ವರದಿಗಾರ (ಸೆ.11): ಮಂಡ್ಯದ ಶ್ರೀಅರ್ಕೇಶ್ವರ ದೇವಾಲಯದ ಪ್ರಾಂಗಣದಲ್ಲಿ ಮಲಗಿದ್ದ ಮೂವರು ಅರ್ಚಕರನ್ನು ಹತ್ಯೆ ಮಾಡಿ ಹುಂಡಿಯ ಹಣವನ್ನು ದೋಚಿರುವ ಘಟನೆ ನಡೆದಿದೆ.
ಗಣೇಶ್ (35), ಪ್ರಕಾಶ್ (36) ಮತ್ತು ಆನಂದ್ (33) ಹತ್ಯೆಯಾದ ಅರ್ಚಕರು. ಅವರು ದೇವಾಲಯದ ಅರ್ಚಕರು ಮತ್ತು ಕಾವಲುಗಾರರಾಗಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ದೇವರ ಪೂಜೆಯ ಉಸ್ತುವಾರಿ ಜೊತೆಗೆ ದೇವಾಲಯದ ಕಾವಲು ಕಾಯುತ್ತಿದ್ದರು.
ಇಂದು ಬೆಳಗ್ಗೆ ಬೇರೆ ಅರ್ಚಕರೊಬ್ಬರು ದೇವಾಲಯಕ್ಕೆ ಬಂದಾ ಪ್ರಕರಣ ಬೆಳಕಿಗೆ ಬಂದಿದೆ.
ವಿಷಯ ತಿಳಿದ ತಕ್ಷಣ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
