ರಾಜ್ಯ ಸುದ್ದಿ

“ಎಸ್.ಡಿ.ಪಿ.ಐ ಕಚೇರಿಯಲ್ಲಿ ಮಾರಕಾಸ್ತ್ರಗಳು ಪತ್ತೆ” ಎಂಬ ಸುಳ್ಳು ಸುದ್ದಿ ಹರಡಿದ ಮಾಧ್ಯಮಗಳ ಮೇಲೆ ಕೇಸು ದಾಖಲಿಸಲು ತೀರ್ಮಾನಿಸಿದ ಎಸ್.ಡಿ.ಪಿ.ಐ

SDPI

ಬೆಂಗಳೂರಿನ ಡಿಜೆ ಹಳ್ಳಿ,ಕೆಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆಯ ಭಾಗವಾಗಿ ಎಸ್.ಡಿ.ಪಿ.ಐ ಕಚೇರಿಗಳ ಪರಿಶೋಧನೆ ನಡೆಸಿರುವುದನ್ನು ಕೆಲವು ಮಾಧ್ಯಮಗಳು “ಎಸ್.ಡಿ.ಪಿ.ಐ ಕಚೇರಿ ಮೇಲೆ ದಾಳಿ,ಮಾರಕಾಸ್ತ್ರಗಳು ಪತ್ತೆ” ಎಂಬ ಕಪೋಲಕಲ್ಪಿತ ಸುಳ್ಳು ವರದಿಯನ್ನು ಬಿತ್ತರಿಸಿದ್ದವು. ಆದರೆ ಕಚೇರಿಯಲ್ಲಿ ಅಂತಹ ಯಾವುದೇ ವಸ್ತುಗಳು ಪತ್ತೆಯಾಗಿರುವುದಿಲ್ಲ ಹಾಗೂ ಪೋಲೀಸರು ನೀಡಿರುವ ಮಹಜರು ಮತ್ತು ಪರಿಶೋಧನೆಯ ಪಂಚನಾಮೆಯಲ್ಲಿ ಕೂಡ ಮಾರಕಾಸ್ತ್ರಗಳ ಉಲ್ಲೇಖವು ಕಂಡು ಬರುವುದಿಲ್ಲ.

ಎಸ್ಡಿಪಿಐ ಪಕ್ಷದ ವಿರುದ್ಧ ಅಪಪ್ರಚಾರ ನಡೆಸಲು ಹಾತೊರೆಯುತ್ತಿರುವ ಕೆಲವು ಮಾಧ್ಯಮಗಳು ನಿರಂತರವಾಗಿ ಪಕ್ಷವನ್ನು ಗುರಿಯಾಗಿಸಿಕೊಂಡು ಸುಳ್ಳು ಸುದ್ದಿ ಹಬ್ಬಿಸುವ ಪ್ರಯತ್ನವನ್ನು ಮಾಡುತ್ತಿವೆ. ಕೆಲ ರಾಜಕೀಯ ಪಕ್ಷಗಳ ಒತ್ತಾಸೆ ಮತ್ತು ನಿರ್ದಿಷ್ಟ ಪೂರ್ವಾಗ್ರಹಗಳಿಂದ ಎಸ್ಡಿಪಿಐಯನ್ನು ಗುರಿಪಡಿಸಿ ಸಮಾಜದ ದಾರಿ ತಪ್ಪಿಸಲು ಅವುಗಳು ಮಗ್ನವಾಗಿವೆ. ಇದೀಗ ಇಂತಹ ಮಾಧ್ಯಮಗಳ ಮೇಲೆ ಕೇಸು ದಾಖಲಿಸಿ ಕಾನೂನು ಹೋರಾಟವನ್ನು ನಡೆಸಲು ಎಸ್ಡಿಪಿಐ ಪಕ್ಷವು ಇತ್ತೀಚೆಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ರಾಜ್ಯಾಧ್ಯಕ್ಷರಾದ ಇಲ್ಯಾಸ್ ಮುಹಮ್ಮದ್ ತುಂಬೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group