ವರದಿಗಾರ (ಸೆ.4): ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡ ಪರಿಣಾಮ 9 ಜನರು ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ.
ಚೆನ್ನೈನಿಂದ 190 ಕಿಲೋಮೀಟರ್ ದೂರದಲ್ಲಿರುವ ಕಟ್ಟುಮನ್ನಾರ್ಕೊಯಿಲ್ನಲ್ಲಿ ಈ ದುರ್ಘಟನೆ ಸಂಭವಿಸಿದೆ . ಈ ಘಟನೆಯಲ್ಲಿ ಇನ್ನೂ ಕೆಲವರು ಗಾಯಗೊಂಡಿದ್ದಾರೆ ಎಂದು ಕಡಲೂರು ಪೊಲೀಸ್ ವರಿಷ್ಠಾಧಿಕಾರಿ ಎಂ.ಶ್ರೀ ಸಭಿನವ್ ತಿಳಿಸಿದ್ದಾರೆ.
ದುರಂತಕ್ಕೆ ಕಾರಣ ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ. ಸ್ಫೋಟದ ತೀವ್ರತೆಗೆ ಕಟ್ಟಡ ಸಂಪೂರ್ಣ ಹಾನಿಯಾಗಿದೆ. ಚೆನ್ನೈಯಿಂದ 190 ಕಿ.ಮೀ.ದೂರದಲ್ಲಿರುವ ಕಡ್ಡಲೂರು ಜಿಲ್ಲೆಯ ಕಟ್ಟುಮನ್ನಾರ್ಕೊಯಿಲ್ನ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದೆ.
ಪಟಾಕಿ ತಯಾರಿಕೆಯು ಭಾರತದಲ್ಲಿ ಒಂದು ದೊಡ್ಡ ವ್ಯವಹಾರವಾಗಿದ್ದು, ಹಬ್ಬಗಳು ಮತ್ತು ವಿವಾಹಗಳಲ್ಲಿ ಪಟಾಕಿಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಅನೇಕ ಅಕ್ರಮ ಕಾರ್ಖಾನೆಗಳು ಪಟಾಕಿಗಳನ್ನು ತಯಾರಿಸುತ್ತವೆ. ತಮಿಳುನಾಡಿನಲ್ಲಿ ಹೆಚ್ಚಾಗಿ ಇಂತಹ ಕಾರ್ಖಾನೆಗಳಿವೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ, ನವದೆಹಲಿಯಿಂದ 460 ಕಿಲೋಮೀಟರ್ ದೂರದಲ್ಲಿರುವ ಉತ್ತರ ಪಂಜಾಬ್ ರಾಜ್ಯದ ಬಟಾಲಾದಲ್ಲಿ ಪಟಾಕಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಬೃಹತ್ ಸ್ಫೋಟದಲ್ಲಿ 22 ಜನರು ಸಾವನ್ನಪ್ಪಿದ್ದರು.
