ವರದಿಗಾರ (ಸೆ.2): ಶಸ್ತ್ರಾಸ್ತ್ರ ಹೊಂದಿದ್ದಾನೆ ಎಂದು ಆರೋಪಿಸಿ ಆಫ್ರಿಕನ್-ಅಮೆರಿಕನ್ ವ್ಯಕ್ತಿಯೊಬ್ಬನನ್ನು ಲಾಸ್ ಏಂಜಲೀಸ್ ಪೊಲೀಸರು ಸೋಮವಾರ ಗುಂಡಿಕ್ಕಿ ಹತ್ಯೆ ಮಾಡಿದ್ದು, ಎನ್ ಕೌಂಟರ್ ನಡೆದ ಸ್ಥಳದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.
ವಾಹನ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಡಿಜೋನ್ ಕಿಝ್ಝೀ ಎಂಬಾತನನ್ನು ತಡೆಯಲು ಇಬ್ಬರು ಪೊಲೀಸರು ಪ್ರಯತ್ನಿಸಿದ್ದಾರೆ. ಆದರೆ ಕಿಝ್ಝೀಯನ್ನು ಹಿಡಿಯಲು ಪೊಲೀಸರು ಬೆನ್ನಟ್ಟಿದಾಗ ವಾಹನ ಬಿಟ್ಟು ಆತ ಓಡಿಹೋಗಿದ್ದಾನೆ.
ಲೆಫ್ಟಿನೆಂಟ್ ಬ್ರಾಂಡನ್ ಡೀನ್ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿ, ಕೆಲವು ಕಿಲೋಮೀಟರ್ ಹಿಂಬಾಲಿಸಿದ ಬಳಿಕ ಪೊಲೀಸರು ಆತನನ್ನು ಹಿಡಿಯಲು ಯತ್ನಿಸಿದಾಗ ಆತ ಪೊಲೀಸ್ ಸಿಬ್ಬಂದಿಯ ಮುಖಕ್ಕೆ ಗುದ್ದಿದ್ದಾನೆ. ಈ ವೇಳೆ ಆತನ ಕೈಯಲ್ಲಿದ್ದ ಬಟ್ಟೆಯಲ್ಲಿ ಸುತ್ತಿದ್ದ ವಸ್ತುಗಳು ಕೆಳಗೆ ಬಿದ್ದಿವೆ. ಅದನ್ನು ಪರಿಶೀಲಿಸಿದಾಗ ಅದು ಸೆಮಿ ಅಟೋಮ್ಯಾಟಿಕ್ ಹ್ಯಾಂಡ್ ಗನ್ ಆಗಿತ್ತು. ಈ ವೇಳೆ ಪೊಲೀಸ್ ಅಧಿಕಾರಿ ಆತನಿಗೆ ಗುಂಡಿಕ್ಕಿದ್ದಾರೆ . ಸ್ಥಳದಲ್ಲೇ ಆತ ಸಾವನ್ನಪ್ಪಿದ್ದಾನೆ ಎಂದು
ಎಂದು ಡೀನ್ ಮಾಹಿತಿ ನೀಡಿದ್ದಾರೆ
ಎನ್ಕೌಂಟರ್ ನಡೆದ ಬಳಿಕ Black Lives Matter LA ಗುಂಪಿನ ಕಾರ್ಯಕರ್ತರು ಪ್ರತಿಭಟನೆಗೆ ಕರೆ ನೀಡಿದರು.100ಕ್ಕೂ ಅಧಿಕ ಜನರು ಸೇರಿ ಪ್ರತಿಭಟನೆ ನಡೆಸಿದ್ದಾರೆ.
