ರಾಷ್ಟ್ರೀಯ ಸುದ್ದಿ

ನೋಯ್ಡಾ; ಜೈ ಶ್ರೀರಾಂ ಹೇಳುವಂತೆ ಹಲ್ಲೆ ನಡೆಸಿ ಕಾರು ಚಾಲಕನ ಹತ್ಯೆ

ವರದಿಗಾರ (ಸೆ.8): ಕಾರು ಚಾಲಕರೊಬ್ಬರನ್ನು ಜೈ ಶ್ರೀರಾಂ ಹೇಳುವಂತೆ ಬಲವಂತಪಡಿಸಿ ಹಲ್ಲೆ ಮಾಡಿ ಹತ್ಯೆ ಮಾಡಿರುವ ಕ್ರೂರ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಆದರೆ ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ.

ಅಫ್ತಾಬ್ (45) ಹತ್ಯೆಗೀಡಾದ ಕಾರು ಚಾಲಕ. ಅವರು ಬುಲಂದ್ ಶಹರ್ ನಿಂದ ದೆಹಲಿಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಇಬ್ಬರು ವ್ಯಕ್ತಿಗಳು ಕ್ರಿಮಿನಲ್ ಉದ್ದೇಶದೊಂದಿಗೆ ಕಾರು ಹತ್ತಿದ್ದಾರೆ. ಆದರೆ ಪೊಲೀಸರ ಪ್ರಕಾರ,  ಆ ಇಬ್ಬರು ಮದ್ಯ ಸೇವಿಸಿದ್ದರು ಕಾರು ಕಳ್ಳತನ ಮಾಡುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ.
ಆರೋಪಿಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ಸಂಬಂಧ ಬದಲ್ಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಆದರೆ ಪೊಲೀಸರ ಹೇಳಿಕೆಯನ್ನು ಮೃತರ ಪುತ್ರ ಸಾರಿಬ್ ನಿರಾಕರಿಸಿದ್ದು, ತಂದೆ ಕೊನೆಯ ಬಾರಿಗೆ ಕರೆ ಮಾಡಿದಾಗ ಜೈಶ್ರೀರಾಮ್ ಹೇಳುವಂತೆ ಒತ್ತಾಯಿಸುತ್ತಿರುವುದು ಕೇಳಿದೆ. ಇದನ್ನು ನಾನು ರೇಕಾರ್ಡ್ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಬುಲಂದ್‌ಶಹರ್‌ನಿಂದ ಪ್ರಯಾಣಿಸುತ್ತಿದ್ದ ಕ್ಯಾಬ್‌ನಲ್ಲಿ ಅಪರಾಧ ಕೃತ್ಯ ನಡೆಯುತ್ತಿರುವ ಬಗ್ಗೆ ಸೋಮವಾರ ರಾತ್ರಿ ನಮಗೆ ಮಾಹಿತಿ ಬಂತ್ತು. ರಾತ್ರಿ 9.30ರ ಸುಮಾರಿಗೆ ದಾದ್ರಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ಅವರು ತಮ್ಮ ವ್ಯಾಪ್ತಿಯಲ್ಲಿ ಸ್ವಿಫ್ಟ್ ಡಿಝೈರ್ ಕಾರನ್ನು ಪತ್ತೆ ಮಾಡಿದರು. ಆರೋಪಿಗಳು ಪರಾರಿಯಾಗಿದ್ದು, ಕಾರು ಚಾಲಕ ತಲೆಗೆ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾದರು. ಈ ಸಂಬಂಧ ವಿಡಿಯೋವೊಂದು ವೈರಲ್ ಆಗುತ್ತಿದೆ, ಆದರೆ ಆರೋಪಿಗಳು ಚಾಲಕನಿಗೆ ‘ಜೈ ಶ್ರೀ ರಾಮ್’ ಹೇಳುವಂತೆ ಒತ್ತಾಯಿಸುತ್ತಿರುವಂತೆ ಕಾಣುತ್ತಿಲ್ಲ. ಈ ಕೃತ್ಯದಲ್ಲಿ ಕೋಮು ದೃಷ್ಟಿಕೋನ ಕಾಣುತ್ತಿಲ್ಲ. ಆರೋಪಿಗಳಿಗೆ ಕ್ರಿಮಿನಲ್ ಹಿನ್ನೆಲೆ ಇರುವಂತೆ ಕಾಣುತ್ತಿದೆ ಎಂದು ಎಸಿಪಿ ರಾಜೀವ್ ಕುಮಾರ್ ಹೇಳಿದ್ದಾರೆ.

ಗ್ರೇಟರ್ ನೋಯ್ಡಾದ ಟೋಲ್ ಪ್ಲಾಜಾ ಬಳಿ ಇದ್ದಾಗ ರಾತ್ರಿ 7.57 ರ ಸುಮಾರಿಗೆ ತನ್ನ ತಂದೆಯಿಂದ ಕರೆ ಬಂತು. ಬಳಿಕ ಅವರು ಮೊಬೈಲ್ ಅನ್ನು ಪಕ್ಕದಲ್ಲಿ ಇಟ್ಟಿದ್ದಾರೆ. ಈ ವೇಳೆ ನಡೆದ ಸಂಭಾಷಣೆ ರೆಕಾರ್ಡ್  ಆಗಿದೆ. 8.39ರ ಸುಮಾರಿಗೆ  ಆರೋಪಿಗಳು  “ಜೈ ಶ್ರೀ ರಾಮ್…ಹೇಳು” ಎಂದು ಹೇಳುತ್ತಿರುವುದು ಕೇಳುತ್ತದೆ, ನಂತರ ನಿಶ್ಯಬ್ಧವಾಗಿದೆ ಎಂದು ಅಫ್ತಾಬ್‌ ಅವರ ಮಗ ಸಾರಿಬ್ (22) ಹೇಳುತ್ತಾರೆ. ಇದಾದ 15 ನಿಮಿಷಗಳಲ್ಲೇ ಸಾರಿಬ್ ಅವರು ದೆಹಲಿಯ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ, ವಿಷಯ ತಿಳಿಸಿದರು. ಗೌತಮ್ ಬುದ್ಧ ನಗರ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿತು. ಗ್ರೇಟರ್ ನೋಯ್ಡಾ ಪೊಲೀಸರು ನಂತರ ಕ್ಯಾಬ್ ಅನ್ನು ಪತ್ತೆಹಚ್ಚಿದರು. ಚಾಲಕ ಅಫ್ತಾಬ್ ತನ್ನ ಸೀಟಿನಲ್ಲಿ ಸೀಟ್ ಬೆಲ್ಟ್ ನೊಂದಿಗೆ ತಲೆಗೆ ತೀವ್ರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಅಲ್ಲಿ ಮೃತಪಟ್ಟಿದ್ದಾರೆ .

ಅಫ್ತಾಬ್ ಅವರು ಖಾಸಗಿ ಕಂಪನಿಯ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ. ಕುಟುಂಬವು ಮಯೂರ್ ವಿಹಾರ್ನಲ್ಲಿ ನೆಲೆಸಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group