ರಾಷ್ಟ್ರೀಯ ಸುದ್ದಿ

786 ಟ್ಯಾಟೂ ಇದ್ದ ಕೈಯನ್ನೇ ಕತ್ತರಿಸಿದ ದುಷ್ಟರು: ಹರ್ಯಾಣದ ಪಾಣಿಪತ್ ನಲ್ಲಿ ಆಘಾತಕಾರಿ ಘಟನೆ

Source: TwoCircles.net

ವರದಿಗಾರ (ಸೆ. 12) ಕೈಯಲ್ಲಿ 786 ಟ್ಯಾಟೂ ಹಾಕಿಕೊಂಡಿದ್ದರಿಂದ ಗುಂಪೊಂದು ಮುಸ್ಲಿಂ ವ್ಯಕ್ತಿಯ ಕೈಯನ್ನೇ ಕಡಿದಿರುವ ಆಘಾತಕಾರಿ ಘಟನೆ ಹರ್ಯಾಣದ ಪಾಣಿಪತ್ ಎಂಬಲ್ಲಿ ನಡೆದಿದೆ. ವೃತ್ತಿಯಲ್ಲಿ ಕ್ಷೌರಿಕನಾಗಿರುವ 28 ವರ್ಷದ ಅಖ್ಲಾಕ್ ಕೈಕಳೆದುಕೊಂಡ ಮುಸ್ಲಿಂ ವ್ಯಕ್ತಿ. ಆಗಸ್ಟ್ 23ರಂದು ಪಾಣಿಪತ್ ನ ಶಹರಾನ್ ಪುರದಿಂದ 23 ಕಿ.ಮೀ.ದೂರದಲ್ಲಿರುವ ನನೌತಾ ಎಂಬ ತನ್ನ ಊರಿನಲ್ಲಿ ಯಾವುದೇ ಕೆಲಸ ಇಲ್ಲದ ಕಾರಣ ಪಾಣಿಪತ್ ಗೆ ಕೆಲಸ ಹುಡುಕಿಕೊಂಡು ಅಖ್ಲಾಕ್ ಬರುತ್ತಾನೆ.

ಲಾಕ್ ಡೌನ್ ನಿಂದ ನಮ್ಮ ಜೀವನ ನಿರ್ವಹಣೆ ಕಷ್ಟವಾಗಿತ್ತು ಎಂದು ಅಖ್ಲಾಕ್ ಅವರ ಸಹೋದರ ಇಕ್ರಮ್ ಹೇಳುತ್ತಾರೆ.
ಅಖ್ಲಾಕ್ ಅವರು ಪಾಣಿಪತ್ ತಲುಪುತ್ತಿದ್ದಂತೆ, ಅವರು ಕಿಶನ್ ಪುರ ಪ್ರದೇಶದಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆಯಲು ಕುಳಿತುಕೊಂಡಿದ್ದಾನೆ. ಅಲ್ಲಿಗೆ ಇಬ್ಬರು ವ್ಯಕ್ತಿಗಳು ಬಂದು ಅವನ ಹೆಸರನ್ನು ಕೇಳಿದ್ದಾರೆ. ಆತ ಹೆಸರು ಕೇಳಿದ ಕೂಡಲೇ ಅವರು ಅಖ್ಲಾಕ್ ಮೇಲೆ ಹಲ್ಲೆ ನಡೆಸಲು ಆರಂಭಿಸಿದರು. ನಂತರ ಅಖ್ಲಾಕ್ ಗಾಯಗೊಂಡ ಸ್ಥಿತಿಯಲ್ಲೇ ರಸ್ತೆಯಲ್ಲಿ ಓಡಿ ಹೋಗಿದ್ದಾನೆ.

ತುಂಬಾ ದೂರ ಓಡಿದ್ದರಿಂದ ಬಾಯಾರಿದ ಅಖ್ಲಾಕ್ ಸಮೀಪದ ಮನೆಯ ಬಾಗಿಲು ತಟ್ಟಿ ನೀರು ಕೇಳಿದ್ದಾನೆ, ಆದರೆ ಅವನಿಗೆ ಅಲ್ಲಿ ಆಶ್ಚರ್ಯ ಮತ್ತು ಆಘಾತ ಕಾದಿತ್ತು. ಮನೆಯಲ್ಲಿದ್ದ ವ್ಯಕ್ತಿಗಳು ಅವನನ್ನು ಒಳಗೆ ಎಳೆದುಕೊಂಡು ಹೋಗಿ ಮರದ ದೊಣ್ಣೆ, ಕೋಲುಗಳಿಂದ ಹೊಡೆಯಲು ಆರಂಭಿಸಿದರು. ದುರದೃಷ್ಟವೆಂದರೆ ಅಖ್ಲಾಕ್ ನೀರು ಕೇಳಿದ ಮನೆ, ಈ ಹಿಂದೆ ಅವನಿಗೆ ರಸ್ತೆಯಲ್ಲಿ ಹಲ್ಲೆ ನಡೆಸಿದವರ ಮನೆಯಾಗಿತ್ತು.
ಆ ಮನೆಯಲ್ಲಿ ನಾಲ್ವರು ಪುರುಷರು ಮತ್ತು ಇಬ್ಬರು ಮಹಿಳೆಯರಿದ್ದರು ಎಂದು ಅಖ್ಲಾಕ್ ತಿಳಿಸಿದ್ದಾರೆ.

ಅಖ್ಲಾಕ್ ಅವರ ಕೈಯ ಮೇಲೆ 786 ಎಂದು ಬರೆಯಲಾಗಿತ್ತು. ಇದನ್ನು ನೋಡಿದ ಅವರು ಇದು ನಿನ್ನ ಕೈಯಲ್ಲಿ ಇರಬಾರದು ಎಂದು ಆತನ ಬಲಗೈಯನ್ನು ಮರದ ದಿಮ್ಮಿ ಕತ್ತರಿಸಿರುವ ಯಂತ್ರದಲ್ಲಿ ಕತ್ತರಿಸಿದ್ದಾರೆ. ಮಾತ್ರವಲ್ಲ ತೀವ್ರ ತರದ ಹಲ್ಲೆ ನಡೆಸಿದ್ದಾರೆ. ಬಳಿಕ ಏನಾಯಿತು ಎಂಬುದು ಅಖ್ಲಾಕ್ ಗೆ ತಿಳಿದಿಲ್ಲ.

ಅಖ್ಲಾಕ್ ಗೆ 15 ವರ್ಷ ಇದ್ದಾಗಲೇ ಆತನ ಕೈಗೆ 786 ಸಂಖ್ಯೆಯ ಪಚ್ಚೆ ಹಾಕಲಾಗಿತ್ತು. ಇದು ದೇವರ ಹೆಸರು ಎಂಬ ನಂಬಿಕೆ ಎಂದು ಆತನ ಸಹೋದರ ಇಕ್ರಮ್ ಹೇಳುತ್ತಾರೆ. ಅಂದು ಸಂಜೆ 5 ಗಂಟೆಗೆ ಎಚ್ಚರಗೊಂಡಾಗ ಅಖ್ಲಾಕ್ ರೈಲ್ವೆ ನಿಲ್ದಾಣದ ಬಳಿಯ ರೈಲ್ವೆ ಹಳಿಯಲ್ಲಿ ಬಿದ್ದಿದ್ದ. ಬಳಿಕ ಅಲ್ಲಿನ ಸಿಬ್ಬಂದಿ ಆತನನ್ನು ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಹೋಗುತ್ತಾರೆ. ಬಳಿಕ ಪಾಣಿಪತ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಜಿಆರ್ ಪಿ ಪೊಲೀಸ್ ಅಧಿಕಾರಿ ಬಾಲವಾನ್ ಹಾಜರಾಗಿ ಹೇಳಿಕೆ ಪಡೆದುಕೊಂಡಿದ್ದಾರೆ. ಎಲ್ಲಾ ವಿಷಯವನ್ನು ಅಖ್ಲಾಕ್ ಹೇಳಿದ್ದಾರೆ. ಆದರೆ ಪೊಲೀಸರು ಇದನ್ನು ನಂಬಲು ಸಿದ್ಧರಿರಲಿಲ್ಲ, ಇದು ರೈಲು ಅಪಘಾತ ಎಂದು ಪೊಲೀಸರು ಹೇಳಿದ್ದಾರೆ.

ಹಲ್ಲೆ ನಡೆಸಿದವರು ಸೈನಿ ಸಮುದಾಯಕ್ಕೆ ಸೇರಿದವರು ಎಂಬುದು ಬಳಿಕ ಸಹೋದರ ಇಕ್ರಮ್ ಗೆ ಮನವರಿಕೆಯಾಗುತ್ತದೆ. ಈಗ ಅಖ್ಲಾಕ್ ನನ್ನು ನನೌತಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ.
ಪ್ರಕರಣವನ್ನು ಚಾಂಡಿಬಾಗ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಅವರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಿದ್ದಾರೆ ಎಂದು ಎಸ್ಐ ಬಾಲವಾನ್ ತಿಳಿಸಿದ್ದಾರೆ.

 

Source: TwoCircles.net

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group