ವರದಿಗಾರ ( ಸೆ.10 ): ಮಹತ್ವದ ಬೆಳವಣಿಗೆಯಲ್ಲಿ ಎಐಸಿಸಿ ಪುನರ್ ರಚನೆ ಮಾಡಲಾಗಿದ್ದು, ಕರ್ನಾಟಕ ಕಾಂಗ್ರೆಸ್ ನೂತನ ಉಸ್ತುವಾರಿಯಾಗಿ ‘ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ನೇಮಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ.
ವೇಣುಗೋಪಾಲ್ ಸ್ಥಾನಕ್ಕೆ ರಣದೀಪ್ ಸಿಂಗ್ ನೇಮಕವಾಗಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಗುಲಾಂ ನಬಿ ಅಜಾದ್ ಕೈಬಿಡಲಾಗಿದೆ. ಮಹಾರಾಷ್ಟ್ರ ಉಸ್ತುವಾರಿಯಾಗಿ ಹೆಚ್ ಕೆ ಪಾಟೀಲ್ ನೇಮಕಗೊಂಡಿದ್ದರೆ, ತಮಿಳುನಾಡು, ಪುದುಚೇರಿ ಉಸ್ತುವಾರಿಯಾಗಿ ದಿನೇಶ್ ಗುಂಡೂರಾವ್ ಅವರಿಗೆ ಜವಾಬ್ದಾರಿ ನೀಡಲಾಗಿದೆ.
