ರಾಷ್ಟ್ರೀಯ ಸುದ್ದಿ

ಸಿದ್ಧಾಂತ ಮಾರಿಕೊಂಡು “ಸೋನಿಯಾ ಸೇನೆ” ಆಗಲು ಮುಂದಾದ ಶಿವಸೇನೆ: ಕಂಗನಾ ರಾಣಾವತ್ ವ್ಯಂಗ್ಯ

ವರದಿಗಾರ (ಸೆ.10): ಮುಂಬೈನ ಬಾಂದ್ರಾದ ಪಾಲಿ ಹಿಲ್ ನಲ್ಲಿರುವ ತನ್ನ ಬಂಗಲೆಯ ಒಂದು ಭಾಗವನ್ನು ಬುಧವಾರ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ -ಬಿಎಂಸಿ ನೆಲಸಮಗೊಳಿಸಿದ ನಂತರ ಶಿವಸೇನೆ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಬಾಲಿವುಡ್ ನಟ ಕಂಗನಾ ರಾಣಾವತ್ ಇಂದು ಕೂಡ ಶಿವಸೇನೆ ವಿರುದ್ಧ ಹರಿಹಾಯ್ದಿದಿದ್ದಾರೆ.

ಬಾಲಿವುಡ್ ನಟಿ ಕಂಗನಾ ಗುರುವಾರ ಶಿವಸೇನೆ ವಿರುದ್ಧ ವಾಗ್ದಾಳಿ ನಡೆಸಿ, ಅಧಿಕಾರಕ್ಕಾಗಿ ತನ್ನ ಸಿದ್ಧಾಂತವನ್ನು ಮಾರಿಕೊಳ್ಳಲು ಮುಂದಾಗಿರುವ ಶಿವಸೇನೆ “ಸೋನಿಯಾ ಸೇನೆ” ಆಗಲು ಸಿದ್ಧವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಮುಂಬೈನಲ್ಲಿರುವ ತನ್ನ ಕಚೇರಿಯನ್ನು ಭಾಗಶಃ ಧ್ವಂಸಗೊಳಿಸಿದ ಬಿಎಂಸಿಯ ಅಧಿಕಾರಿಗಳನ್ನು ಅವರು “ಗೂಂಡಾಗಳು” ಎಂದು ಕರೆದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆಗಳಲ್ಲಿ ಸೋತ ನಂತರ ಶಿವಸೇನೆ ನಾಚಿಕೆಯಿಲ್ಲದೆ ಮಿಲಾವತ್ ಸರ್ಕಾರ ರಚಿಸಿ ಸೋನಿಯಾ ಸೇನೆ ಕಡೆಗೆ ತಿರುಗಿದೆ ಬಾಲಿವುಡ್ ನಟಿ ಕಂಗನಾ ಮತ್ತೊಂದು ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.
ನಿಮ್ಮ ತಂದೆಯ ಒಳ್ಳೆಯ ಕಾರ್ಯಗಳು ನಿಮಗೆ ಸಂಪತ್ತನ್ನು ಮಾತ್ರ ನೀಡಬಲ್ಲವು, ಆದರೆ ಗೌರವವನ್ನು ನೀವೇ ಗಳಿಸಿಕೊಳ್ಳಬೇಕು. ನೀವು ಎಷ್ಟು ಬಾಯಿಗಳನ್ನು ಮುಚ್ಚಿಸುತ್ತೀರಿ? ಎಷ್ಟು ಧ್ವನಿಗಳನ್ನು ನಿಗ್ರಹಿಸುತ್ತೀರಿ? ಎಷ್ಟು ದಿನ ನೀವು ಸತ್ಯದಿಂದ ದೂರ ಓಡುತ್ತೀರಿ ಎಂದು ಕಂಗನಾ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group