ವರದಿಗಾರ (ಸೆ.1):ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕು ರಾಂಪುರ ಗ್ರಾಮದ ಹಾಲಸ್ವಾಮಿ ಮಠದ ಸ್ವಾಮಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನಕರ ಹೇಳಿಕೆ ದಾಖಲಿಸಿದ್ದಾರೆಂದು ಆರೋಪಿಸಿ ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ, ಲೇಖಕ ವಿಶ್ವರಾಧ್ಯ ಸತ್ಯಂಪೇಟೆ ವಿರುದ್ಧ ಹೊನ್ನಾಳಿ ಪೋಲಿಸ್ ಠಾಣೆಯಲ್ಲಿ ದಿ: 23/7/2020 ರಂದು ಪ್ರಕರಣ ದಾಖಲಾಗಿತ್ತು.
ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ದಾವಣಗೆರೆಯ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಗೀತಾ ಕೆ ಬಿ ಯವರು ಇಂದು ವಿಶ್ವರಾಧ್ಯ ಸತ್ಯಂಪೇಟೆಯವರಿಗೆ ನೀರಿಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.
ತನಿಖೆಗೆ ಸಹಕರಿಸುವಂತಹ ಷರತ್ತುಗಳನ್ನು ಆದೇಶದಲ್ಲಿ ಹೇಳಲಾಗಿದೆ.
ವಿಶ್ವರಾಧ್ಯ ಸತ್ಯಂಪೇಟೆಯವರ ಪರವಹಿಸಿ ಬೆಂಗಳೂರಿನ ನ್ಯಾಯವಾದಿ ಅನಂತ್ ನಾಯಕ ಎನ್ ವಾದಿಸಿದ್ದರು.
ಸರ್ಕಾರಿ ಅಭಿಯೋಜಕ ಎಸ್ ವಿ ಪಾಟೀಲ್ ಅವರು ದೂರುದಾರರ ಪರವಹಿಸಿದ್ದರು.
ಈಗ ಜಾಮೀನು ಮಂಜೂರು ಆಗಿರುವುದರಿಂದ ಬಂಧನದ ಭೀತಿಯಲ್ಲಿದ್ದ ವಿಶ್ವರಾಧ್ಯ ಸತ್ಯಂಪೇಟೆಯವರು ನಿರಾಳರಾದಂತಾಗಿದೆ.
ವಿಶ್ವರಾಧ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪರವಾಗಿ ವಿವಿಧ ಕಡೆಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು.
ವರದಿ:
ತೋಳಿ ಭರಮಣ್ಣ
ರಾಜ್ಯಸಂಚಾಲಕರು
ವಿದ್ಯಾರ್ಥಿ ಬಂಧುತ್ವ ವೇದಿಕೆ ಕರ್ನಾಟಕ
ಬೆಂಗಳೂರು & ಬೆಳಗಾವಿ
