ರಾಷ್ಟ್ರೀಯ ಸುದ್ದಿ

ಬಕ್ರೀದ್ ಗೆ ಪ್ರಾಣಿಬಲಿ ನೀಡುವುದು ಹರಾಂ- RSSನ ಮುಸ್ಲಿಂ ವಿಂಗ್ MRM ವಿವಾದಾಸ್ಪದ ಹೇಳಿಕೆ

ವರದಿಗಾರ-ನವದೆಹಲಿ: ಮುಸ್ಲಿಮರ ಬಕ್ರೀದ್ (ಈದ್ ಉಲ್ ಅದಾ) ಹಬ್ಬದಂದು ಪ್ರಾಣಿಬಲಿ ನೀಡುವುದು ಸರಿಯಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಸ್ಲಿಂ ಅಂಗವಾಗಿರುವ ಮುಸ್ಲಿಂ ರಾಷ್ಟ್ರೀಯ ಮಂಚ್ ವಿವಾದಾಸ್ಪದ ಹೇಳಿಕೆಯನ್ನು ನೀಡಿದೆ.

ವಿಶ್ವ ಸಂವಾದ ಕೇಂದ್ರದಲ್ಲಿಂದು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ, MRM ನ ಉತ್ತರ ಪ್ರದೇಶದ ಸಹ ಸಂಯೋಜಕರಾದ ಖುರ್ಶಿದ್ ಆಗಾ  ಮಾತನಾಡುತ್ತಾ,  ಹಬ್ಬದ ದಿನದಂದು ಕುರ್ಬಾನಿ (ಪ್ರಾಣಿ ಬಲಿ) ಮಾಡುವುದಕ್ಕೆ ಇಸ್ಲಾಂ ನಲ್ಲಿ ಅನುಮತಿ ಇಲ್ಲ. ಹಾಗಿರುವಾಗ ಯಾಕಾಗಿ ಪ್ರಾಣಿ ಬಲಿ ನೀಡಲಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಕುರ್ಬಾನಿಯ ಬಗ್ಗೆ ಸಮಾಜದಲ್ಲಿ ಅಂಧ ವಿಶ್ವಾಸ ಹರಡಿದೆ. ಮುಸ್ಲಿಮರು ತಮ್ಮನ್ನು ತಾವು ಅಲ್ಲಾಹನ ದಾಸರು ಎಂದು ಭಾವಿಸುತ್ತಾರೆ. ಆದರೆ ಅಲ್ಲಾಹನ ಮಾರ್ಗದಲ್ಲಿ ನಡೆಯುವ ಭ್ರಮೆಯಲ್ಲಿದ್ದಾರೆ ಅಷ್ಟೇ ಎಂದರು.

MRM ನ ಅವಧ್ ಪ್ರಾಂತ್ಯದ ಸಂಯೋಜಕರಾದ ಸಯ್ಯದ್ ಹಸನ್ ಕೌಸರ್ ಮಾತನಾಡುತ್ತಾ,  ಕುರ್ಬಾನಿ ನೀಡುವುದು ಹರಾಂ ಎಂದು ಹೇಳಿದ್ದಾರೆ.

ಕಳೆದ ಆಗಷ್ಟ್ 22 ರಂದು RSSನ ಮುಸ್ಲಿಂ ವಿಂಗ್ ಆಗಿರುವ MRM ವತಿಯಿಂದ ನಡೆದ ಸಮಾರಂಭದಲ್ಲಿ MRM ಮುಸ್ಲಿಂ ಸದಸ್ಯರು ಬಕ್ರೀದ್ ನಂದು ಕುರ್ಬಾನಿ ಮಾಡುವುದಿಲ್ಲ ಎಂದು ಶಪಥ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ ಆರೆಸ್ಸೆಸ್ಸಿನ ತಾಳಕ್ಕೆ ತಕ್ಕಂತೆ ಕುಣಿಯುವ MRM ಸದಸ್ಯರ ಹೇಳಿಕೆಯೂ ಆರೆಸ್ಸೆಸ್ಸಿನ ಮೂಲಗಳಿಂದಲೇ ಬಂದಿರುವಂತಹದ್ದು ಎನ್ನುವುದಕ್ಕೆ ಹಲವಾರು ನಿದರ್ಶನಗಳು ಈ ಹಿಂದೆಯೂ ವರದಿಯಾಗಿತ್ತು. ಕಳೆದ ಬಕ್ರೀದ್ ಸಂದರ್ಭದಲ್ಲಿ ಕೇಕಿನಿಂದ ತಯಾರಿಸಿದ ಆಡನ್ನು ಬಲಿ ಕೊಡಬೇಕೆಂದು MRM ನ ಸದಸ್ಯರು ಹೇಳಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group