ವರದಿಗಾರ (ಸೆ.9): ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮಧ್ಯಪ್ರದೇಶದ ಬಿಜೆಪಿ ಕ್ಯಾಬಿನೆಟ್ ಸಚಿವ ತುಳಸಿ ಸಿಲಾವತ್ ಅವರು ಬೃಹತ್ ಧಾರ್ಮಿಕ ಯಾತ್ರೆ ( ಕಳಾಶ್ ಯಾತ್ರೆ) ಹಮ್ಮಿಕೊಂಡ ಘಟನೆ ಮಂಗಳವಾರ ನಡೆದಿದೆ.
ಈ ಸಂಬಂಧ ವಿಡಿಯೋ ವೈರಲ್ ಆಗಿದ್ದು, ನೂರಾರು ಮಂದಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮೆರವಣಿಗೆ ಮಾಡುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ಸಾಗರ್ನ ಹಳ್ಳಿಯೊಂದರಲ್ಲಿ ಈ ಮೆರವಣಿಗೆ ನಡೆದಿದೆ. ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಸೇರಿ ನರ್ಮದಾ ದೇವಿಯನ್ನು ಪೂಜಿಸುತ್ತಿರುವುದು ಕಂಡುಬಂದಿದೆ.
ರಾಜ್ಯ ಜಲಸಂಪನ್ಮೂಲ ಸಚಿವರಾಗಿರುವ ತುಳಸಿ ಸಿಲಾವತ್ ಮತ್ತು ಅವರ ಪತ್ನಿಗೆ ಜುಲೈನಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಬಳಿಕ ಆಗಸ್ಟ್ ತಿಂಗಳಲ್ಲಿ ಅವರಿಬ್ಬರೂ ಚೇತರಿಸಿಕೊಂಡಿದ್ದರು. ಜ್ಯೋತಿರಾದಿತ್ಯ ಸಿಂಧಿಯಾ ಅವರ ನಿಷ್ಠಾವಂತರಾಗಿರುವ ಸಿಲಾವತ್ ಅವರು ಕಮಲ್ ನಾಥ್ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದರು. ಇತರ 21 ಕಾಂಗ್ರೆಸ್ ಶಾಸಕರೊಂದಿಗೆ ರಾಜೀನಾಮೆ ನೀಡಿ ಮಾರ್ಚ್ ನಲ್ಲಿ ಬಿಜೆಪಿಗೆ ಸೇರಿದ್ದರು, ಪರಿಣಾಮ ಕಮಲ್ ನಾಥ್ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ನಂತರ ಬಿಜೆಪಿ ಸರ್ಕಾರದಲ್ಲಿ ಅವರನ್ನು ಜಲಸಂಪನ್ಮೂಲ ಸಚಿವರನ್ನಾಗಿ ಮಾಡಲಾಗಿತ್ತು.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ಚೇತರಿಸಿಕೊಂಡ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಚೌಹಾಣ್ ಗೆ ಸೋಂಕು ಬರುವ ಒಂದೆರಡು ದಿನಗಳ ಮೊದಲು ರಾಜ್ಯ ಸಹಕಾರ ಸಚಿವ ಅರವಿಂದ್ ಸಿಂಗ್ ಭಡೋರಿಯಾ ಅವರೂ ಕೂಡ ಕೊರೊನಾವೈರಸ್ ಸೋಂಕಿಗೆ ಒಳಗಾಗಿದ್ದರು.
ಇಂದೋರ್ ನಲ್ಲಿ ಹೊಸದಾಗಿ 295 ಸೋಂಕುಗಳನ್ನು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 15,165 ಕ್ಕೆ ತಲುಪಿದೆ. ಮಧ್ಯಪ್ರದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 77,323ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 1309 ತಲುಪಿದೆ. ಇಂತಹ ವೇಳೆಯಲ್ಲೇ ಬಿಜೆಪಿ ಈ ಕಾರ್ಯಕ್ರಮ ಏರ್ಪಡಿಸಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಮಧ್ಯಪ್ರದೇಶದಲ್ಲಿ ಒಟ್ಟು ಕರೋನವೈರಸ್ ಪ್ರಕರಣಗಳ ಸಂಖ್ಯೆ 77,323 ಕ್ಕೆ ಏರಿದೆ ಮತ್ತು ಸಾವಿನ ಸಂಖ್ಯೆ 1,609 ಕ್ಕೆ ತಲುಪಿದೆ. ಮಂಗಳವಾರ 1,864 ಹೊಸ ಸಿಒವಿಐಡಿ -19 ಪ್ರಕರಣ ಮತ್ತು 20 ಸಾವುನೋವುಗಳು ದಾಖಲಾಗಿವೆ. ದಿನದ ನಂತರ ಒಟ್ಟು 1,600 ರೋಗಿಗಳನ್ನು ಚಿಕಿತ್ಸೆಯ ನಂತರ ಬಿಡುಗಡೆ ಮಾಡಲಾಗಿದ್ದು, ರಾಜ್ಯದಲ್ಲಿ ಚೇತರಿಸಿಕೊಂಡವರ ಸಂಖ್ಯೆಯನ್ನು 58,509 ಕ್ಕೆ ತೆಗೆದುಕೊಳ್ಳಲಾಗಿದೆ.
