ಬಂಟ್ವಾಳ, ಸಪ್ಟೆಂಬರ್ 06 : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಆಶ್ರಯದಲ್ಲಿ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಮರ್ಹೂಂ ಶರೀಫ್ ಕಲ್ಲಡ್ಕ(ರಿಕ್ಷಾ ಚಾಲಕ) ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 06 ಸಪ್ಟೆಂಬರ್ 2020 ನೇ ಆದಿತ್ಯವಾರದಂದು ಹಜಾಜ್ ಸ್ಪೋರ್ಟ್ಸ್ ಕ್ಲಬ್(ರಿ) ಗೊಳ್ತಮಜಲು ಕಲ್ಲಡ್ಕ ಇದರ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಕೊರೋನಾ ಭೀತಿಯ ನಡುವೆಯೂ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ ಎಲ್ಲಾ ಸುರಕ್ಷಿತಾ ಮುನ್ನೆಚ್ಚರಿಕೆಯನ್ನು ಪಾಲಿಸಿ ಕೊಂಡು ಒಟ್ಟು 43 ಮಂದಿ ರಕ್ತದಾನ ಮಾಡಿ ಜೀವದಾನಿಯಾದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ವೆನ್ಲಾಕ್ ಸರಕಾರಿ ಆಸ್ಪತ್ರೆ ಮಂಗಳೂರು ಇದರ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.
ಅತಿಥಿಗಳಾಗಿ ಶಿಯಾಬ್ ಗೊಳ್ತಮಜಲು ( ಕಬ್ಬಡಿ ಆಟಗಾರರು ಹಜಾಜ್ ಸ್ಪೊರ್ಟ್ಸ್ ಕ್ಲಬ್),ಅಶ್ರಫ್ ಗೊಳ್ತಮಜಲು( ಅಧ್ಯಕ್ಷರು ಎಸ್.ಕೆ.ಎಸ್ಸೆಸ್ಸೆಫ್) ರಾಜ ಮೋನಾಕ (ಹಿರಿಯ ಮುಖಂಡರು) ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಇದರ ಸಲಹೆಗಾರರಾದ ಮುಸ್ತಫಾ ದೆಮ್ಮಲೆ ಹಾಗೂ ಕಾರ್ಯ ನಿರ್ವಾಹಕರು ಉಪಸ್ಥಿತರಿದ್ದರು.
ರಕ್ತದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಕಲ್ಲಡ್ಕದ ಜನಸ್ನೇಹಿ ನಾಗರಿಕರಿಗೂ ಹಾಗೂ ಕಾರ್ಯಕ್ರಮದ ಯಶಸ್ವಿಗಾಗಿ ಹಗಳಿರುಲು ದುಡಿದ ಎಲ್ಲಾ ಕಾರ್ಯಕರ್ತರಿಗೂ,ಶಿಬಿರಕ್ಕೆ ಸ್ಥಳ ಒದಗಿಸಿದ ಹಜಾಜ್ ಸ್ಪೋರ್ಟ್ಸ್ ಕ್ಲಬ್ ಇದರ ಪದಾಧಿಕಾರಿಗಳಿಗೂ,ಮಾಧ್ಯಮ ಪ್ರತಿನಿಧಿಗಳಿಗೂ ಸಂಘಟಕರು ಕೃತಜ್ಞತೆಯನ್ನು ತಿಳಿಸಿದ್ದಾರೆ.


