ರಾಷ್ಟ್ರೀಯ ಸುದ್ದಿ

ನೋಟು ಅಮಾನ್ಯೀಕರಣ ದೇಶದ ಬಡವರ ಮೇಲಿನ ದಾಳಿ: ರಾಹುಲ್ ಗಾಂಧಿ ಟೀಕೆ

ವರದಿಗಾರ (ಸೆ.3):  ನೋಟು ಅಮಾನ್ಯೀಕರಣ ನೀತಿ ದೇಶದ ಬಡವರ ಮೇಲಿನ ದಾಳಿಯಾಗಿದೆ. ಇಡೀ ದೇಶ ಈ ನೀತಿಯ ವಿರುದ್ಧ ಒಟ್ಟಾಗಿ ಹೋರಾಡಲಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಮೊಟ್ಟಮೊದಲ ಪ್ರಶ್ನೆಯೆಂದರೆ, ನೋಟು ಅಮಾನ್ಯೀಕರಣ ಕಪ್ಪು ಹಣವನ್ನು ತೊಡೆದುಹಾಕಿದೆಯೇ? ಇಲ್ಲ, ಎರಡನೆಯದಾಗಿ, ಅದರಿಂದ ದೇಶದ ಬಡ ಜನರಿಗೆ ಏನು ಲಾಭವಾಗಿದೆ? ಏನೂ ಇಲ್ಲ ಎಂದು ರಾಹುಲ್‌ ಗಾಂಧಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ನೋಟು ಅಮಾನ್ಯೀಕರಣದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕೋಟ್ಯಂತರ ಜನರ ನಂಬಿಕೆಯೊಂದಿಗೆ ಆಟವಾಡುತ್ತಿದ್ದಾರೆ ಎಂಬುದಕ್ಕೆ ಒಂದು ಉದಾಹರಣೆ. ರಾತ್ರೋರಾತ್ರಿ ಮೋದಿ ಭಾರತೀಯರು ಮತ್ತು ದೇಶದ ಆರ್ಥಿಕತೆಯನ್ನು ಕತ್ತಲಿಗೆ ದೂಡಿದರು. ಅಲ್ಲಿಂದ ಇನ್ನೂ ಮೆಲೇಳಲು ಸಾಧ್ಯವಾಗಿಲ್ಲ. ಈ ನೀತಿ ದೇಶದ ಅಸಂಘಟಿತ ಆರ್ಥಿಕತೆಯ ಮೇಲೆ ದಾಳಿ ನಡೆಸಿದೆ. ಇದನ್ನು ಗುರುತಿಸಿ ಇಡೀ ದೇಶವೇ ಅದರ ವಿರುದ್ಧ ಹೋರಾಡಬೇಕಿದೆ ಎಂದಿದ್ದಾರೆ.

ನೋಟು ಅಮಾನ್ಯೀಕರಣದ ದೇಶದ ಬಹುದೊಡ್ಡ ಉದ್ಯಮಿಗಳಿಗೆ ಲಾಭ ತಂದುಕೊಡುವ ಉದ್ದೇಶ ಹೊಂದಿತ್ತು.  ನಿಮ್ಮ ಜೇಬಿನಲ್ಲಿರುವ, ನಿಮ್ಮ ಮನೆಗಳಲ್ಲಿರುವ ಹಣವನ್ನು ಪಡೆದು ಬಹುದೊಡ್ಡ ಉದ್ಯಮಿಗಳ ಸಾಲ ತೀರಿಸಲು ಬಳಸಿಕೊಳ್ಳಲಾಗಿದೆ ಎಂದಿದ್ದಾರೆ.

ಮೋದಿ ಸರಕಾರವು ರೈತ ವಿರೋಧಿಯೇ?

This poll has been finished and no longer available to vote !

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group