ವರದಿಗಾರ-ಬೆಂಗಳೂರು: ಬಿಜೆಪಿಯವರಿಗೆ ಹೇಳಿಕೊಳ್ಳಲು ಯಾವುದೇ ಕಾರ್ಯಕ್ರಮಗಳಿಲ್ಲ. ಆದ್ದರಿಂದಲೇ ನಾಟಕವನ್ನಾಡಲು ಬೈಕ್ಗಳಲ್ಲಿ ಹೊರಟಿದ್ದಾರೆ. ಬಿಜೆಪಿಯವರು ತಲೆ ಕೆಳಗೆ ಮಾಡಿ ನಡೆದರೂ ದಕ್ಷಿಣ ಕನ್ನಡದಲ್ಲಿ ಅವರಿಗೆ ರಾಜಕೀಯ ಲಾಭ ಆಗುವುದಿಲ್ಲ ಎಂದು ಬಿಜೆಪಿ ಹಮ್ಮಿಕೊಂಡಿರುವ ಬೈಕ್ ಅಭಿಯಾನಕ್ಕೆ ಆಹಾರ ಸಚಿವ ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದಾರೆ.
ಅವರು ಮಂಗಳವಾರ ನಗರದಲ್ಲಿ ಮಾಧ್ಯಮಮದೊಂದಿಗೆ ಮಾತನಾಡುತ್ತಾ ಹೀಗೆ ಹೇಳಿದ್ದಾರೆ.
