ವರದಿಗಾರ (ಸೆ.7): ಕೇಂದ್ರದ ನರೇಂದ್ರ ಮೋದಿ ಸರ್ಕಾರ ಅಡುಗೆ ಅನಿಲ ಸಿಲಿಂಡರ್ ಗೆ ನೀಡುತ್ತಿದ್ದ ಸಹಾಯಧನ ರದ್ದುಗೊಳಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೇಂದ್ರದ ನರೇಂದ್ರ ಮೋದಿ ಸರ್ಕಾರ ಗ್ಯಾಸ್ ಸಬ್ಸಿಡಿಯನ್ನು ಧಿಡೀರ್ ಆಗಿ ರದ್ದುಗೊಳಿಸಿದೆ. ಮಹಿಳೆಯರ ವೋಟ್ ಪಡೆದು ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಈಗ ಮಹಿಳೆಯರು ಬಳಸುವ ಗ್ಯಾಸ್ ಸಿಲೆಂಡರ್ ನ ಸಬ್ಸಿಡಿಯನ್ನೇ ರದ್ದುಗೊಳಿಸಿದ್ದು ಮಧ್ಯಮ ವರ್ಗದ ಜನರಿಗೆ ಮಾಡಿದ ಮೋಸ ಎಂದು ಈಶ್ವರ್ ಖಂಡ್ರೆ ಟೀಕಿಸಿದ್ದಾರೆ.
ಉಜ್ವಲ ಹೆಸರಲ್ಲಿ ಪ್ರಚಾರಗಿಟ್ಟಿಸುವ ಬಿಜೆಪಿ ಈಗ ಸಬ್ಸಿಡಿ ರದ್ದು ಮಾಡಿ ಮಹಿಳೆಯರು ಕೂಡಿಡುವ ಡಬ್ಬಿ ಹಣಕ್ಕೂ ಕನ್ನಹಾಕುತ್ತಿದೆ. ಈಗ ಹೇಳಿ ಸಬ್ಸಿಡಿ ರದ್ದು ಮಾಡಿದ್ದು ನಿಮ್ಮ ಸರ್ಕಾರವೋ ಅಥವಾ ಅದು ಕೂಡ ACT OF GOD ಪರಿಣಾಮವೋ??? ಎಂದು ಖಂಡ್ರೆ ಕುಟುಕಿದ್ದಾರೆ.
