ವರದಿಗಾರ (ಸೆ.4): ಅಮಾಯಕನಾಗಿದ್ದರೂ ಜೈಲುಪಾಲಾಗಿದ್ದ ವ್ಯಕ್ತಿಯೊಬ್ಬರ ಪರವಾಗಿ ಅಮೆರಿಕದ ಅಟಾರ್ನಿ ಜ್ಯಾರೆಟ್ ಆಡಮ್ಸ್ ಎಂಬವರು ಇತ್ತೀಚೆಗೆ ನ್ಯಾಯಾಲಯದಲ್ಲಿ ವಾದಿಸಿ ಅವರನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವರ್ಷಗಳ ಹಿಂದೆ, ಇದೇ ಜ್ಯಾರೆಟ್ ಆಡಮ್ಸ್ ಕೂಡ ಮಾಡದ ತಪ್ಪಿಗಾಗಿ ಇದೇ ರೀತಿ 10 ವರ್ಷ ಜೈಲು ಪಾಲಾಗಿದ್ದರು ಎಂಬುದು ಇಲ್ಲಿನ ವಿಶೇಷತೆಯಾಗಿದೆ.
ಇದು ಆಡಮ್ಸ್ ಅವರ ಮೊದಲ ವೃತ್ತಿಪರ ಜಯವಾಗಿದೆ. 36 ವರ್ಷದ ಕಪ್ಪು ವರ್ಣೀಯನಾದ ಆಡಮ್ಸ್ ವಿರುದ್ಧ ಲೈಂಗಿಕ ಕಿರುಕುಳದ ಸುಳ್ಳಾರೋಪ ಹೊರಿಸಿ ಜೈಲಿಗೆ ಹಾಕಲಾಗಿತ್ತು. ಜೈಲಿನಲ್ಲಿದ್ದ ಗ್ರಂಥಾಲಯದ ಕಾನೂನು ಪುಸ್ತಕಗಳನ್ನು ಓದಿ ಅಪಾರ ಕಾನೂನು ಜ್ಞಾನ ಪಡೆದು ತನ್ನ ಕೇಸನ್ನು ತಾನೇ ವಾದಿಸಿ ಜಯಗಳಿಸಿದ್ದಾರೆ.
ಆಡಮ್ಸ್ ಜೈಲಿನಿಂದ ಬಿಡುಗಡೆಯಾದ ಬಳಿಕ ಕಾನೂನು ಪದವಿ ಮುಗಿಸಿ ವಕೀಲಿಕೆ ವೃತ್ತಿ ನಡೆಸುತ್ತಿದ್ದಾರೆ. ಈಗ ತನ್ನಂತೆಯೇ ಜೈಲಿನಲ್ಲಿರುವ ಅಮಾಯಕರನ್ನು ಬಿಡುಗಡೆಗೊಳಿಸುವ ಕೆಲಸದಲ್ಲಿ ಅವರು ನಿರತರಾಗಿದ್ದಾರೆ
