ರಾಷ್ಟ್ರೀಯ ಸುದ್ದಿ

ಕಂಗನಾ ರಾಣಾವತ್ ವಿರುದ್ಧ ವಿಧಾನಸಭೆಯಲ್ಲಿ ಟೀಕೆ ಹಿನ್ನೆಲೆ: ಮಹಾರಾಷ್ಟ್ರ ಗೃಹ ಸಚಿವರಿಗೆ ಬೆದರಿಕೆ ಕರೆ

ವರದಿಗಾರ (ಸೆ.9): ವಿಧಾನಸಭೆಯಲ್ಲಿ ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರ ವಿರುದ್ಧ ಟೀಕೆ ಮಾಡಿದ್ದ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರಿಗೆ ಬೆದರಿಕೆ ಕರೆ ಬಂದಿದೆ. ಸಚಿವರ ನಾಗ್ಪುರ ಕಚೇರಿಗೆ ಈ ಕರೆ ನಿನ್ನೆ ಬಂದಿದೆ ಎಂದು ಅಧಿಕಾರಿಯೊಬ್ಬರು ಇಂದು ದೃಢಪಟ್ಟಿದ್ದಾರೆ.

ಬೇರೆ ರಾಜ್ಯದ ಹುಡುಗಿಯೊಬ್ಬಳು (ಕಂಗನಾ ರಣಾವತ್) ಜೀವನೋಪಾಯಕ್ಕಾಗಿ ಇಲ್ಲಿಗೆ ಬಂದಿದ್ದಾಳೆ. ಮುಂಬೈ ಆಕೆಯನ್ನು ಒಪ್ಪಿಕೊಂಡರೂ ಅವಳು ಮುಂಬೈ ಪೊಲೀಸರನ್ನು ಅವಮಾನಿಸುತ್ತಾಳೆ. ಇದು ದುಃಖಕರ. ಆಕೆಯ ಹೇಳಿಕೆ ಬೇಜವಾಬ್ದಾರಿತನದಿಂದ ಕೂಡಿದೆ. ನೀವು ಮಹಾರಾಷ್ಟ್ರವನ್ನು ಅವಮಾನಿಸಿದರೆ ಜನರು ಅದನ್ನು ಸಹಿಸುವುದಿಲ್ಲ. ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ಆಕೆಯ ಹೇಳಿಕೆಯನ್ನು ಖಂಡಿಸಬೇಕು ಎಂದು ಗೃಹ ಸಚಿವರು ಹೇಳಿದ್ದರು.

ನಟಿ ಕಂಗನಾ ಅವರಿಗೆ ಮಾದಕ ದ್ರವ್ಯ ನಂಟು ಇದೆಯೇ ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಸಚಿವರು ಮುಂಬೈ ಪೊಲೀಸರಿಗೆ ಸೂಚಿಸಿದ್ದರು.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನದ ಬಳಿಕ ಮುಂಬೈ ಪೊಲೀಸರ ಮೇಲೆ ಯಾವುದೇ ನಂಬಿಕೆ ಇಲ್ಲ ಎಂದು ನಟಿ ಕಂಗನಾ ಹೇಳಿಕೆ ನೀಡಿದ ನಂತರ, ಕಂಗನಾ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ನಡುವೆ ಅಪನಂಬಿಕೆ ಉಂಟಾಗಿದೆ. ಈ ಸಂದರ್ಭದಲ್ಲೇ ದೇಶ್ ಮುಖ್ ಅವರಿಂದ ಈ ಸೂಚನೆ ಹೊರಬಿದ್ದಿದೆ.

ನಿನ್ನೆ, ರಾಜ್ಯ ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ನಟಿ ಕಂಗನಾ, ಈ ವಿಷಯದಲ್ಲಿ ಪೊಲೀಸರೊಂದಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಮಾತ್ರವಲ್ಲ ಅವರು ತಮ್ಮ ರಕ್ತದ ಮಾದರಿಗಳನ್ನು ಬೇಕಾದರೂ ಸಂಗ್ರಹಿಸಿಕೊಳ್ಳಲಿ ಎಂದು ಹೇಳಿದ್ದರು.

ದಯವಿಟ್ಟು ನನ್ನ ಡ್ರಗ್ಸ್ ಪರೀಕ್ಷೆ ಮಾಡಿ, ಡ್ರಗ್ ಪೆಡ್ಲರ್ ಗಳೊಂದಿಗೆ ಯಾವುದೇ ಸಂಬಂಧ ಕಂಡುಬಂದಲ್ಲಿ ನನ್ನ ಕರೆ ದಾಖಲೆಗಳನ್ನು ತನಿಖೆ ಮಾಡಿಬಹುದು, ತಪ್ಪು ಕಂಡರೆ ನನ್ನ ತಪ್ಪನ್ನು ನಾನು ಒಪ್ಪುತ್ತೇನೆ ಮತ್ತು ಮುಂಬೈಯನ್ನು ಶಾಶ್ವತವಾಗಿ ಬಿಟ್ಟು ಹೋಗುತ್ತೇನೆ ಎಂದು ಕಂಗನಾ ಟ್ವೀಟ್ ಮೂಲಕ ಸವಾಲು ಹಾಕಿದ್ದಾರೆ.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group