ರಾಷ್ಟ್ರೀಯ ಸುದ್ದಿ

ಬೆದರಿಕೆ ಹಾಕುವ ಮೂಲಕ ಸಿಎಎ ವಿರುದ್ಧದ ಜನರ ಹೋರಾಟ ತಡೆಯಲು ಸಾಧ್ಯವಿಲ್ಲ: ಸೀತಾರಾಂ ಯೆಚೂರಿ

Sitaram-Yechury

ವರದಿಗಾರ (ಸೆ.13): ಬೆದರಿಕೆಗಳನ್ನು ಹಾಕುವ ಮೂಲಕ ಸಿಎಎಯಂತಹ ತಾರತಮ್ಯದ ಕಾನೂನುಗಳ ವಿರುದ್ಧದ ಜನರ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ ಯೆಚೂರಿ ಹೇಳಿದ್ದಾರೆ.

ದೆಹಲಿ ಗಲಭೆಗೆ ಸಂಬಂಧಿಸಿ ದೆಹಲಿ ಪೊಲೀಸರು ಹಾಕಿರುವ ಪೂರಕ ಆರೋಪಪಟ್ಟಿಯಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ ಯೆಚೂರಿ, ಸ್ವರಾಜ್ಯ ಅಭಿಯಾನದ ಮುಖ್ಯಸ್ಥ ಯೋಗೇಂದ್ರ ಯಾದವ್, ಪ್ರಖ್ಯಾತ ಅರ್ಥಶಾಸ್ತ್ರಜ್ಞೆ ಪ್ರೊ. ಜಯತಿ ಘೋಷ್‍, ದಿಲ್ಲಿ ವಿಶ್ವವಿದ್ಯಾಲಯದ ಪ್ರೊ. ಅಪೂರ್ವಾನಂದ ಮತ್ತು ಪ್ರಖ್ಯಾತ ಸಾಕ್ಷ್ಯಚಿತ್ರ ತಯಾರಕ ರಾಹುಲ್‍ ರಾಯ್ ಅವರನ್ನು ಸಹ-ಪಿತೂರಿಗಾರರೆಂದು ಹೆಸರಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸೀತಾರಾಮ್‍ ಯೆಚೂರಿ, ಇದು ನರೇಂದ್ರ ಮೋದಿ ಮತ್ತು ಬಿಜೆಪಿಯ ನೈಜ “ನಡೆ, ಚಾರಿತ್ರ್ಯ, ಮುಖ”(ಚಾಲ್‍, ಚರಿತ್ರ್, ಚೆಹರಾ)ವನ್ನು ಬಯಲಿಗೆ ತಂದಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ದಿಲ್ಲಿ ಪೊಲೀಸ್, ಬಿಜೆಪಿ, ಕೇಂದ್ರ ಸರಕಾರ ಮತ್ತು ಗೃಹ ಮಂತ್ರಾಲಯದ ಅಡಿಯಲ್ಲಿ ಕೆಲಸ ಮಾಡುತ್ತಿದೆ. ಅದರ ನ್ಯಾಯಬಾಹಿರ, ಕಾನೂನುಬಾಹಿರ ಕ್ರಿಯೆಗಳು ಬಿಜೆಪಿ ಮುಖಂಡತ್ವದ ರಾಜಕೀಯದ ನೇರ ಫಲಿತಾಂಶಗಳಾಗಿವೆ. ಅವರಿಗೆ ಮುಖ್ಯಧಾರೆಯ ರಾಜಕೀಯ ಪಕ್ಷಗಳ ನ್ಯಾಯಪೂರ್ಣ, ಶಾಂತಿಯುತ ಪ್ರತಿಭಟನೆಗಳೆಂದರೆ ಭಯ, ಆದ್ದರಿಂದ ಪ್ರತಿಪಕ್ಷಗಳ ಮೇಲೆ ಗುರಿಯಿಡಲು ಪ್ರಭುತ್ವ ಶಕ್ತಿಯ ದುರುಪಯೋಗ ಮಾಡುತ್ತಿದ್ದಾರೆ ಎಂದು ಯೆಚೂರಿ ಹರಿಹಾಯ್ದಿದಿದ್ದಾರೆ.

ಬಿಜೆಪಿ ಸರಕಾರಕ್ಕೆ ಪ್ರಶ್ನೆಗಳೆಂದರೆ ಭಯ, ಅದು ಸಂಸತ್ತಿನಲ್ಲಿ ಇರಬಹುದು, ಅಥವ ಮಾಹಿತಿ ಹಕ್ಕು ಕಾಯ್ದೆ(ಆರ್‍.ಟಿ.ಐ.)ಯ ಮೂಲಕ ಮಾಧ್ಯಮಗಳಲ್ಲಿರಬಹುದು. ಪ್ರಧಾನ ಮಂತ್ರಿಗಳಿಗೆ ಪತ್ರಿಕಾಗೋಷ್ಠಿ ನಡೆಸಲಾಗಲೀ, ತನ್ನ ಖಾಸಗಿ ನಿಧಿಯ ಬಗ್ಗೆ ಆರ್‍.ಟಿ.ಐ. ಪ್ರಶ್ನೆಗಳಿಗೆ ಉತ್ತರಿಸಲಾಗಲೀ ಅಥವ ತನ್ನ ಪದವಿ ಪ್ರಮಾಣ ಪತ್ರವನ್ನಾಗಲೀ ತೋರಿಸಲು ಸಾಧ್ಯವಿಲ್ಲ. ಇಂತಹ ಪ್ರಭುತ್ವ ಶಕ್ತಿಯ ನಗ್ನ ದುರುಪಯೋಗದಿಂದ ರಾಜಕೀಯ ವಿರೋಧದ ಬಾಯಿ ಮುಚ್ಚಿಸಬಹುದು ಎಂದು ಅವರು ಯೋಚಿಸಿದಂತಿದೆ. ನಾವು ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿದವರಾಗಿದ್ದು, ಇದನ್ನೂ ಸೋಲಿಸುತ್ತೇವೆ ಎಂದು ಯೆಚೂರಿ ಎಚ್ಚರಿಸಿದ್ದಾರೆ.

ಭಾರತೀಯರು, ಅವರ ಜಾತಿ, ಮತ, ಬಣ್ಣ, ಪಂಥ, ಪ್ರದೇಶ, ಲಿಂಗ ಮತ್ತು ರಾಜಕೀಯ ಸಂಯೋಜನೆಗಳು ಏನೇ ಇರಲಿ, ಎಲ್ಲರೂ ಸಮಾನರು ಎಂದು ಎತ್ತಿ ಹಿಡಿಯುವುದು ನಮ್ಮ ಹಕ್ಕು ಮಾತ್ರವೇ ಅಲ್ಲ, ನಮ್ಮ ಕರ್ತವ್ಯ ಕೂಡ. ನಾವು ಅದನ್ನು ಖಂಡಿತವಾಗಿಯೂ ಚಲಾಯಿಸುತ್ತೇವೆ ಎಂದು ಸೀತಾರಾಂ ಯೆಚೂರಿ ಹೇಳಿದ್ದಾರೆ.

ದಿಲ್ಲಿಯಲ್ಲಿ 56 ಜನಗಳ ಸಾವಿಗೆ ಕಾರಣವಾದ ಹಿಂಸಾಚಾರವನ್ನು ಪ್ರಚೋದಿಸಿದವರ ದ್ವೇಷ ಭಾಷಣದ ವೀಡಿಯೋಗಳು ಎಲ್ಲರ ಮುಂದಿವೆ. ಜೆಎನ್ಯುುನಲ್ಲಿ ಹಿಂಸಾಚಾರ ನಡೆಸಿದ ಗುಂಪಿನ ನೇತೃತ್ವ ನೀಡಿದವರ ವೀಡಿಯೋ ಕೂಡ ಜಗಜ್ಜಾಹೀರಾಗಿದೆ. ಬಿಜೆಪಿ ಸರಕಾರ ಮತ್ತು ಅದರ ಅಡಿಯಲ್ಲಿರುವ ದಿಲ್ಲಿ ಪೋಲೀಸ್ ಅವನ್ನು ನೋಡಲಾರರು, ಏಕೆಂದರೆ ಅವರು ಪ್ರಜಾಪ್ರಭುತ್ವವನ್ನು ನಾಶಮಾಡಲು ಕಟಿಬದ್ಧರಾಗಿದ್ದಾರೆ, ಯಾವುದೇ ರೀತಿಯಲ್ಲಾದರೂ ವಿರೋಧವನ್ನು ಮೆಟ್ಟಿ ಹಾಕುವ ಆದೇಶಕ್ಕೆ ಒಳಗಾಗಿದ್ದಾರೆ. ಇದೀಗ ಮೋದಿ ಮತ್ತು ಬಿಜೆಪಿಯ ನಿಜವಾದ ಮುಖ, ತಂತ್ರ ಮತ್ತು ಮಂತ್ರ. ಅದರ ವಿರುದ್ಧ ಪ್ರತಿಭಟನೆಗಳು ನಡೆಯುತ್ತವೆ ಎಂದು ಸೀತಾರಾಮ್‍ ಯೆಚೂರಿ ಎಚ್ಚರಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group