ರಾಷ್ಟ್ರೀಯ ಸುದ್ದಿ

ಪ್ರಧಾನಿ ಬಿಡುಗಡೆ ಮಾಡಿದ ಹುತಾತ್ಮರ ಪಟ್ಟಿಯಲ್ಲಿ ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರ ಹೆಸರು: ಕೇರಳ ಸಂಘಪರಿವಾರ ಆಕ್ಷೇಪ

ವರದಿಗಾರ (ಸೆ.5): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಬಿಡುಗಡೆ ಮಾಡಿರುವ ಹುತಾತ್ಮರ ಡಿಕ್ಷನರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಕುಞ್ಞಹಮ್ಮದ್ ಹಾಜಿ ಹಾಗೂ ಆಲಿ ಮುಸ್ಲಿಯಾರ್ ಅವರ ಹೆಸರು ಇರುವುದು ಸಂಘಪರಿವಾರದ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನು ಅರಗಿಸಿಕೊಳ್ಳಲಾಗದೆ ಸಂಘ ಪರಿವಾರ, ಸಂಪಾದಕೀಯ ತಂಡದಲ್ಲಿದ್ದ ಮುಸ್ಲಿಂ ವಿದ್ವಾಂಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದವರ ಕುರಿತು ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆ ಹಾಗೂ ಐ.ಸಿ.ಎಚ್.ಆರ್ ಜಂಟಿಯಾಗಿ ಇತ್ತೀಚೆಗೆ ಹುತಾತ್ಮರ ಡಿಕ್ಷನರಿಯನ್ನು ಹೊರತಂದಿತ್ತು. ಸಂಪಾದಕೀಯ ತಂಡದಲ್ಲಿರುವ ಮುಸಲ್ಮಾನರು ಡಿಕ್ಷನರಿಯನ್ನು ತಿರುಚಿದ್ದಾರೆಂದು ಹಿಂದೂ ಐಕ್ಯವೇದಿ ಕೇರಳ ಅಧ್ಯಕ್ಷೆ ಶಶಿಕಲಾ ಆರೋಪಿಸಿದ್ದಾರೆ.

ಸಂಪಾದಕೀಯ ತಂಡದಲ್ಲಿದ್ದ ಅಲಿ ಮುಹಮ್ಮದ್ ನೌಶಾದ್, ಮುಹಮ್ಮದ್ ಶಕೀಲ್ ಅಲ್ತಾರ್, ಮುಹಮ್ಮದ್ ನಿಯಾಸ್ ಸೇರಿ ಇತಿಹಾಸವನ್ನು ತಿರುಚಿದ್ದಾರೆ ಎಂದು ಶಶಿಕಲಾ ಆರೋಪ ಮಾಡಿದ್ದಾರೆ‌. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೆ ಮಧ್ಯಪ್ರವೇಶಿಸಿ ಡಿಕ್ಷನರಿ ಹಿಂಪಡೆಯಲು ಕ್ರಮಕೈಗೊಳ್ಳಬೇಕು. ಹಾಗೂ ಸಂಸ್ಕೃತಿ ಇಲಾಖೆ ಮತ್ತು ಭಾರತೀಯ ಇತಿಹಾಸ ಸಂಶೋಧನಾ ಇಲಾಖೆ ತಪ್ಪನ್ನು ಸರಿಪಡಿಸಬೇಕೆಂದು ಶಶಿಕಲಾ ಆಗ್ರಹಿಸಿದ್ದಾರೆ.

ವಾರಿಯಂ ಕುನ್ನತ್ ಕುಞ್ಞಹಮ್ಮದ್ ಹಾಜಿ ಹಾಗೂ ಆಲಿ ಮುಸ್ಲಿಯಾರ್ ಹಿಂದೂ ಸಮಾಜದ ಹತ್ಯೆಗಳಿಗೆ ನೇತೃತ್ವ ವಹಿಸಿದ್ದರು ಎಂದು ಆರೋಪಿಸಿದ್ದಾರೆ. ಈ ಮಧ್ಯೆ ಸಂಘಪರಿವಾರ ಬೆಂಬಲಿಗರಿಗೆ ಈ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಮರ್ಥನೆ ಮಾಡಲೂ ಸಾಧ್ಯವಾಗುತ್ತಿಲ್ಲ.

ಈ ಐದು ಸಂಪುಟಗಳ ನಿಘಂಟಿನಲ್ಲಿ 1857 ರಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ, 1947 ರಲ್ಲಿ ಭಾರತದ ಸ್ವಾತಂತ್ರ್ಯದವರೆಗಿನ ಹುತಾತ್ಮರ ವಿವರಗಳಿವೆ. ಇದರಲ್ಲಿ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಹುತಾತ್ಮರು, ಅಸಹಕಾರ ಚಳುವಳಿ, ಕ್ವಿಟ್ ಇಂಡಿಯಾ ಚಳವಳಿ ಮತ್ತು ಹುತಾತ್ಮರಾದ ಆಜಾದ್ ಹಿಂದ್ ಫೌಜ್ ಅವರ ಸೈನಿಕರ ವಿವರಗಳು ಇವೆ. ಈ ಪ್ರಯತ್ನ ಮಾಡಿದ ಸಂಪಾದಕೀಯ ತಂಡವನ್ನು ಪ್ರಧಾನಿ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದರು. ಆದರೆ ಕೇರಳ ಸಂಘಪರಿವಾರ ಮಾತ್ರ ಆಕ್ಷೇಪ ವ್ಯಕ್ತಪಡಿಸಿರುವುದು ತನಗಿರುವ ಮುಸ್ಲಿಂ ದ್ವೇಷವನ್ನು ಎತ್ತಿ ತೋರಿಸುತ್ತಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group