ಮಾಹಿತಿ

ದೇಶದ ಪ್ರಥಮ ಹೃದ್ರೋಗ ತಜ್ಞೆಯ ಕುರಿತು ನಿಮಗೆಷ್ಟು ಗೊತ್ತು ?

ವರದಿಗಾರ : ಶಿವರಾಮಕೃಷ್ಣ ಅಯ್ಯರ್ ಪದ್ಮಾವತಿ, ವೈದ್ಯಕೀಯ ವಲಯದಲ್ಲಿ ಈ ಹೆಸರು ಕೇಳದವರು ಬಹಳ ವಿರಳ. ಭಾರತದ ಪ್ರಥಮ ಹೃದ್ರೋಗ ತಜ್ಞೆ ಮಾತ್ರವಲ್ಲ ಇಂದಿನ ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡು ಅದೆಷ್ಟೋ ರೋಗಗಳನ್ನು ಆಹ್ವಾನಿಸುವ ಮಂದಿಗೆ ಇವರು ಮಾದರಿ ವ್ಯಕ್ತಿ ಕೂಡಾ ಹೌದು.

ಜೂನ್ 20, 2017 ಕ್ಕೆ ನೂರು ವರ್ಷವನ್ನು ಪೂರೈಸಿದ ಪದ್ಮಾವತಿಯವರು ಇಂದಿಗೂ ತಮ್ಮ ವೈದ್ಯಕೀಯ ವೃತ್ತಿಯನ್ನು ನಿಭಾಯಿಸುತ್ತಿದ್ದಾರೆ ಎಂದರೆ ಆಶ್ಚರ್ಯಪಡಬೇಕಾದ್ದೇ. ದಿನದ 12 ಘಂಟೆಗಳಷ್ಟು ಕಾಲ ರೋಗಿಗಳನ್ನು ಕಾಣುತ್ತಿರುತ್ತಾರೆ. ಪ್ರತಿ ದಿನ ಬೆಳಗ್ಗೆ ಈಜುವ ಹವ್ಯಾಸ ಇಟ್ಟುಕೊಪಂಡಿರುವ ಪದ್ಮಾವತಿಯವರು, ದಿನದ ಕೆಲವು ಸಮಯದಲ್ಲಿ ನಡೆಯುವ ಮೂಲಕ ದೈಹಿಕ ಕ್ಷಮತೆಯನ್ನು ಕಾಪಾಡಿಕೊಂಡಿದ್ದಾರೆ.

ಪದ್ಮಾವತಿಯವರ ತಂದೆ ಬರ್ಮಾದಲ್ಲಿ ಬ್ಯಾರಿಸ್ಟರ್ ಆಗಿದ್ದರು. ಜೂನ್ 20, 1917 ಬರ್ಮಾದ ರಂಗೂನಿನಲ್ಲಿ ಜನಿಸಿದ ಪದ್ಮಾವತಿಯವರು, ಅಲ್ಲೇ ತನ್ನ MBBS ನ್ನು ರಂಗೂನ್ ಮೆಡಿಕಲ್ ಕಾಲೇಜಿನಲ್ಲಿ ಪೂರ್ತಿಗೊಳಿಸಿದರು. 1949 ರಲ್ಲಿ ಲಂಡನಿಗೆ ತೆರಳಿದ ಪದ್ಮಾವತಿಯವರು ಅಲ್ಲಿ ಉನ್ನತ ಶಿಕ್ಷಣವನ್ನು ಪಡೆದು, ಸ್ವೀಡನ್ನಿನಲ್ಲಿ ಹೃದಯರೋಗದ ಕುರಿತು ಹೆಚ್ಚಿನ ಕೋರ್ಸನ್ನು ಮಾಡಿ 1953 ರಲ್ಲಿ ಭಾರತಕ್ಕೆ ಬಂದು ದೆಹಲಿಯ ಲೇಡೀ ಹಾರ್ಡಿಂಗ್ ಮೆಡಿಕಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ತನ್ನ ವೃತ್ತಿಯನ್ನಾರಂಭಿಸಿದರು. 1967 ರಲ್ಲಿ ಭಾರತ ಸರ್ಕಾರ ಇವರಿಗೆ ‘ಪದ್ಮಭೂಷಣ’ ಪ್ರಶಸ್ತಿ ನೀಡಿ ಗೌರವಿಸಿತು. 1978ರಲ್ಲಿ ನಿವೃತ್ತಿಯಾದ ನಂತರ ಭಾರತೀಯ ಹೃದಯ ಪ್ರತಿಷ್ಠಾನವನ್ನು ಸ್ಥಾಪಿಸಿದರು. ಪದ್ಮಾವತಿಯವರು ಈಗಲೂ ರಾಷ್ಟ್ರೀಯ ಹೃದಯ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರೆ ಅವರದೆಷ್ಟರ ಮಟ್ಟಿಗೆ ತನ್ನ ವೃತ್ತಿಯನ್ನು ಪ್ರೀತಿಸುತ್ತಿದ್ದಾರೆ ಎಂಬುವುದನ್ನು ಅರ್ಥೈಸಿಕೊಳ್ಳಬಹುದು

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group