ರಾಜ್ಯ ಸುದ್ದಿ

‘ಡ್ರಗ್ಸ್ ಜಿಹಾದ್’ ಪ್ರಚೋದನಾತ್ಮಕ ಪದ ಬಳಕೆ ಮಾಡಿದ ಸುವರ್ಣ ಚಾನೆಲ್ ವಿರುಧ್ದ ಕ್ರಮಕ್ಕೆ ತಾಹೀರ್ ಹುಸೇನ್ ಆಗ್ರಹ

ಬೆಂಗಳೂರು : ಒಂದು ಕಡೆ ಪೋಲೀಸ್ ಇಲಾಖೆ ಡ್ರಗ್ ಮಾಫಿಯಾವನ್ನು ಬಯಲಿಗೆಳೆಯಲು ಹಗಲಿರುಳು ಶ್ರಮಿಸುತ್ತಿದ್ದರೆ, ಇತ್ತ ಮಾಧ್ಯಮಗಳು ಮಾತ್ರ ನಾಲಿಗೆಯ ಮೇಲೆ ಹಿಡಿತವಿಲ್ಲದೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕದಡಲು ಹಂಚು ಹಾಕುತ್ತಿರುವುದು ವಿಷಾದನೀಯ. ಸುವರ್ಣ ಟಿವಿ ಚಾನೆಲ್ ನವರು ‘ಡ್ರಗ್ಸ್ ಜಿಹಾದ್’ ಎನ್ನುವ ಪದ ಬಳಕೆ ಮಾಡಿ ಭಾವನೆಗಳಿಗೆ ಧಕ್ಕೆಯುಂಟು ಮಾಡಿರುವುದು ಖಂಡನೀಯ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೀರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಮಾತನಾಡಿದ ಅವರು, ಇಸ್ಲಾಮ್ ಧರ್ಮದ ಧಾರ್ಮಿಕ ಪದಕ್ಕೆ ಜೋಡಿಸಿ ಮುಸ್ಲಿಮರನ್ನು ಪ್ರಚೋದಿಸುವ ಕೆಲಸದಲ್ಲಿ ಸುವರ್ಣ ಟಿವಿ ಮಾಧ್ಯಮ ನಿರತವಾಗಿದೆ. ‘ಡ್ರಗ್ಸ್ ಜಿಹಾದ್’ ಎಂಬ ಪದ ಬಳಸಿ ಸುವರ್ಣ ನ್ಯೂಸ್ ಚಾನಲ್ ವರದಿ ಮಾಡಿದ ಬಗ್ಗೆ ಚಾನಲ್ ನ ಮುಖ್ಯಸ್ಥ ರವಿ ಹೆಗಡೆಯವರಲ್ಲಿ ಫೋನ್ ಮಾಡಿ ಸ್ಪಷ್ಟೀಕರಣ ಕೇಳಿದಾಗ ‘ಆ ವಿಷಯ ನನ್ನ ಗಮನಕ್ಕೆ ಬರದೆ ಅಜಿತ ಹನುಮಕ್ಕನವರ್ ಎಂಬ ಪತ್ರಕರ್ತ ಅದನ್ನು ಪ್ರಕಟಿಸಿದ್ದಾರೆ’ ಎಂದೂ, ಈ ಪದವನ್ನು ನಾವು ಬಳಕೆ ಮಾಡುವುದಲ್ಲ ಬದಲಾಗಿ ಜನರು ಬಳಸುದನ್ನು ನಾವು ಅದನ್ನು ಪ್ರಕಟಿಸುವುದೆಂದು ಜನರ ಮೇಲೆ ಗೂಬೆ ಕೂರಿಸುವ ಪ್ರಯತ್ನಪಟ್ಟರು. ಆಗ ಚಾನಲ್ ನ ಮುಖ್ಯಸ್ಥರನ್ನು ತರಾಟೆಗೆ ತಗೊಂಡು ‘ಯಾಕೆ ಈ ರೀತಿ ಮಾಡುತ್ತೀರಿ’ ಎಂದು ಕೇಳಿದಾಗ ಅದು ಅಜಿತ್ ರವರು ಮಾಡಿದ ಕಾರ್ಯಕ್ರಮ ಅವರ ಜೊತೆಗೆ ಮಾತನಾಡಿ ಎಂದು ಹೇಳಿ ಜಾರಿಕೊಂಡರು.

ಪ್ರಚೋದನಾತ್ಮಕ ಪದ ಬಳಸಿ, ಬ್ರೇಕಿಂಗ್ ನ್ಯೂಸ್ ಕೊಟ್ಟು ಒಂದು ಸಮುದಾಯವನ್ನು ಗುರಿ ಮಾಡಿ ಅವರ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸವನ್ನು ವ್ಯವಸ್ಥಿತವಾಗಿ ಮಾಡುವ ಬಗ್ಗೆ ಹಾಗೂ ಮಾಧ್ಯಮಗಳಿಗೆ ಜವಾಬ್ದಾರಿ ಇದ್ದು ಸಮಾಜದಲ್ಲಿ ಅಶಾಂತಿಯನ್ನು ಹರಡುವ ಕೆಲಸವನ್ನು ಮಾಡಬಾರದೆಂದು ಮಾಧ್ಯಮಗಳಿಗೆ ಒತ್ತಾಯಿಸಿದರು.

ಕೋಮು ಭಾವನೆಗಳಿಗೆ ಧಕ್ಕೆ ತರುವಂತಹ ಪದಬಳಕೆ ಮಾಡಿ ಸಮಾಜದಲ್ಲಿ ಶಾಂತಿ ಹದಗೆಡಿಸಲು ಯತ್ನಿಸುವ ಇಂತಹ ಮಾಧ್ಯಮಗಳ ವಿರುದ್ಧ ಕೂಡಲೇ ಸರಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ತಾಹಿರ್ ಹುಸೇನ್ ಆಗ್ರಹಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group