ರಾಷ್ಟ್ರೀಯ ಸುದ್ದಿ

ಘೋರ ಅಪರಾಧವೆಸಗಿದ ಕೈದಿಗಳಿಗೆ ಪೆರೋಲ್ ನೀಡದಂತೆ ಕೇಂದ್ರ ಗೃಹ ಸಚಿವಾಲಯ ಸೂಚನೆ

ವರದಿಗಾರ (ಸೆ.4): ಘೋರ ಅಪರಾಧವೆಸಗಿದ ಕೈದಿಗಳಿಗೆ ಪೆರೋಲ್ ನೀಡದಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಪೆರೋಲ್ ಮೇಲೆ ಬಿಡುಗಡೆ ಮಾಡುವುದು ಸಂಪೂರ್ಣ ಹಕ್ಕಲ್ಲ. ಇದು ವಿನಾಯಿತಿ ಅಷ್ಟೇ. ಪೆರೋಲ್‍ ಮೇಲೆ ಬಿಡುಗಡೆಯಾಗುವ ಕೈದಿಗಳು ಸಮಾಜದಲ್ಲಿ ಅಪಾಯಕಾರಿ ಎಂದು ಭಾವಿಸಬಹುದಾಗಿದೆ. ಸಮಾಜದಲ್ಲಿ ಅಶಾಂತಿ, ಗಲಭೆ, ದಂಗೆ, ದೌರ್ಜನ್ಯ, ಭಯೋತ್ಪಾದಕ ಅಪರಾಧಗಳು, ಸುಲಿಗೆಗಾಗಿ ಅಪಹರಣ, ಮಾದಕವಸ್ತು ಕಳ್ಳಸಾಗಣೆ ಪ್ರಕರಣಗಳಲ್ಲಿ ಭಾಗಿಯಾದ ಕೈದಿಗಳನ್ನು ಪೆರೋಲ್‍ ಮೇಲೆ ಬಿಡುಗಡೆ ಮಾಡಬಾರದು ಎಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಗೃಹ ಸಚಿವಾಲಯ ಸಲಹೆ ನೀಡಿದೆ.

ಇಂತಹ ಕೈದಿಗಳ ತಾತ್ಕಾಲಿಕ ಬಿಡುಗಡೆಯನ್ನು ಪರಿಗಣಿಸುವಾಗ  ರಾಜ್ಯ ಸರ್ಕಾರಗಳು ಮನೋವಿಜ್ಞಾನಿ, ಅಪರಾಧ ಶಾಸ್ತ್ರಜ್ಞ ಅಥವಾ ತಿದ್ದುಪಡಿ ಆಡಳಿತ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಿ ಅವರು ನೀಡಿದ ಅಭಿಪ್ರಾಯ-ಸಲಹೆಯನ್ನು ಪಡೆಯಬೇಕು ಎಂದು ಗೃಹಸಚಿವಾಲಯ ತಿಳಿಸಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group