‘ಕೇಜ್ರಿವಾಲ್ ಗೆ ಈ ಬಗ್ಗೆ ಅರಿವಿತ್ತು’
ವರದಿಗಾರ (ಸೆ.13): ಇಂಡಿಯಾ ಎಗೈನ್ಸ್ಟ್ ಕರಪ್ಶನ್(India Against Corruption -IAC) ಅಭಿಯಾನವನ್ನು ಬಿಜೆಪಿ, ಆರ್ ಎಸ್ಎಸ್ ತಮ್ಮ ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಂಡಿತು, ಈ ಸತ್ಯವನ್ನು ನಾವು ಆಗ ಅರಿಯದಾದೆವು, ಇದಕ್ಕೆ ನಮಗೆ ವಿಷಾದವಿದೆ ಎಂದು ಹಿರಿಯ ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ಇಂಡಿಯಾ ಟುಡೇ ಸಂಪಾದಕ ರಾಜದೀಪ್ ಸರ್ದೇಸಾಯಿ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತ ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನು ಬಿಜೆಪಿ ದುರುಪಯೋಗಪಡಿಸಿಕೊಂಡಿತು. ಬಿಜೆಪಿ ಮತ್ತು ಆರ್ ಎಸ್ ಎಸ್ ಅಭಿಯಾನಕ್ಕೆ ಬೆಂಬಲ ನೀಡಿ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಂಡಿತು. ಅವರಿಗೆ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವ ಏಕೈಕ ಉದ್ದೇಶಮಾತ್ರವಿತ್ತು, ಇದನ್ನು ನಾನು ಸೇರಿದಂತೆ ಅಣ್ಣಾ ಹಜಾರೆ ಮತ್ತಿತರರು ಅರಿಯದಾದೆವು, ಆದರೆ ಅರವಿಂದ ಕೇಜ್ರಿವಾಲ್ ಅವರಿಗೆ ಸಣ್ಣ ಮಟ್ಟದ ಸಂಶಯವಿತ್ತು ಎಂದು ಹೇಳಿದರು.
ಅರವಿಂದ ಕೇಜ್ರಿವಾಲ್ ಅವರ ಮನಸ್ಥಿತಿಯನ್ನು ನಾವು ಅರ್ಥೈಸಿಕೊಳ್ಳಲು ವಿಫಲರಾದೆವು. ಅವರು ನಿರಂಕುಶ ಮತ್ತು ನಿರ್ಲಜ್ಜ ವ್ಯಕ್ತಿ ಎಂಬುದು ಬಳಿಕದ ದಿನಗಳಲ್ಲಿ ಮನವರಿಕೆಯಾಗಿತು ಎಂದು ಭೂಷಣ್ ಹೇಳಿದರು.
ಯಾಕಾಗಿ ನೀವು ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಿಲ್ಲ, ಅವರು ಕೂಡ ಅದೇ ತಪ್ಪನ್ನು ಈ ಹಿಂದೆ ಮಾಡಿದ್ದರು. ನೀವು ಕೇವಲ ಬಿಜೆಪಿಯನ್ನು ಮಾತ್ರ ಗುರಿಯಾಗಿಸಿ ದಾಳಿ ಮಾಡುತ್ತಿದ್ದೀರಿ ಎಂದು ಕೆಲವರು ನನ್ನಲ್ಲಿ ಕೇಳುತ್ತಾರೆ. ಆದರೆ, ಅಧಿಕಾರದಲ್ಲಿರುವ ಪಕ್ಷವೊಂದು ದೇಶಕ್ಕೆ ಮಾಡುವ ಹಾನಿ ಮತ್ತು ವಿರೋಧ ಪಕ್ಷದಲ್ಲಿರುವ ಪಕ್ಷ ಮಾಡುವ ಹಾನಿಯ ನಡುವೆ ವ್ಯತ್ಯಾಸವಿದೆ. ವಿರೋಧ ಪಕ್ಷದಲ್ಲಿರುವ ಪಕ್ಷ ಮಾಡುವ ಹಾನಿಗಿಂತ ಅಧಿಕಾರದಲ್ಲಿರುವ ಪಕ್ಷ ಮಾಡುವ ಹಾನಿ ಅಪಾರವಾದುದು. ಕಾಂಗ್ರೆಸ್ ಈಗ ಅಧಿಕಾರಲ್ಲಿಲ್ಲ, ಬಿಜೆಪಿ ಅಧಿಕಾರದಲ್ಲಿದೆ, ಅದು ಮಾಡುವ ತಪ್ಪು ದೇಶದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಬಿಜೆಪಿ ವಿರುದ್ಧ ನಾನು ಮಾತನಾಡುತ್ತಿದ್ದೇನೆ ಎಂದು ಪ್ರಶಾಂತ್ ಭೂಷಣ್ ವಿವರಿಸಿದರು.
ನರೇಂದ್ರ ಮೋದಿ ಸರ್ಕಾರ ಸಂಪೂರ್ಣ ಫ್ಯಾಸಿಸ್ಟ್ ಸರ್ಕಾರ, ಆದರೆ ಇಂದಿರಾಗಾಂಧಿ ಫ್ಯಾಸಿಸ್ಟ್ ಆಗಿರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಭೂಷಣ್ ಉತ್ತರಿಸಿದರು.
'India Against Corruption' movement was propped up by BJP-RSS for their own political purposes, says @pbhushan1#IndiaTodayIndiaTomorrow
Watch full show with @sardesairajdeep at https://t.co/inRLh0Jxr8 pic.twitter.com/BA9cyhEDi9— IndiaToday (@IndiaToday) September 12, 2020
