ರಾಷ್ಟ್ರೀಯ ಸುದ್ದಿ

ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಬ್ಯಾಂಕ್ ಖಾತೆಯಿಂದ 6 ಲಕ್ಷ ವಂಚನೆ; ನಕಲಿ ಚೆಕ್ ಮೂಲಕ ಹಣ ಡ್ರಾ

ವರದಿಗಾರ (ಸೆ.10): ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಬ್ಯಾಂಕ್ ಖಾತೆಯಿಂದ 6 ಲಕ್ಷ ರೂ.ಗಳನ್ನು ನಕಲಿ ಚೆಕ್ ಗಳ ಮೂಲಕ ಡ್ರಾ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಟ್ರಸ್ಟ್ ಅಧಿಕಾರಿಗಳು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಮೊದಲು ಪೊಲೀಸರು, ರಾಮ ಮಂದಿರ ನಿರ್ಮಾಣ ಹೆಸರಿನಲ್ಲಿ ಮೀರತ್ ಹಾಗೂ ಇನ್ನಿತರರ ಸ್ಥಳಗಳಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದ ಕೆಲವರನ್ನು ಬಂಧಿಸಿದ್ದರು. ಈಗ ಟ್ರಸ್ಟ್ ಖಾತೆಯಿಂದ ದೊಡ್ಡ ಮೊತ್ತವನ್ನು ಡ್ರಾ ಮಾಡಿಕೊಳ್ಳಲಾಗಿದೆ.

ನಕಲಿ ಚೆಕ್ ಮೂಲಕ ಎರಡು ಬಾರಿ ಆರು ಲಕ್ಷ ರೂಪಾಯಿ ಹಣ ಹಿಂಪಡೆದುಕೊಂಡಿದ್ದಾರೆ. ಮೊದಲು 2.5 ಲಕ್ಷ, ಎರಡನೇ ಬಾರಿ 3.5 ಲಕ್ಷ ಹಣವನ್ನು ಲಕ್ನೋದ ಬ್ಯಾಂಕ್ ಶಾಖೆಯೊಂದರಿಂದ ಹಣ ಹಿಂಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಕರಣವನ್ನು ಸೈಬರ್ ಅಪರಾಧಗಳ ತನಿಖೆ ನಡೆಸುವ ಸೈಬರ್ ವಿಭಾಗಗಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ.
ಟ್ರಸ್ಟ್ ಖಾತೆಯಿಂದ ವಂಚಕರು ಹಣ ಹಿಂಪಡೆದುಕೊಂಡಿರುವುದನ್ನು ದೃಢಪಡಿಸಿರುವ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಲಕ್ನೋದ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ 9.86ಲಕ್ಷರೂ ಹಣ ಹಿಂಪಡೆಯಲು ವಂಚಕರು ಮೂರನೇ ನಕಲಿ ಚೆಕ್ ಸಲ್ಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ ಎಂದು ವಿವರಿಸಿದ್ದಾರೆ.

ಇಷ್ಟೊಂದು ದೊಡ್ಡ ಮೊತ್ತದ ಹಣ ಹಿಂಪಡೆಯುತ್ತಿರುವ ಅಂಶ ಖಚಿತ ಪಡಿಸಿಕೊಳ್ಳಲು ಬ್ಯಾಂಕ್ ಅಧಿಕಾರಿಗಳು ಟ್ರಸ್ಟ್ ಗೆ ಕರೆ ಮಾಡಿದಾಗ ಈ ವಂಚನೆ ನಮ್ಮ ಗಮನಕ್ಕೆ ಬಂದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ನಂತರ ಟ್ರಸ್ಟ್ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಎರಡು ನಕಲಿ ಚೆಕ್ ಮೂಲಕ ಈಗಾಗಲೇ 6 ಲಕ್ಷರೂ ಹಣ ಹಿಂಪಡೆದಿರುವುದು ಕಂಡು ಬಂದಿದೆ ಎಂದು ವಿವರಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group