ರಾಜ್ಯ ಸುದ್ದಿ

ಮೇಲುಸೇತುವೆಗೆ ಸಾವರ್ಕರ್ ಹೆಸರು; ವೆಲ್ಫೇರ್ ಪಾರ್ಟಿ ಖಂಡನೆ

ವರದಿಗಾರ (ಸೆ.9): ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ ಯಲ್ಲಿ ನಿರ್ಮಾಣ ಗೊಂಡಿರುವ ಮೇಲುಸೇತುವೆಗೆ ಸಾರ್ವಜನಿಕರ ವಿರೋಧದ ನಡುವೆಯೂ ಸಾವರ್ಕರ್ ಹೆಸರು ನಾಮಕರಣ ಮಾಡಿರುವುದು ಖಂಡನೀಯ ಎಂದು ವೆಲ್ಫೇರ್ ಪಾರ್ಟ್ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮೇಲುಸೇತುವೆ ಗೆ ಜನರ ರಕ್ಷಣೆ ಮಾಡುತ್ತ ತನ್ನ ಜೀವನ ಬಲಿದಾನ ಮಾಡಿರುವ ಹುತಾತ್ಮ ಅಶೋಕ್ ಚಕರ ಸನ್ಮಾನಿತ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹೆಸರು ಇಡಬೇಕೆ ವಿನಃ ಬ್ರಿಟಿಷರಿಂದ ಕ್ಷಮೆ ಕೇಳಿ ತನ್ನ ಪ್ರಾಣ ಕಾಪಾಡಿಕೊಂಡ ಸಾವರ್ಕರ್ ಹೆಸರು ಇಡುವುದು ದೇಶದ ನಾಗರಿಕರಿಗೆ ಮತ್ತು ಸ್ವತಃ ಉಣ್ಣಿಕಿಷ್ಣನ್ ಗೆ ಸರಕಾರ ಅಪಮಾನ ಮಾಡಿದೆ ಎಂದು ವೆಲ್ಫೇರ್ ಪಾರ್ಟಿ ಹೇಳಿದೆ.

‘ರಾಜ್ಯ ದಲ್ಲಿ ಹಲವಾರು ಸಮಸ್ಯೆಗಳಿದ್ದು, ಎಲ್ಲಾ ರಂಗಗಳಲ್ಲಿ ಸರಕಾರ ವಿಫಲವಾಗಿದೆ, ಇಂತಹ ಸಂದರ್ಭದಲ್ಲಿ ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಪರಿಹಾರ ಕೊಡುವ ಬದಲು ಸರ್ಕಾರ ತನ್ನ ಪಕ್ಷದ ಸಿದ್ಧಾಂತದ ಪ್ರಚಾರದಲ್ಲಿ ತೊಡಗಿದೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳು ಈ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಬಾರದು, ಮತ್ತು ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹೆಸರನ್ನೇ ಈ ಮೇಲುಸೇತುವೆಗೆ ಇಡಬೇಕು ಎಂದು ವೆಲ್ಫೇರ್ ಪಾರ್ಟಿ ಆಗ್ರಹಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.‌

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group