ರಾಷ್ಟ್ರೀಯ ಸುದ್ದಿ

ದ್ವೇಷವನ್ನು ಬಿತ್ತುವ ಸುದರ್ಶನ್ ನ್ಯೂಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿವೃತ್ತ ಅಧಿಕಾರಿಗಳಿಂದ ಅಮಿತ್ ಷಾ ಗೆ ಮನವಿ

ವರದಿಗಾರ (ಸೆ.1): ಮುಸ್ಲಿಮರನ್ನು ನಾಗರಿಕ ಸೇವೆಗಳಲ್ಲಿ ‘ಒಳನುಸುಳಲು’ ಸಂಚು ರೂಪಿಸಲಾಗಿದೆ ಮತ್ತು “ಯುಪಿಎಸ್ಸಿ ಜಿಹಾದ್‌” ಎಂದು ಉಲ್ಲೇಖಿಸಿ ಪ್ರಸಾರವಾದ ಪ್ರೋಮೋಕ್ಕಾಗಿ 91 ಮಾಜಿ ಸರಕಾರಿ ಅಧಿಕಾರಿಗಳ ನಿಯೋಗವು ಸುದರ್ಶನ್ ನ್ಯೂಸ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಗ್ರಹ ಸಚಿವ ಅಮಿತ್ ಶಾ ರನ್ನು ಒತ್ತಾಯಿಸಿದೆ.

ದೆಹಲಿ ಹೈಕೋರ್ಟ್ ಕಾರ್ಯಕ್ರಮವನ್ನು ಪ್ರಸಾರ ಮಾಡಬಾರದೆಂದು ಆದೇಶ ನೀಡಿದ ಕಾರಣ ಕಾರ್ಯಕ್ರಮವನ್ನು ಸುದರ್ಶನ್ ನ್ಯೂಸ್ ಪ್ರಸಾರ ಮಾಡಲಿಲ್ಲ.

ನಿವೃತ್ತ ಅಧಿಕಾರಿಗಳು ಸುದರ್ಶನ್ ನ್ಯೂಸ್ ಪ್ರಸ್ತಾಪಿಸಿದ ಪ್ರಸಾರವನ್ನು “ಕೋಮುವಾದಿ, ವಿಭಜಕ ಮತ್ತು ಸಂವೇದನಾಶೀಲ” ಎಂದು ಉಲ್ಲೇಖಿಸಿ ಗೃಹ ಸಚಿವ ಅಮಿತ್ ಶಾ,‌ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿ ಎಲ್.ಜಿ. ಅನಿಲ್ ಬೈಜಾಲ್, ದೆಹಲಿ ಪೊಲೀಸ್ ಆಯುಕ್ತರು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಅಲ್ಪಸಂಖ್ಯಾತ ಆಯೋಗ ಮತ್ತು ಕೇಂದ್ರ ಸಾರ್ವಜನಿಕ ಸೇವೆಗಳ ಆಯೋಗದ ಅಧ್ಯಕ್ಷರು ಮತ್ತು ಇತರರಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪತ್ರ ನೀಡಿದ್ದಾರೆ.

ಸುದರ್ಶನ್ ನ್ಯೂಸ್ ನ ನಿರೂಪಕ ಸುರೇಶ್ ಚಾವಂಕೆ ಅವರು ಮಾಡಿದ ಪ್ರತಿಕ್ರಿಯೆಗಳು ಪ್ರೋಮೋ ಮೊತ್ತದಲ್ಲಿ ದ್ವೇಷದ ಭಾಷಣವಾಗಿದೆ ಎಂದು ಹೇಳಿದೆ. ಇದನ್ನು “ಒಂದು ನಿರ್ದಿಷ್ಟ ಧರ್ಮ ಮತ್ತು ಸಮುದಾಯವನ್ನು ಕೆಣಕುವ ಕೆಟ್ಟ ದ್ವೇಷ ಅಭಿಯಾನ” ಎಂದು ಪರಿಗಣಿಸಬೇಕು ಮತ್ತು ಸೂಕ್ತ ಕ್ರಮ ಕೈಕೊಳ್ಳಬೇಕೆಂದು ನಿಯೋಗವು ಒತ್ತಾಯಿಸಿದೆ.

ಮೋದಿ ಸರಕಾರವು ರೈತ ವಿರೋಧಿಯೇ?

This poll has been finished and no longer available to vote !

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group