ರಾಷ್ಟ್ರೀಯ ಸುದ್ದಿ

ಎಸ್ ಡಿಪಿಐ ಕಾರ್ಯಕರ್ತ ಸಯ್ಯದ್ ಸಲಾಹುದ್ದೀನ್ ಹತ್ಯೆ ಪ್ರಕರಣ: ಮೂವರು ಆರೆಸ್ಸೆಸ್ ಕಾರ್ಯಕರ್ತರ ಬಂಧನ; ಇನ್ನಷ್ಟು ಆರೋಪಿಗಳಿಗಾಗಿ ಶೋಧ

ವರದಿಗಾರ (ಸೆ.11): ಕಣ್ಣೂರಿನಲ್ಲಿ ಮಂಗಳವಾರ ಹತ್ಯೆಯಾದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ –ಎಸ್ ಡಿಪಿಐ ಕಾರ್ಯಕರ್ತ ಸಲಾಹುದ್ದೀನ್ ಹತ್ಯೆಗೆ ಸಂಬಂಧಿಸಿ ಮೂವರು ಆರ್ ಎಸ್ಎಸ್ ಕಾರ್ಯಕರ್ತರನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ.

ಸಹೋದರಿಯರೊಂದಿಗೆ ಮನೆಗೆ ಹಿಂದಿರುಗುತ್ತಿದ್ದ ಸಯ್ಯದ್ ಸಲಾಹುದ್ದೀನ್ (30) ಎಂಬವರನ್ನು ಕಣ್ಣೂರಿನ ಕೊಲಯಾಡ್ ಎಂಬಲ್ಲಿ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿತ್ತು. ಕೊಲೆ ಆರೋಪಿಗಳಾದ ಕಣ್ಣೂರಿನ ಚಿತ್ತರಿಪರಂಬದ ನಿವಾಸಿಗಳಾದ ಎಂ.ಅಮಲ್ ರಾಜ್ (22), ಪ್ರಬಿನ್ ಪಿ.ಕೆ. (23) ಹಾಗೂ ಅಸಿಕಲಾ ಎಂ. (25) ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಈ ಮೂವರು ನೇರವಾಗಿ ಹತ್ಯೆಯಲ್ಲಿ ಪಾಲ್ಗೊಂಡಿರಲಿಲ್ಲ, ಆದರೆ ಕೊಲೆಗಾರರಿಗೆ ಸಹಾಯ ಮಾಡಿದ್ದರು. ಈ ಹತ್ಯೆಯಲ್ಲಿ ಇನ್ನಷ್ಟು ಜನರು ಭಾಗಿಯಾಗಿದ್ದಾರೆ. ಒಂದೆರಡು ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಸಲಾಹುದ್ದೀನ್ ತಮ್ಮ ಸಹೋದರಿಯರೊಂದಿಗೆ ಕಾರಿನಲ್ಲಿ ಬರುತ್ತಿದ್ದಾಗ, ಹಿಂದಿನಿಂದ ಬೈಕೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ತಕ್ಷಣ ಕಾರು ನಿಲ್ಲಿಸಿ ಸಹಾಯಕ್ಕಾಗಿ ಕಾರಿನಿಂದ ಇಳಿದ ಸಲಾಹುದ್ದೀನ್ ರನ್ನು ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿತ್ತು. ಸಹೋದರನನ್ನು ರಕ್ಷಿಸಲು ಮುಂದಾದ ಸಹೋದರಿ ರಾಶಿದಾ ಅವರಿಗೂ ಆರೋಪಿಗಳು ಬೆದರಿಸಿ ಹಲ್ಲೆ ನಡೆಸಿದ್ದರು. ಅವರಿಗೂ ಸಣ್ಣ ಪ್ರಮಾಣದ ಗಾಯಗಳಾಗಿವೆ. ಸಲಾಹುದ್ದೀನ್ ತಲೆ, ಕತ್ತಿಗೆ ಗಂಭೀರ ಗಾಯಗಳಾಗಿ, ತೀವ್ರ ರಕ್ತಸ್ರಾವವಾಗಿತ್ತು.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ತಕ್ಷಣ ಸ್ಥಳೀಯರು ತಲಶ್ಯೇರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ ಅವರು ಮೃತಪಟ್ಟಿದ್ದಾರೆೆ.

ಆರ್‌ಎಸ್‌ಎಸ್ ಮತ್ತು ಬಿಜೆಪಿ ಗ್ಯಾಂಗ್‌ ಸಲಾಹುದ್ದೀನ್ ಅವರನ್ನು ಹತ್ಯೆ ಮಾಡಿದೆ. ಸಲಾಹುದ್ದೀನ್ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದವರು. ಸಂಘ ಪರಿವಾರಕ್ಕೆ ಈ ಮೇಲೆ ಕುಟುಂಬದ ಮೇಲೆ ದ್ವೇಷವಿತ್ತು… 2018 ರಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣದಲ್ಲಿ ಸುಳ್ಳು ಆರೋಪದಡಿ ಸಲಾಹುದ್ದೀನ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಫೈಝಿ ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group