ರಾಷ್ಟ್ರೀಯ ಸುದ್ದಿ

ಉತ್ತರ ಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಮರಕ್ಕೆ ಕಟ್ಟಿಹಾಕಿ ಗುಂಪುಹತ್ಯೆ ನಡೆಸಿದ ಹಿಂದುತ್ವ ಪಡೆ

ವಿಕೃತ ಮನರಂಜನೆಗಾಗಿ ಥಳಿಸಿದ ಗುಂಪು

ವರದಿಗಾರ (ಸೆ.6): ಕಳ್ಳತನದ ಶಂಕೆಯ ಮೇಲೆ ಹಿಂದುತ್ವ ಗುಂಪೊಂದು 32 ವರ್ಷದ ಮುಸ್ಲಿಂ ಯುವಕ ಬಾಸಿತ್ ಖಾನ್‌ ಎಂಬವರನ್ನು ಮರಕ್ಕೆ ಕಟ್ಟಿ ಹಾಕಿ ಗುಂಪು ಹತ್ಯೆ ನಡೆಸಿರುವ ದಾರುಣ ಘಟನೆ ಉತ್ತರ ಪ್ರದೇಶದ ಬರೇಲ್ವಿ ಜಿಲ್ಲೆಯ ಅಯೋನ್ಲಾ ಗ್ರಾಮದಲ್ಲಿ ನಡೆದಿದೆ.

ಈ ಘಟನೆ ಗುರುವಾರ ರಾತ್ರಿ ನಡೆದಿದ್ದು, ಶುಕ್ರವಾರ ಸಂಜೆ ಬರೇಲ್ವಿಯ ಆಸ್ಪತ್ರೆಯಲ್ಲಿ ಬಾಸಿತ್ ಕೊನೆಯುಸಿರೆಳೆದಿದ್ದಾರೆ.

ತೀವ್ರವಾಗಿ ಥಳಿಸಿದ ಬಳಿಕ  ಬಾಸಿತ್ ನನ್ನು ಪೊಲೀಸರಿಗೆ ಒಪ್ಪಿಸಲಾಯಿತು. ಆದರೆ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಪೊಲೀಸರು ರಿಕ್ಷಾದಲ್ಲಿ ಮನೆಗೆ ಇಳಿಸಿ ಹೊರಟುಹೋದರು.ಬಳಿಕ ಕುಟುಂಬಸ್ಥರು ತೀವ್ರಗಾಯಗೊಂಡಿದ್ದ ಬಾಸಿತ್ ನನ್ನು ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ.
ಮುಹಮ್ಮದ್ ಆಸಿಫ್ ಖಾನ್ ಎಂಬ ಸಾಮಾಜಿಕ ಕಾರ್ಯಕರ್ತ ಟ್ವಿಟ್ಟರ್ ನಲ್ಲಿ  ವಿಡಿಯೋವನ್ನು ಹಂಚಿಕೊಂಡಿದ್ದು, ಅದರಲ್ಲಿ ಬಾಸಿತ್ ನನ್ನು ಮರಕ್ಕೆ ಕಟ್ಟಿಹಾಕಿ, ಥಳಿಸುತ್ತಿರುವ ದೃಶ್ಯವಿದೆ.ಕೆಲವು ದುಷ್ಕರ್ಮಿಗಳು ಗುಂಪಿನಲ್ಲಿ ಸೇರಿಕೊಂಡು ಮನರಂಜನೆಗಾಗಿ ಬಾಸಿತ್ ಮೇಲೆ ಹಲ್ಲೆ ನಡೆಸಿ ಅದನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.
ಬಾಸಿತ್ ನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿರುವ ವೀಡಿಯೋವನ್ನು ನೋಡಿದ್ದೇನೆ. ವಿಡಿಯೋ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ. ಮೃತದೇಹದ ಮೇಲೆ ಮೇಲ್ನೋಟಕ್ಕೆ ಯಾವುದೇ ಗಾಯದ ಗುರುತು ಪತ್ತೆಯಾಗಿಲ್ಲ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಸಾವಿನ ಕಾರಣ ತಿಳಿಯಲಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಪಾಂಡೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆದರೆ ಮೃತನ ತಾಯಿ ಇದನ್ನು ನಿರಾಕರಿಸಿದ್ದು, ಜನರು ಮನರಂಜನೆಗಾಗಿ ನನ್ನ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರೇ ಮನೆಗೆ ಆತನನ್ನು ಕರೆ ತಂದು ಬಿಟ್ಟು ಹೋಗಿದ್ದಾರೆ. ಆತ ನೋವಿನಿಂದ ನರಳುತ್ತಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ದೆವು. ಆದರೆ ಮರುದಿನ ಮೃತಪಟ್ಟಿದ್ದಾನೆ ಎಂದು ತಾಯಿ ತಿಳಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group