ರಾಷ್ಟ್ರೀಯ ಸುದ್ದಿ

ಉತ್ತರ ಪ್ರದೇಶ: ಒಂದು ತುಂಡು ಭೂಮಿಗಾಗಿ ಮಾಜಿ ಶಾಸಕನ ಬರ್ಬರ ಹತ್ಯೆ

ವರದಿಗಾರ (ಸೆ.7): ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಮಾಜಿ ಶಾಸಕ ನಿರ್ವೇಂದ್ರ ಕುಮಾರ್ ಮಿಶ್ರಾ ಅವರನ್ನು ಭೂ ವಿವಾದಕ್ಕೆ ಸಂಬಂಧಿಸಿ ಹತ್ಯೆ ಮಾಡಲಾಗಿದೆ. ಅವರು ನಿಘಾಸನ್ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಕೆಲವು ಸ್ಥಳೀಯರ ತಂಡವೊಂದು ಮಾರಕಾಯುಧಗಳೊಂದಿಗೆ ಭಾನುವಾರ ಬೆಳಗ್ಗೆ ತ್ರಿಕೋಲಿಯಾ ಪುದವಾ ಬಸ್ ನಿಲ್ದಾಣದ ಬಳಿ ಬಂದು ವಿವಾದಿತ ಭೂಮಿಯನ್ನು ಅತಿಕ್ರಮಿಸಲು ಪ್ರಯತ್ನಿಸಿದೆ. ಈ ವೇಳೆ ಮಾಜಿ ಶಾಸಕ ಮಿಶ್ರಾ ಮತ್ತು ಅವರ ಪುತ್ರ ಸಂಜೀವ್ ಮಿಶ್ರಾ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ತಂಡ, ಮಿಶ್ರಾ ಮತ್ತು ಪುತ್ರನ ಮೇಲೆ ತೀವ್ರ ಹಲ್ಲೆ ನಡೆಸಿದೆ. ಮಗ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಾಗದ ವಿವಾದ ಈಗಾಗಲೆ ನ್ಯಾಯಾಲಯದಲ್ಲಿದೆ ಎಂದು ತಿಳಿದುಬಂದಿದೆ.

ದಾಳಿಯ ಬಳಿಕ ಮಿಶ್ರಾ ಮತ್ತು ಸಂಜೀವ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅಷ್ಟರಲ್ಲೇ ಮಾಜಿ ಶಾಸಕ ಕೊನೆಯುಸಿರೆಳೆದಿದ್ದಾರೆ.ಸಂಜೀವ್ ಅವರ ಪರಿಸ್ಥಿತಿ ಕೂಡ ಗಂಭೀರವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅವರ ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ಮೃತದೇಹವನ್ನು ತ್ರಿಕೋಲಿಯಾ ಬಸ್ ನಿಲ್ದಾಣದ ಬಳಿಯ ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿರುವುದಾಗಿ ವರದಿಯಾಗಿದೆ.

ಮಿಶ್ರಾ ಅವರಿಗೆ ಪಲ್ಲಿಯಾ ನಿವಾಸಿಗಳಾದ ಸಮೀರ್ ಗುಪ್ತಾ ಮತ್ತು ಮತ್ತೋರ್ವ ರಾಧೆಶ್ಯಾಂ ಗುಪ್ತಾ ಎಂಬವರೊಂದಿಗೆ ಜಾಗದ ವಿಷಯದಲ್ಲಿ ತಕರಾರು ಉಂಟಾಗಿತ್ತು. ವಿವಾದಿತ ಭೂಮಿ ಸಮೀರ್ ಹೆಸರಿನಲ್ಲಿತ್ತು.  ಆದರೆ ಮಿಶ್ರಾ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಸೆಕ್ಷನ್ 107/116 ರ ಅಡಿಯಲ್ಲಿ ಮಿಶ್ರಾ ಮತ್ತು ಅವರ ಮಗನ ವಿರುದ್ಧ ಈ ಹಿಂದೆಯೇ ಪ್ರಕರಣ ದಾಖಲಾಗಿತ್ತು.
ಕೊಲೆಗಾರರೊಂದಿಗೆ ಯುಪಿ ಪೊಲೀಸರಿಗೆ ಉತ್ತಮ ಸಂಬಂಧವಿದೆ ಎಂದು ಮಿಶ್ರಾ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. 75 ವರ್ಷ ಪ್ರಾಯದ ಮಿಶ್ರಾ ಅವರು ನಿಘಾಸನ್ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದರು; ಅವರು ಎರಡು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಮತ್ತು ಒಂದು ಬಾರಿ ಸಮಾಜವಾದಿ ಪಕ್ಷದಿಂದ ಸ್ಪರ್ಧಧಿಸಿ ಗೆದ್ದದಿದ್ದಾಾಾರ

ಮಾಜಿ ಶಾಸಕ ನಿರ್ವೇಂದ್ರ ಮಿಶ್ರಾ ಅವರು ವಾಗ್ವಾದಕ್ಕೆ ಇಳಿದಿದ್ದರಿಂದ ಎರಡು ಕಡೆಯ ನಡುವೆ ಒಂದು ತುಂಡು ಭೂಮಿಗಾಗಿ ಜಗಳ ಉಂಟಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೀಡಿಯೋ ವೀಕ್ಷಿಸಿ:

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group