ವರದಿಗಾರ (ಸೆ.11): ಪ್ರತಿ ದಿನವೂ ನಾನು ಗೋಮೂತ್ರ ಸೇವಿಸುತ್ತಿರುವುದಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿಕೊಂಡಿದ್ದಾರೆ.
ಇತ್ತೀಚಿಗೆ ‘ಮ್ಯಾನ್ ವರ್ಸಸ್ ವೈಲ್ಡ್’ ಖ್ಯಾತಿಯ ವನ್ಯಜೀವಿ ಸಾಹಸ ನಿರ್ದೇಶಕ ಬೇರ್ ಗ್ರಿಲ್ಸ್, ಅಕ್ಷಯ ಕುಮಾರ ಮತ್ತು ‘ಬೆಲ್ ಬಾಟಮ್’ಚಿತ್ರದಲ್ಲಿ ಅವರ ಸಹನಟಿ ಹುಮಾ ಕುರೇಶಿ ಅವರು ಇನ್ಸ್ಟಾಗ್ರಾಂ ಲೈವ್ ಸೆಷನ್ನಲ್ಲಿ ಜೊತೆಯಾಗಿದ್ದರು. ಚಾಟ್ ವೇಳೆ ಅಕ್ಷಯ ಮತ್ತು ಗ್ರಿಲ್ಸ್ ಕಳೆದ ಜನವರಿಯಲ್ಲಿ ಮೂರು ದಿನಗಳ ಕಾಲ ಬಂಡಿಪುರ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ರಕ್ಷಿತಾರಣ್ಯದಲ್ಲಿ ಸಾಕ್ಷಚಿತ್ರ ಶೂಟಿಂಗ್ನಲ್ಲಿ ತಾವು ಪಾಲ್ಗೊಂಡಿದ್ದ ಬಗ್ಗೆ ಮಾತನಾಡಿದ್ದರು. ಈ ಸಂದರ್ಭ ಹುಮಾ,ಸಾಕ್ಷಚಿತ್ರದ ಪ್ರೊಮೋದಲ್ಲಿ ಅವರು ಆನೆಯ ಲದ್ದಿಯ ಚಹಾ ಸೇವಿಸಿದ್ದ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಅಕ್ಷಯ,‘ಇದೇನೂ ನನಗೆ ದೊಡ್ಡ ವಿಷಯವಲ್ಲ. ಆಯುರ್ವೇದ ಕಾರಣಗಳಿಂದಾಗಿ ನಾನು ಪ್ರತಿದಿನವೂ ಗೋಮೂತ್ರವನ್ನು ಸೇವಿಸುತ್ತೇನೆ’ಎಂದು ಹೇಳಿದ್ದಾರೆ.
