ವರದಿಗಾರ-ಗೋರಖ್ ಪುರ: ಗೋರಖಪುರದ BRD ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಆಗಸ್ಟ್ನ ಒಂದೇ ತಿಂಗಳಲ್ಲಿ ಮೃತಪಟ್ಟಿರುವ ಮಕ್ಕಳ ಸಂಖ್ಯೆ ಬರೊಬ್ಬರಿ 290. ಇದರಲ್ಲಿ 213 ಮಕ್ಕಳು ಎನ್ಐಸಿಯುನಲ್ಲಿ ಮತ್ತು 77 ಮಕ್ಕಳು ಎನ್ಸೆಫಾಲಿಟೀಸ್ ವಾರ್ಡ್ನಲ್ಲಿ ಮೃತಪಟ್ಟಿದ್ದಾರೆ. ಆಗಸ್ಟ್ 27 ಮತ್ತು 28ರಂದು 37 ಮಕ್ಕಳು ಮೃತಪಟ್ಟಿದ್ದಾರೆ. ಅದರಲ್ಲಿ 26 ಮಕ್ಕಳು ಎನ್ಐಸಿಯುನಲ್ಲಿ ಮತ್ತು11 ಮಕ್ಕಳು ಎನ್ಸೆಫಾಲಿಟೀಸ್ ವಾರ್ಡ್ ನಲ್ಲಿ ಮೃತಪಟ್ಟಿದ್ದಾರೆ.
ಹಾಗೂ 2017ರ 8 ತಿಂಗಳಲ್ಲಿ ಒಟ್ಟು 1250 ಮಕ್ಕಳು ಮೃತಪಟ್ಟಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಪಿ.ಕೆ. ಸಿಂಗ್ ಹೇಳಿದ್ದಾರೆ.
- 2017ರ ಜನವರಿ ಯಿಂದ ಆಗಸ್ಟ್ 29ರವರೆಗೆ ಮೃತಪಟ್ಟ ಮಕ್ಕಳ ವರದಿ:
1.ಜನವರಿ: 152 (143 ಮಕ್ಕಳು ಎನ್ಐಸಿಯುನಲ್ಲಿ ಮತ್ತು 9 ಮಕ್ಕಳು ಎನ್ಸೆಫಾಲಿಟೀಸ್ ವಾರ್ಡ್),
2. ಫೆಬ್ರವರಿ: 122 (117 ಮಕ್ಕಳು ಎನ್ಐಸಿಯುನಲ್ಲಿ ಮತ್ತು 5 ಮಕ್ಕಳು ಎನ್ಸೆಫಾಲಿಟೀಸ್ ವಾರ್ಡ್),
3. ಮಾರ್ಚ್: 159 (141 ಮಕ್ಕಳು ಎನ್ಐಸಿಯುನಲ್ಲಿ ಮತ್ತು 18 ಮಕ್ಕಳು ಎನ್ಸೆಫಾಲಿಟೀಸ್ ವಾರ್ಡ್),
4. ಏಪ್ರಿಲ್: 123 (114 ಮಕ್ಕಳು ಎನ್ಐಸಿಯುನಲ್ಲಿ ಮತ್ತು 9 ಮಕ್ಕಳು ಎನ್ಸೆಫಾಲಿಟೀಸ್ ವಾರ್ಡ್),
5. ಮೇ: 139 (127 ಮಕ್ಕಳು ಎನ್ಐಸಿಯುನಲ್ಲಿ ಮತ್ತು 12 ಮಕ್ಕಳು ಎನ್ಸೆಫಾಲಿಟೀಸ್ ವಾರ್ಡ್)
6. ಜೂನ್: 137 (125 ಮಕ್ಕಳು ಎನ್ಐಸಿಯುನಲ್ಲಿ ಮತ್ತು 12 ಮಕ್ಕಳು ಎನ್ಸೆಫಾಲಿಟೀಸ್ ವಾರ್ಡ್)
7. ಜುಲೈ: 128 (95 ಮಕ್ಕಳು ಎನ್ಐಸಿಯುನಲ್ಲಿ ಮತ್ತು 33 ಮಕ್ಕಳು ಎನ್ಸೆಫಾಲಿಟೀಸ್ ವಾರ್ಡ್)
ಇದೇ ಸಂದರ್ಭ ಮಾತನಾಡುತ್ತಾ ತಿಳಿಸಿದ ಅವರು, ಆರೋಗ್ಯ ಸ್ಥಿತಿ ತೀರಾ ಹದಗೆಟ್ಟ ಮೇಲೆ ಪೋಷಕರು ಮಕ್ಕಳನ್ನು ಆಸ್ಪತ್ರೆಗೆ ಕರೆತರುತ್ತಿದ್ದಾರೆ.ಅನಾರೋಗ್ಯದ ಸೂಚನೆ ಸಿಕ್ಕಾಗಲೇ ಆಸ್ಪತ್ರೆಗೆ ಮಕ್ಕಳನ್ನು ಕರೆದುಕೊಂಡು ಬಂದರೆ ಸಾಕಷ್ಟು ಜೀವಗಳನ್ನು ಉಳಿಸಬಹುದೆಂದು ಅವರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ ಕೆಳಗೆ ನೀಡಲಾಗಿದೆ.
