ರಾಷ್ಟ್ರೀಯ ಸುದ್ದಿ

ಬೃಹತ್ ರಾಜಕೀಯ ಸಮಾರಂಭದಲ್ಲಿ “ಕೊರೊನಾ ಹೋಗಿದೆ” ಎಂದು ಘೋಷಿಸಿದ ಬಿಜೆಪಿ ನಾಯಕ

Dilip Ghosh

ದೇಶದಲ್ಲಿ ಕೊರೊನಾ ಪ್ರಕರಣ 45 ಲಕ್ಷ ದಾಟಿದ ದಿನವೇ ಬಿಜೆಪಿ ಮುಖಂಡನಿಂದ ವಿಲಕ್ಷಣ ಹೇಳಿಕೆ

ವರದಿಗಾರ (ಸೆ.11) ದೇಶದಲ್ಲಿ ಒಂದೇ ದಿನದಲ್ಲಿ ದಾಖಲೆಯ 96,551 ಕೊರೊನಾ ಸೋಂಕು ಪ್ರಕರಣ ದಾಖಲಾದ ದಿನವೇ ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ದಿಲೀಪ್ ಘೋಷ್, ರಾಜಕೀಯ ಸಮಾರಂಭವೊಂದರಲ್ಲಿ ಕೊರೊನಾ ಹೋಗಿದೆ, ಇವೆಲ್ಲವೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ನಾಟಕ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವುದರಿಂದ ಮುಖ್ಯಮಂತ್ರಿ ತೃಣಮೂಲ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರಚಾರವನ್ನೂ ಆರಂಭಸಿದೆ.
“ಕೊರೊನಾ ಹೊರಟೋಗಿದೆ’. ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಮುಂಚಿತವಾಗಿ ಬಿಜೆಪಿಯ ಸಭೆ ಸಮಾರಂಭಗಳನ್ನು ನಿರ್ಬಂಧಿಸುವ ಏಕೈಕ ಉದ್ದೇಶಕ್ಕಾಗಿ ಮಮತಾ ಬ್ಯಾನರ್ಜಿ ಅವರು ಸುಮ್ಮನೆ ಕೊರೊನಾ ಇದೆ ಎಂದು ನಟಿಸುತ್ತಿದ್ದಾರೆ ಎಂದು ದಿಲೀಪ್ ಘೋಷ್ ಆರೋಪಿಸಿದ್ದಾರೆ.

“ಕರೋನಾ ಚೋಲ್ ಗೆಚೆ (ಕೊರೊನಾವೈರಸ್ ಹೋಗಿದೆ), ದೀದಿ ಮೋನಿ (ಮಮತಾ ಬ್ಯಾನರ್ಜಿ) ಕೇವಲ ನಟಿಸುತ್ತಿದ್ದಾರೆ ಮತ್ತು ಲಾಕ್ ಡೌನ್ ಘೋಷಿಸುತ್ತಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಸಭೆ ಮತ್ತು ಸಮಾರಂಭ ನಡೆಸಬಾರದು ಎಂಬ ಉದ್ದೇಶದಿಂದ ಮಮತಾ ಇದನ್ನು ಮಾಡುತ್ತಿದ್ದಾರೆ. ಆದರೆ ಯಾರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಧನಿಯಖಾಲಿಯಲ್ಲಿ ಗುರುವಾರ ನಡೆದ ರಾಲಿಯನ್ನು ಉದ್ದೇಶಿಸಿ ಹೇಳಿದರು.

ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 45 ಲಕ್ಷ ದಾಟಿದ ದಿನವೇ ಅವರು ಈ ಹೇಳಿಕೆ ನೀಡಿದ್ದಾರೆ. ಅದೇ ದಿನ 96,551 ಹೊಸ ಸೋಂಕ ಪ್ರಕರಣಗಳು ಮತ್ತು 1,209 ಸಾವು ಕೂಡ ಸಂಭವಿಸಿತ್ತು. ಬಂಗಾಳದಲ್ಲಿಯೂ ಸುಮಾರು 2 ಲಕ್ಷ ಸೋಂಕು ಪ್ರಕರಣ ಮತ್ತು 3,700 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಕೂಡ ಕೊರೊನಾ ವೈರಸ್ ಅನ್ನು ಲಘುವಾಗಿ ಪರಿಗಣಿಸಬಾರದು ಮತ್ತು ಮುಖಗವಸುಗಳನ್ನು ಧರಿಸಬೇಕು. ವಿಜ್ಞಾನಿಗಳು ಲಸಿಕೆ ಅಭಿವೃದ್ಧಿಪಡಿಸುವವರೆಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ನಿಯಮಗಳನ್ನು ಪಾಲಿಸಬಾರದು ಎಂದು ದೇಶದ ಜನರಿಗೆ ಮನವಿ ಮಾಡಿದ್ದರು. ಆದರೆ ಅವರದೇ ಪಕ್ಷದ ನಾಯಕನೊಬ್ಬ ಇದಕ್ಕೆ ವ್ಯತಿರಿಕ್ತವಾಗಿ ಕೊರೊನಾ ಇಲ್ಲ ಎಂದು ಹೇಳಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group