ರಾಷ್ಟ್ರೀಯ ಸುದ್ದಿ

‘ಫೇಸ್‌ಬುಕ್ ಮತ್ತು ವಾಟ್ಸಾಪ್ ಭಾರತದಲ್ಲಿ ಬಿಜೆಪಿ ಪರವಾಗಿದೆ’; ‘ದಿ ವಾಲ್ ಸ್ಟ್ರೀಟ್ ಜರ್ನಲ್‌’ನಲ್ಲಿ ಎರಡನೇ ಬಾರಿಗೆ ಲೇಖನ ಪ್ರಕಟ

ಭಾರತದಲ್ಲಿ ಪ್ರಜಾಪ್ರಭುತ್ವ ಬುಡಮೇಲುಗೊಳಿಸುವಲ್ಲಿ ಫೇಸ್‌ಬುಕ್, ವಾಟ್ಸಾಪ್‌ನ ಪಾತ್ರವು ಸ್ಪಷ್ಟಗೊಂಡಿದೆ; ಕಾಂಗ್ರೆಸ್

ವರದಿಗಾರ (ಆ.31): ಫೇಸ್‌ಬುಕ್ ಮತ್ತು ವಾಟ್ಸಾಪ್ ಭಾರತದಲ್ಲಿ ಬಿಜೆಪಿ ಪರವಾಗಿ ಇರುವುದರ ಬಗ್ಗೆ ಅಮೆರಿಕದ ‘ದಿ ವಾಲ್ ಸ್ಟ್ರೀಟ್ ಜರ್ನಲ್’ ಎರಡನೇ ಬಾರಿಗೆ ಸುದ್ದಿ ಪ್ರಕಟಿಸಿ ವಿಷಯ ಬಹಿರಂಗಪಡಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ಎರಡೂ ಕಂಪನಿಗಳ ವಿರುದ್ಧ ಟೀಕಾಪ್ರಹಾರ ನಡೆಸಿದ್ದು, ವಾಲ್‌ ಸ್ಟ್ರೀಟ್‌ನಲ್ಲಿ ಪ್ರಕಟಗೊಂಡ ವಿಷಯಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ-ಜೆಪಿಸಿ ತನಿಖೆಯೊಂದಿಗೆ ಕ್ರಿಮಿನಲ್ ತನಿಖೆಯನ್ನೂ ನಡೆಸಬೇಕು ಎಂದು ಸೋಮವಾರ ಒತ್ತಾಯಿಸಿದೆ.

ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತದ ಪ್ರಜಾಪ್ರಭುತ್ವವನ್ನು ಬುಡಮೇಲುಗೊಳಿಸುವಲ್ಲಿ ಫೇಸ್‌ಬುಕ್ ಮತ್ತು ವಾಟ್ಸಾಪ್‌ನ ಪಾತ್ರವು ಈಗ ಸ್ಪಷ್ಟಗೊಂಡಿದೆ ಮತ್ತು ಪ್ರಶ್ನಾತೀತವಾಗಿದೆ. ಈ ಸಂಬಂಧ ತಕ್ಷಣ ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಆದೇಶಿಸಬೇಕು. ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ನ ಬಾಕಿ ಇರುವ ಪರವಾನಗಿಗಳನ್ನು ತಡೆ ಹಿಡಿಯಬೇಕು ಎಂದು ಅವರು ಒತ್ತಾಯಿಸಿದರು.

ಎರಡು ವಾರಗಳ ಸಮಯದಲ್ಲಿ ವಿಶ್ವಾಸಾರ್ಹ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟಗೊಂಡ ಮೂರು ಪ್ರತ್ಯೇಕ ಲೇಖನಗಳು, ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ಗಳು ಬಿಜೆಪಿಯೊಂದಿಗೆ ಕೈಜೋಡಿಸಿರುವುದನ್ನು ಬಹಿರಂಗಪಡಿಸಿವೆ. ದೇಶದ ಪ್ರಜಾಪ್ರಭುತ್ವವನ್ನು ಹಾಳು ಮಾಡುವ ಮತ್ತು ದೇಶದ ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುವುದು ಇವರ ಉದ್ದೇಶವಾಗಿದೆ ಎಂದು ಚೌಧರಿ ಆರೋಪಿಸಿದರು.

2014ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿದಂತೆ ತಮ್ಮ ಕಚೇರಿ ಸಿಬ್ಬಂದಿಗೆ ಆಂತರಿಕ ಇ ಮೇಲ್‌ ಕಳುಹಿಸಿರುವ ಫೇಸ್‌ಬುಕ್‌ನ ಭಾರತದ ಸಾರ್ವಜನಿಕ ನೀತಿ ತಂಡದ ಮುಖ್ಯಸ್ಥೆ ಅಂಖಿ ದಾಸ್‌, ‘ನಾವು ಅವರ ಸಾಮಾಜಿಕ ಜಾಲತಾಣ ಅಭಿಯಾನಕ್ಕೆ ಬೆಂಕಿ ಹಚ್ಚಿದ್ದೆವು ಮತ್ತು ಉಳಿದದ್ದು ಇತಿಹಾಸ’ ಎಂದು ಮೋದಿ ಅವರ ಗೆಲುವಿನ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಚೌಧರಿ ಆರೋಪಿಸಿದ್ದಾರೆ.

ಮೋದಿ ವಿಜಯದಿಂದ ಅಂಖಿ ದಾಸ್ ಸಂತೋಷಗೊಂಡರು. ಅವರ ಗೆಲುವಿನಲ್ಲಿ ಫೇಸ್‌ಬುಕ್ ವಹಿಸಿದ ಪಾತ್ರ ದೊಡ್ಡದು ಎಂದು ಚೌಧರಿ ಹೇಳಿದರು.

ಫೇಸ್‌ಬುಕ್‌ ಮೋದಿ ಅವರ ಗೆಲುವಿಗೆ ನೆರವು ನೀಡಿದೆ. ಇದು ಕಾಂಗ್ರೆಸ್‌ ಪಕ್ಷದ ಆರೋಪವಲ್ಲ. ಇದು ಅಮೆರಿಕದ ಪ್ರಮುಖ ವೃತ್ತಪತ್ರಿಕೆ ವಾಲ್‌ ಸ್ಟ್ರೀಟ್‌ ಜರ್ನಲ್‌ನಲ್ಲಿ ಪ್ರಕಟಗೊಂಡ ‘ ಪ್ರಧಾನಿ ಮೋದಿಗೆ ಬೆಂಬಲಿಸಿದ ಫೇಸ್‌ಬುಕ್‌’ ಎಂಬ ಲೇಖನದಲ್ಲಿ ಈ ವಿಷಯ ಬಹಿರಂಗಗೊಂಡಿದೆ ಎಂದು ಚೌಧರಿ ತಿಳಿಸಿದರು.

ತನಿಖೆಯ ಮುಕ್ತಾಯದವರೆಗೂ ತಕ್ಷಣದಿಂದ ಜಾರಿಗೆ ಬರುವಂತೆ ಫೇಸ್‌ಬುಕ್‌ನ ಭಾರತದ ನಾಯಕತ್ವದ ತಂಡವನ್ನು ಅಮಾನತುಗೊಳಿಸಬೇಕು. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ತಂತ್ರಜ್ಞಾನ ಕಂಪನಿಗಳ ಸಾರ್ವಜನಿಕ ನೀತಿ ತಂಡಗಳ ಎಲ್ಲಾ ಮುಖ್ಯಸ್ಥರ ಚಟುವಟಿಕೆಗಳ ಬಗ್ಗೆ ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ವಿಚಾರಣೆ ಮತ್ತು ನೀತಿ ಸಂಹಿತೆಯನ್ನು ಸ್ಥಾಪಿಸಬೇಕು ಎಂದು ರಂಜನ್ ಚೌಧರಿ ಆಗ್ರಹಿಸಿದ್ದಾರೆ.

ಮೋದಿ ಸರಕಾರವು ರೈತ ವಿರೋಧಿಯೇ?

This poll has been finished and no longer available to vote !

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group