ವಿದೇಶ ಸುದ್ದಿ

“ಕೋವಿಡ್-19 ಮಹಾಮಾರಿಯು ಸಲಿಂಗ ಮದುವೆಗೆ ದೇವರು ನೀಡಿದ ಶಿಕ್ಷೆ” ಎಂದಿದ್ದ ಚರ್ಚ್ ಮುಖ್ಯಸ್ಥರಿಗೆ ಕೊರೊನಾ

'God's punishment' for same-sex marriage

ವರದಿಗಾರ (ಸೆ.12): ಕೋವಿಡ್-19 ಮಹಾಮಾರಿಯು ಸಲಿಂಗ ಮದುವೆಗೆ ದೇವರು ನೀಡಿದ ಶಿಕ್ಷೆಯಾಗಿದೆ ಎಂದು ಈ ಮೊದಲು ಹೇಳಿಕೆ ನೀಡಿದ್ದ ಯುಕ್ರೇನ್‌ನ ಚರ್ಚ್ ಮುಖ್ಯಸ್ಥರಿಗೆ ಕೊರೊನಾ ವೈರಸ್ ತಗುಲಿದೆ.

ಯುಕ್ರೇನ್‌ನ ಸಾಂಪ್ರದಾಯಿಕ ಚರ್ಚ್ ಕೀವ್ ಪ್ಯಾಟ್ರಿಯಾರ್ಚೆಟ್‌ನ ಮುಖ್ಯಸ್ಥ ಪ್ಯಾಟ್ರಿಯಾರ್ಕ್ ಫಿಲ್‌ರೆಟ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಫಿಲರೆಟ್ ಅವರಿಗೆ ಕೊರೊನಾ-19 ಪಾಸಿಟಿವ್ ಬಂದಿದೆ ಎಂದು ಸೆ.4ರಂದು ಚರ್ಚ್ ಫೇಸ್‌ಬುಕ್‌ನಲ್ಲಿ ಘೋಷಿಸಿದೆ.
ಪ್ರತಿಯೊಬ್ಬರು ಪ್ಯಾಟ್ರಿಯಾರ್ಕ್ ಫಿಲಾರೆಟ್ ಪರ ಪ್ರೀತಿ ತೋರಿಸುತ್ತಿದ್ದು, ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿ ಬೆಂಬಲಿಸುತ್ತಿದ್ದಾರೆ. ಅವರ ಪ್ರಾರ್ಥನೆ ಹಾಗೂ ಪ್ರೀತಿಗಾಗಿ ಪ್ಯಾಟ್ರಿಯಾರ್ಕ್ ಫಿಲಾರೆಟ್ ಕೃತಜ್ಞರಾಗಿದ್ದಾರೆ ಎಂದು ಚರ್ಚ್ ಹೇಳಿಕೆ ನೀಡಿದೆ.

91 ವರ್ಷ ಪ್ರಾಯದ ಇವರು ಮಾರ್ಚ್ ನಲ್ಲಿ ಯುಕ್ರೇನಿನ ಟಿವಿ ಚಾನೆಲಲ್ಲಿ “ಕೊರೋನಾ ವೈರಸ್ ಸಲಿಂಗ ವಿವಾಹಕ್ಕೆ ದೇವರ ಶಿಕ್ಷೆ” ಎಂದು ಹೇಳಿ ಸುದ್ದಿಯಲ್ಲಿದ್ದರು.

ಇಂದು ಪ್ಯಾಟ್ರಿಯಾರ್ಕ್ ಫಿಲಾರೆಟ್ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ದಯಾಳು ಹಾಗೂ ಸರ್ವಶಕ್ತ ಆ ದೇವರು ಪವಿತ್ರ ಪ್ಯಾಟ್ರಿಯಾರ್ಕ್ ಫಿಲಾರೆಟ್ ಅವರನ್ನು ಅನಾರೋಗ್ಯದಿಂದ ಗುಣಪಡಿಸಲು ನೀವು ಪ್ರಾರ್ಥನೆ ಮುಂದುವರೆಸಿ ಎಂದು ಚರ್ಚ್ ಮನವಿ ಮಾಡಿದೆ.

ОФІЦІЙНО. Патріарх Філарет перебуває на лікуванніПовідомляємо, що у Святійшого Патріарха Київського і всієї…

Posted by Патріарх Філарет on Friday, September 4, 2020

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group