ವರದಿಗಾರ (ಸೆ.2): ಫೇಸ್ಬುಕ್ನ ಉದ್ಯೋಗಿಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಸಂಪುಟದ ಸದಸ್ಯರನ್ನು ನಿಂದಿಸುತ್ತಿದ್ದಾರೆ. ಫೇಸ್ಬುಕ್ನ ಈ ಕ್ರಮವು ಆಂತರಿಕ ವಿಭಜನೆ ಮತ್ತು ಸಾಮಾಜಿಕ ಅಶಾಂತಿ ಮೂಡಿಸಲು ಪಟ್ಟಭದ್ರ ಹಿತಾಸಕ್ತಿಗಳಿಗೆ ಅವಕಾಶ ಮಾಡಿಕೊಡಲಿದೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಫೇಸ್ಬುಕ್ಗೆ ಪತ್ರಬರೆದು ಆತಂಕ ವ್ಯಕ್ತಪಡಿಸಿದ್ದಾರೆ.
ಗಾಸಿಪ್, ಪಿಸುಮಾತುಗಳು, ಕೊಂಕುನುಡಿಗಳ ಮೂಲಕ ಭಾರತದ ರಾಜಕೀಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದು ಖಂಡನೀಯ ಎಂದು ಫೇಸ್ಬುಕ್ ಮುಖ್ಯಸ್ಥ ಮಾರ್ಕ್ ಝುಕರ್ಬರ್ಗ್ಗೆ ಬರೆದ ಪತ್ರದಲ್ಲಿ ರವಿಶಂಕರ್ ಹೇಳಿದ್ದಾರೆ.
ಫೇಸ್ಬುಕ್ ಭಾರತದಲ್ಲಿ ಬಿಜೆಪಿಗೆ ಬೆಂಬಲ ನೀಡುತ್ತಿದೆ ಎಂಬ ಸುದ್ದಿ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟಗೊಂಡ ಬಳಿಕ ಕಾಂಗ್ರೆಸ್ ಫೇಸ್ಬುಕ್ ಮುಖ್ಯಸ್ಥ ಮಾರ್ಕ್ ಝುಕರ್ಬರ್ಗ್ಗೆ ಎರಡು ಪತ್ರ ಬರೆದಿತ್ತು. ಇದೀಗ ಬಿಜೆಪಿ ಕೂಡ ಫೇಸ್ಬುಕ್ ವಿರುದ್ಧ ಆರೋಪ ಮಾಡಿದೆ.
2019ರ ಚುನಾವಣೆ ಸಂದರ್ಭದಲ್ಲಿ ಬಲ-ಮಧ್ಯಮ ಸಿದ್ಧಾಂತವನ್ನು ಪ್ರತಿಪಾದಿಸುವ ಜನರ ಪೇಜ್ಗಳನ್ನು ಡಿಲೀಟ್ ಮಾಡಿದ್ದಷ್ಟೆ ಅಲ್ಲ, ಅದರ ವ್ಯಾಪ್ತಿಯನ್ನು ಗಣನೀಯವಾಗಿ ಕಡಿಮೆ ಮಾಡಲು, ಹಾಗೂ ತೊಂದರೆಗೊಳಗಾದ ಜನರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವೂ ನೀಡದಂತೆ ಫೇಸ್ಬುಕ್ ಆಡಳಿತ ನಿರಂತರ ಪ್ರಯತ್ನ ನಡೆಸಿತು ಎಂದು ರವಿಶಂಕರ್ ಆರೋಪ ಮಾಡಿದ್ದಾರೆ.
