ವರದಿಗಾರ (ಸೆ.7): “ನನಗೆ ಕೊರೊನಾ ಸೋಂಕು ಬರಲು ಸಾಧ್ಯವಿಲ್ಲ, ಏಕೆಂದರೆ ನಾನು ಸೆಗಣಿ ಮತ್ತು ಮಣ್ಣಿನಲ್ಲಿ ಜನಿಸಿದ್ದೇನೆ” ಎಂದು ಮಧ್ಯಪ್ರದೇಶದ ಸಚಿವೆ ಇಮರ್ತಿ ದೇವಿ ವಿಲಕ್ಷಣ ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಕೊರೊನಾ ಔಷಧವಾಗಿ ಗೋಮೂತ್ರ, ಸೆಗಣಿ, ಪಪ್ಪಡ ಸೇವಿಸುವಂತೆ ಹೇಳಿದ ಬಿಜೆಪಿ ನಾಯಕರ ಸಾಲಿಗೆ ಈಗ ಇಮರ್ತಿ ದೇವಿ ಹೊಸ ಸೇರ್ಪಡೆಯಾಗಿದ್ದಾರೆ. ದೇವಿ ಅವರಿಗೆ ಕೊರೊನಾ ಪಾಸಿಟಿವ್ ಇದೆ ಎಂದು ವರದಿ ಮಾಡಿದ್ದಕ್ಕೆ ಗರಂ ಆಗಿರುವ ಅವರು, ನನಗೆ ಕೊರೊನಾ ಬರಲು ಸಾಧ್ಯವೇ ಇಲ್ಲ, ನಾನು ಮಣ್ಣು ಮತ್ತು ಸೆಗಣಿಯಲ್ಲಿ ಹುಟ್ಟಿದ್ದೇನೆ.ಅಲ್ಲಿ ಸಾಕಷ್ಟು ಕೀಟಾಣುಗಳಿವೆ. ನನ್ನ ಹತ್ತಿರ ಕೊರೊನಾ ಬರುವುದಿಲ್ಲ ಎಂದು ಸಚಿವರು ಹೇಳಿರುವುದು ವೈರಲ್ ಆಗಿದೆ
https://twitter.com/OstwalKumarp/status/1301919537210638337?s=20
