ರಾಷ್ಟ್ರೀಯ ಸುದ್ದಿ

ಕಂಗನಾ ಪರವಾಗಿ ಸಾಧು-ಸಂತರ ಬ್ಯಾಟಿಂಗ್; ಉದ್ಧವ್ ಠಾಕ್ರೆಗೆ ಅಯೋಧ್ಯೆಯಲ್ಲಿ ಸ್ವಾಗತವಿಲ್ಲ ಎಂದ ವಿ ಎಚ್ ಪಿ

Uddhav-Thackeray

ವರದಿಗಾರ (ಸೆ.13): ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರ ಕಚೇರಿಯನ್ನು ಧ್ವಂಸಗೊಳಿಸಿದ ಉದ್ದವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ನಿರ್ಧಾರಕ್ಕೆ ಗರಂ ಆಗಿರುವ ವಿಶ್ವ ಹಿಂದೂ ಪರಿಷತ್ ಮತ್ತು ಅಯೋಧ್ಯೆಯ ಸಂತರು, ಇನ್ನು ಮುಂದೆ ಅಯೋಧ್ಯೆಗೆ ಠಾಕ್ರೆ ಬಂದರೆ ಸ್ವಾಗತ ಕೋರುವುದಿಲ್ಲ ಎಂದು ಹೇಳಿದ್ದಾರೆ.

ಇನ್ನು ಮುಂದೆ ಉದ್ಧವ್ ಠಾಕ್ರೆಗೆ ಅಯೋಧ್ಯೆಯಲ್ಲಿ ಸ್ವಾಗತವಿಲ್ಲ. ಶಿವಸೇನೆ ರಾಣಾವತ್ ಮೇಲೆ ಏಕೆ ದಾಳಿ ನಡೆಸುತ್ತಿದೆ? ಪ್ರತಿಯೊಬ್ಬರೂ ಇದನ್ನು ಅರ್ಥಮಾಡಿಕೊಂಡಿದ್ದಾರೆ. ಈಗಿರುವ ಶಿವಸೇನೆ ಬಾಳಾಸಾಹೇಬ್ ಠಾಕ್ರೆ ಅವರ ಕಾಲದಲ್ಲಿ ಇದ್ದ ಶಿವಸೇನೆ ಅಲ್ಲ’ ಎಂದು ಅಯೋಧ್ಯೆ ಸಂತ ಸಮಾಜದ ಮುಖ್ಯಸ್ಥ ಮಹಾಂತ್ ಕನ್ಹಯ್ಯ ದಾಸ್ ಹೇಳಿದ್ದಾರೆ.

ಉದ್ಧವ್ ಠಾಕ್ರೆ ಮತ್ತು ಶಿವಸೇನೆಗೆ ಅಯೋಧ್ಯೆಗೆ ಸ್ವಾಗತವಿಲ್ಲ. ಈಗ, ಮಹಾರಾಷ್ಟ್ರ ಮುಖ್ಯಮಂತ್ರಿ ಈಗ ಇಲ್ಲಿಗೆ ಬಂದರೆ ಅಯೋಧ್ಯೆಯ ಸಂತರಿಂದ ತೀವ್ರ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಹನುಮಾನ್ ಗರ್ಹಿ ದೇವಸ್ಥಾನದ ಅರ್ಚಕ ಮಹಾಂತ ರಾಜು ದಾಸ್ ಹೇಳಿದರು.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group