ವರದಿಗಾರ-ಜಮ್ಷೆಡ್ಪುರ: ಗೋರಖ್ ಪುರ ಶಿಶುಗಳ ಮರಣದ ನೋವು ಮಾಸುವ ಮುನ್ನವೇ ಜಾರ್ಖಂಡ್ ರಾಜ್ಯದಿಂದ ಇನ್ನೊಂದು ಬೆಚ್ಚಿ ಬೀಳಿಸುವ ವರದಿ ಬೆಳಕಿಗೆ ಬಂದಿದೆ. ಇಲ್ಲಿನ ಜಮ್ಷೆಡ್ಪುರದ ಮಹಾತ್ಮ ಗಾಂಧಿ ಸ್ಮಾರಕ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಕಳೆದ 30 ದಿನಗಳಲ್ಲಿ 52 ಶಿಶುಗಳು ಮರಣ ಹೊಂದಿರುವುದಾಗಿ ವರದಿಯಾಗಿದೆ.
ಆಸ್ಪತ್ರೆಯ ಮೇಲ್ವಿಚಾರಕರ ಪ್ರಕಾರ ಮಕ್ಕಳು ಅಪೌಷ್ಟಿಕತೆಯ ಕಾರಣದಿಂದ ಮರಣ ಹೊಂದಿದ್ದಾರೆ ಎನ್ನಲಾಗಿದೆ.
