ರಾಜ್ಯ ಸುದ್ದಿ

ದೇಶದಲ್ಲಿ ಆರ್ಥಿಕ ಭಯೋತ್ಪಾದನೆ ನಡೆಯುತ್ತಿದೆ: ದಿನೇಶ್ ಗುಂಡೂರಾವ್

ವರದಿಗಾರ (ಸೆ.7): ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ದೇಶದಲ್ಲಿ ಆರ್ಥಿಕ ಭಯೋತ್ಪಾದನೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಜಿಎಸ್‌ಟಿಯನ್ನು ಅಸ್ತ್ರದಂತೆ ಬಳಸುತ್ತಿರುವುದು ದೇಶದ ಜನರ ದುರದೃಷ್ಟ. ಜಿಎಸ್‌ಟಿ ಯುಪಿಎ ಸರ್ಕಾರದ ಕನಸಿನ ಕೂಸು. ಆದರೆ ಮೋದಿ ಸರ್ಕಾರ ಮೂಲ ಜಿಎಸ್‌ಟಿ ಕಾಯಿದೆಯನ್ನೇ ಬದಲಾಯಿಸಿ ದೇಶದಲ್ಲಿ ಆರ್ಥಿಕ ಭಯೋತ್ಪಾದನೆ ಮಾಡುತ್ತಿದೆ ಎಂದು ಹೇಳಿದ್ದಾರೆ.

‘ಬಡ, ಮಧ್ಯಮ ಹಾಗೂ ದುಡಿಯುವ ವರ್ಗದ ದುಡಿಮೆಯ ಹಣವನ್ನು ವಸೂಲಿ ಮಾಡಲು ಮೋದಿ ಸರ್ಕಾರ ಜಿಎಸ್‌ಟಿಯನ್ನು ಅಸ್ತ್ರದಂತೆ ಬಳಸುತ್ತಿರುವುದು ದೇಶದ ಜನರ ದುರದೃಷ್ಟವಲ್ಲದೆ ಮತ್ತೇನು ಎಂದು ಅವರು ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group