೆಯಲು ಸಾಧ್ಯವಿಲ್ಲ ಎಂದ ಅವರು ಸರಕಾರ ಕೂಡಲೇ ಕೊಲೆಗಡುಕರನ್ನು ಪತ್ತೆಹಚ್ಚಬೇಕೆಂದು ಹಿರಿಯ ಸಾಹಿತಿಗಳಾದ ಬಿಟಿ ಲಲಿತಾನಾಯಕ್ ಒತ್ತಾಯಿಸಿದ್ದಾರೆ.

ಅವರು ಇಂದು ಪ್ರಗತಿಪರ ಸಂಘಟನೆಗಳು,  ಹಿರಿಯ ವಿಚಾರವಾದಿ ಎಂ.ಎಂ.ಕಲಬುರಗಿ ಯವರ ಹತ್ಯೆಯಾಗಿ ಎರಡು ವರ್ಷ ಕಳೆದರೂ, ಹತ್ಯೆಕೋರರನ್ನು ಬಂಧಿಸುವಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿರುವ ಸರಕಾರದ ಕ್ರಮವನ್ನು ಖಂಡಿಸಿ ನಗರದ ಟೌನ್ ಹಾಲ್ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯಲ್ಲಿ  ಮಾತನಾಡುತ್ತಿದ್ದರು.

ಬರಹಗಾರರಾದ ಯೋಗೇಶ್ ಮಾಸ್ಟರ್ ಮಾತನಾಡಿ, ದುಷ್ಕರ್ಮಿಗಳು ರಿವಾಲ್ವರ್ ತಗೊಂಡು ಮನೆ ಬಾಗಿಲಿಗೆ ಬಂದಾಗ ಪೋಲಿಸರಿಗೆ ಪೋನ್ ಮಾಡಿ ತಿಳಿಸಿದರೆ ಸ್ಟೇಷನ್ ಗೆ ಬಂದು ಪ್ರಕರಣ ದಾಖಲಿಸಿಎಂಬ ಪೊಲೀಸರ ಮಾತುಗಳೇ ಚಿಂತಿಸುವಂತೆ ಮಾಡುತ್ತಿವೆ. ಈ ರೀತಿಯಾದರೆ ಸರಕಾರವನ್ನು, ಪೊಲೀಸರನ್ನು ಹಾಗೂ ಸಮಾಜವನ್ನು ಹೇಗೆ ನಂಬಬೇಕು? ಎಂದು ಯೋಗೇಶ್ ಮಾಸ್ಟರ್ ಪ್ರಶ್ನಿಸಿದ್ದಾರೆ.
ಹಾಗೂ ವೈಜ್ಞಾನಿಕ ಮನೋಭಾವನೆಯನ್ನು ಮೂಡಿಸೋದು ಹೇಗೆ ಎಂಬುದಾಗಿ ಕಳವಳ ವ್ಯಕ್ತಪಡಿಸಿದ್ದಾರೆ.
ನನ್ನ ಹತ್ಯೆ ಮಾಡಲು ತಂತ್ರ ಹೆಣೆದ ರೀತಿಯಲ್ಲಿಯೇ ಕಲಬುರಗಿಯವರನ್ನು ಹತ್ಯೆ ಮಾಡಿದ್ದಾರೆ.

ಹಾಡು ಹಗಲೇ ತ್ರಿಶೂಲ ಹಂಚುವ, ವೈಚಾರಿಕರನ್ನು ಸದೆಬಡೆಯುವಂತೆ ಕೋಮುವಾದಿ ಸ್ವಾಮಿಗಳು ಕರೆ ನೀಡುತ್ತಿದ್ದು, ಇಂತಹ ಜೀವ ವಿರೋಧಿ ಸಿದ್ದಾಂತವನ್ನು ಹರಡಲು ಬಿಡದೆ ಜಾಗೃತಿ ಮೂಡಿಸಬೇಕೆಂದು ಅವರು ತನ್ನ ಭಾಷಣದಲ್ಲಿ ಹೇಳಿದರು.

ಜನಶಕ್ತಿ ಪತ್ರಿಕೆಯ ಸಹ ಸಂಪಾದಕರಾದ ಎಸ್.ವೈ ಗುರುಶಾಂತ ಮಾತನಾಡಿ, ಎಂ.ಎಂ. ಕಲಬುರಗಿ ಯವರನ್ನು ಹತ್ಯೆ ಮಾಡಿದವರು ವೈಚಾರಿಕ ಭಿನ್ನತೆಯನ್ನು ಹೊಂದಿದವರು ಅಲ್ಲದೇ ಅವರಿಗೊಂದು ಸಾಂಸ್ಥಿಕ ಹಿನ್ನೆಲೆಯಿದೆ ಎಂಬುದಾಗಿ ಮಾಹಿತಿ ಸರಕಾರಕ್ಕೆ ಲಭಿಸಿದ್ದರೂ ಆ ಹತ್ಯೆಕೋರರನ್ನು ಗುರುತಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಸರಕಾರದ ನಡೆಗೆ ಏನೆನ್ನಬೇಕು? ಎಂದು ಪ್ರಶ್ನಿಸಿ, ಕಲಬುರಗಿಯರ ಹತ್ಯೆಗೆ ನ್ಯಾಯ ಸಿಗುವಂತಾಗಬೇಕಾದರೆ ಕೂಡಲೇ ಸರಕಾರ ಹತ್ಯೆಕೋರರನ್ನು ಬಂಧಿಸಬೇಕೆಂದು  ಎಂದು ಒತ್ತಾಯಿಸಿದ್ದಾರೆ.

SFI ರಾಜ್ಯಾಧ್ಯಕ್ಷರಾದ ವಿ ಅಂಬರೀಷ್, DYFI ಮುಖಂಡರಾದ ಬಸವರಾಜ ಪೂಜಾರ, ಜನವಾದಿ ಮಹಿಳಾ ಸಂಘಟನೆ JMS ರಾಜ್ಯ ಕಾರ್ಯದರ್ಶಿ ಕೆ. ಗೌರಮ್ಮ, ಸಮುದಾಯ ರಾಜ್ಯ ಉಪಾಧ್ಯಕ್ಷರಾದ ಟಿ ಸುರೇಂದ್ರರಾವ್, BGVS ಉಪಾಧ್ಯಕ್ಷರಾದ ಪುರುಷೋತ್ತಮ್ ಕಲಾಲಬಂಡಿ, DSF ರಾಜ್ಯ ಸಂಚಾಲಕರಾದ ರಾಜ್ ಗೋಪಾಲ್, ಸಾಮಾಜಿಕ ಕಾರ್ಯಕರ್ತರಾದ ನರಸಿಂಹ ಮೂರ್ತಿ ಮಾತನಾಡಿದರು.

ಪ್ರತಿಭಟನಾ ಧರಣಿಯಲ್ಲಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ವಸುಂಧರ ಭೂಪತಿ, ಟಿಪ್ಪು ಪ್ರಂಟ್ ನ ಸರ್ದಾರ್ ಅಹ್ಮದ್ ಖುರೇಷಿ, ವಿಜಾಪೂರದ ಸರಸ್ವತಿ ಚಿಮ್ಮಲಗಿ, ಮೈಸೂರಿನಿಂದ ಪಂಡಿತಾರಾದ್ಯ, ರಾಮಣ್ಣ ಕೋಡಿಹಳ್ಳಿ, SFI ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ, DYFI ರಾಜ್ಯ ಕಾರ್ಯದರ್ಶಿ ಬಿ ರಾಜಶೇಖರಮೂರ್ತಿ, ಪುರುಷೋತ್ತಮದಾಸ್,  DHS ಜಿಲ್ಲಾ ಸಂಚಾಲಕರಾದ ಎನ್ ನಾಗರಾಜ್, ಜೆಎಂಎಸ್ ನ ಶ್ರೀಮತಿ, ಶಾರದಾ, ಆಶಾ. SFI ಬೆಂಗಳೂರು ಜಿಲ್ಲಾಧ್ಯಕ್ಷರಾದ ವೇಗಾನಂದ, ಮಹೇಶ ಕಾರ್ಯದರ್ಶಿ ಅಮರೇಶ್ ಸಿ, ಹನುಮಂತ ದುರ್ಗದ, DYFI ನ ರವಿಕುಮಾರ್, ಪ್ರವೀಣ, ಸಾಗರ ಕೂಡಗಿ, ಸದಾಶಿವ ಇನ್ನಿತರರು ಉಪಸ್ಥಿತರಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group