ರಾಷ್ಟ್ರೀಯ ಸುದ್ದಿ

ಮೊಹರ್ರಂ ಮೆರವಣಿಗೆ ನಡೆಸಿದವರ ವಿರುದ್ಧ ಎನ್‌ಎಸ್‌ಎಯಡಿ ಪ್ರಕರಣ; ಗಣೇಶ ಚತುರ್ಥಿ ಆಚರಿಸಿದವರ ವಿರುದ್ಧ ಪೊಲೀಸರ ಮೌನ

ಇಂದೋರ್‌ ಪೊಲೀಸರ ತಾರತಮ್ಯ ನೀತಿ

ವರದಿಗಾರ (ಸೆ.5): ಆಗಸ್ಟ್ 30 ರಂದು ಮೊಹರ್ರಂ ಮೆರವಣಿಗೆ ಮುನ್ನಡೆಸಿದ್ದಕ್ಕಾಗಿ ಇಂದೋರ್‌ನ ಮಾಜಿ ಕಾರ್ಪೋರೇಟರ್ ಉಸ್ಮಾನ್ ಪಟೇಲ್ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ-ಎನ್‌ಎಸ್‌ಎಯಡಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಇಂದೋರ್- 2ರ ಬಿಜೆಪಿ ಶಾಸಕ ರಮೇಶ್ ಮೆಂಡೋಲಾ ಅವರು ಗಣೇಶ ಚತುರ್ಥಿಯನ್ನು 10 ದಿನಗಳ ಕಾಲ ನಂದನ್ ನಗರದಲ್ಲಿ ಸಾರ್ವಜನಿಕವಾಗಿ ಆಚರಿಸಿದ್ದರೂ ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ ಮೌನಕ್ಕೆ ಶರಣಾಗಿದ್ದಾರೆ ಎಂದು “ದಿ ವೈರ್’ ವರದಿ ಮಾಡಿದೆ.

ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿಗಳನ್ನು ಕಡೆಗಣಿಸಿದ ರಮೇಶ್ ಮೆಂಡೋಲಾ ಅವರು ಬೃಹತ್ ಪೆಂಡಾಲ್ ಸ್ಥಾಪಿಸಿದ್ದು ಮಾತ್ರವಲ್ಲದೆ ಗಣೇಶ ಚತುರ್ಥಿ ಹಬ್ಬ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ಸಹ ನಡೆಸಿದ್ದರು. ಶಾಸಕರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕಾಂಗ್ರೆಸ್ ಒತ್ತಾಯಿಸಿದ್ದರೂ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ.

ಈ ಮಧ್ಯೆ, ಉಸ್ಮಾನ್ ಪಟೇಲ್ ಅವರ ಪ್ರಕರಣದಲ್ಲಿ, ಆಗಸ್ಟ್ 30ರಂದು ಮೊಹರ್ರಂ ಮೆರವಣಿಗೆಯಲ್ಲಿ ಭಾಗವಹಿಸಿದ್ದಕ್ಕಾಗಿ ಇಂದೋರ್ ಪೊಲೀಸರು 28 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಐವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಂತರ ಇನ್ನೂ 23 ಜನರನ್ನು ಐಪಿಸಿ 188, 269, 270 ಮತ್ತು 151 ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಎಲ್ಲಾ 28 ಮಂದಿಯೂ ಈಗ ಇಂದೋರ್ ಕೇಂದ್ರ ಕಾರಾಗೃಹದಲ್ಲಿದ್ದಾರೆ.

ಉಸ್ಮಾನ್ ಪಟೇಲ್‌ ಅವರು ಈ ಹಿಂದೆ ಬಿಜೆಪಿಯಲ್ಲಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಬಿಜೆಪಿ ತೊರೆದು ಕಳೆದ ಫೆಬ್ರವರಿಯಲ್ಲಿ ಕಾಂಗ್ರೆಸ್ ಸೇರಿದ್ದರು.

ಬಿಜೆಪಿ ಪಕ್ಷ ತೊರೆದುದಕ್ಕಾಗಿ ಬಿಜೆಪಿಯವರು ತಮ್ಮ ತಂದೆಗೆ ಪಾಠ ಕಲಿಸಲು ಮುಂದಾಗಿದ್ದಾರೆ ಎಂದು ಉಸ್ಮಾನ್ ಅವರ ಕಿರಿಯ ಮಗ ಜೋಯೆಬ್ ಪಟೇಲ್ ಆರೋಪಿಸಿದ್ದಾರೆ.

“ ಅವರ ವಿರುದ್ಧದ ಆರೋಪಗಳು ಸುಳ್ಳು. ನನ್ನ ಇಬ್ಬರು ಚಿಕ್ಕಪ್ಪರಾದ ಇಸ್ಮಾಯಿಲ್ ಪಟೇಲ್ ಮತ್ತು ಮುಹಮ್ಮದ್ ಅಲಿ ಪಟೇಲ್ ಅವರ ವಿರುದ್ಧ ಎನ್ಎಸ್ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಘಟನೆಯ ಸಮಯದಲ್ಲಿ ಅವರು ಮನೆಯಲ್ಲಿದ್ದರು” ಜೋಯಬ್ ತಿಳಿಸಿದ್ದಾರೆ ಎಂದು “ದಿ ವೈರ್’ ವರದಿ ಮಾಡಿದೆ.

“ಬಿಜೆಪಿ ಶಾಸಕ ರಮೇಶ್ ಮೆಂಡೋಲಾ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರು ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಪೆಂಡಾಲ್ ಹಾಕಿಲ್ಲ. ಸಾಮೂಹಿಕವಾಗಿ ಹಬ್ಬವನ್ನು ಆಯೋಜಿಸಲಾಗಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಪೂಜೆ ಮಾಡುವುದನ್ನು ನಿಷೇಧಿಸಲಾಗಿದೆಯೇ ಹೊರತು ಮನೆಯಲ್ಲಿ ಅಲ್ಲ. ಅವರು ಮನೆಯಲ್ಲಿ ಪೂಜೆ ಸಲ್ಲಿಸಿದ್ದರು ಎಂದು ಶಾಸಕರ ಪರ ಇಂದೋರ್ ಈಸ್ಟ್ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಖಾತ್ರಿ ಮಾತನಾಡಿದ್ದಾರೆ.

ನಂದನ್ ನಗರದ ಸರ್ಕಾರಿ ಶಾಲೆಯ ಆವರಣದಲ್ಲಿ ಪೆಂಡಾಲ್ ಹಾಕಲಾಗಿತ್ತು. ಧಾರ್ಮಿಕ ಚಟುವಟಿಕೆಗಳನ್ನು ಸಹ ನಡೆಸಲಾಯಿತು. ಸೆಪ್ಟೆಂಬರ್ 2ರಂದು, ಮೆಂಡೋಲಾ ತನ್ನ ಫೇಸ್‌ಬುಕ್ ಪುಟದಲ್ಲಿ, ಐದು ಅಡಿ ಎತ್ತರದ ಗಣೇಶ ವಿಗ್ರಹವನ್ನು ವಿಸರ್ಜಿಸುವ ಮೊದಲು ತೆಗೆದ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು ಎಂದು ಸ್ಥಳೀಯರು ಫೋಟೋ ಸಹಿತ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಮಧ್ಯಪ್ರದೇಶದ ಕಾಂಗ್ರೆಸ್ ವಕ್ತಾರ ಅಮೀನುಲ್ ಖಾನ್ ಸೂರಿ ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಆಡಳಿತ ಪಕ್ಷದ ಸದಸ್ಯರು ಮತ್ತು ಮುಖಂಡರಿಗೆ ಕಾನೂನುಗಳು ಬೇರೆ ಇವೆಯೇ?” ಎಂಬುದನ್ನು  ಪೊಲೀಸರು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ನಾಯಕ ಸೂರಿ ಒತ್ತಾಯಿಸಿದ್ದಾರೆ ಎಂದು “ದಿ ವೈರ್’ ವರದಿ ಮಾಡಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group