ವರದಿಗಾರ (ಆ.31): ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಹಾಗೂ A1 ಹೆಲ್ಪಿಂಗ್ ಫೌಂಡೇಶನ್ ಕಣ್ಣೂರು ಇದರ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಹಾಗೂ ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಪುತ್ತೂರು ಇವರ ಸಹಭಾಗಿತ್ವದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಇದರ ನಾಲ್ಕನೆಯ ವಾರ್ಷಿಕೋತ್ಸವ ಪ್ರಯುಕ್ತ ಸಾರ್ವಜನಿಕ ರಕ್ತದಾನ ಶಿಬಿರವು ಆದಿತ್ಯವಾರ ಕಣ್ಣೂರಿನ ಇಂಗ್ಲಿಷ್ ಮೀಡಿಯಂ ಶಾಲೆಯ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಕಣ್ಣೂರು ಜುಮಾ ಮಸೀದಿ ಖತೀಬರಾದ ಅನ್ಸಾರ್ ಫೈಝಿ ಅಲ್-ಬುರ್ಹಾನಿ ಉಸ್ತಾದರ ದುಃವಾಶೀರ್ವಚನದ ಮೂಲಕ ಚಾಲನೆಗೊಂಡ ಕಾರ್ಯಕ್ರಮವನ್ನು A1 ಹೆಲ್ಪಿಂಗ್ ಫೌಂಡೇಶನ್ ಕಣ್ಣೂರು ಇದರ ಅಧ್ಯಕ್ಷರಾದ ಎಸ್.ಡಿ ಮಹಮ್ಮದ್ ಶಾಕಿರ್ ಅಧ್ಯಕ್ಷತೆ ವಹಿಸಿದ್ದರು.
ಕೊರೋನಾ ಭೀತಿಯ ನಡುವೆಯೂ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ ಎಲ್ಲಾ ಸುರಕ್ಷಿತಾ ಮುನ್ನೆಚ್ಚರಿಕೆಯನ್ನು ಪಾಲಿಸಿಕೊಂಡು ಒಟ್ಟು 151 ಮಂದಿ ರಕ್ತದಾನ ಮಾಡಿ ಜೀವದಾನಿಯಾದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಹಾಗೂ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.
ಮುಖ್ಯ ಅತಿಥಿಗಳಾಗಿ ಕೆ.ಎಸ್ ಎಚ್ ಹಮೀದ್ (ಅಧ್ಯಕ್ಷರು ಜುಮಾ ಮಸೀದಿ ಕಣ್ಣೂರು),ಕೆ ಅಹಮ್ಮದ್ ಬಾವ (ಮಾಜಿ ತಾಲೂಕು ಪಂಚಾಯತ್ ಸದಸ್ಯರು), ಅಬ್ದುಲ್ ಖಾದರ್ ಕಣ್ಣೂರು,ಸಿತಾರ್ ಮಜೀದ್ (ಕಾರ್ಯದರ್ಶಿ ಕಣ್ಣೂರು ಇಂಗ್ಲಿಷ್ ಮೀಡಿಯಮ್ ಶಾಲೆ), ಅಬ್ದುಲ್ ರಹಿಮಾನ್(ಬೋರು ಗುಡ್ಡೆ ಮಸೀದಿ ಅಧ್ಯಕ್ಷರು), ಕೆ ಮಹಮ್ಮದ್ (ಸ್ಥಾಪಕರು A1 ಹೆಲ್ಪಿಂಗ್ ಫೌಂಡೇಶನ್), E.K ಟಿಂಬರ್ ರಫೀಕ್(ಕುಂಡಾಲಾ ಮಸೀದಿ ಅಧ್ಯಕ್ಷರು),ಇಕ್ಬಾಲ್ ಕಣ್ಣೂರು(SDPI ಅಧ್ಯಕ್ಷರು ಕಣ್ಣೂರು), ಯಮ್ ಇಸ್ಮಾಯಿಲ್ ಬುಖಾರಿ(ಖತೀಬರು ಅಡ್ಯಾರ್ ಪದವು), ಬದ್ರುದ್ದೀನ್ ಧಾರಿಮಿ, ಇಬ್ರಾಹಿಮ್ ದಾರಿಮಿ, ನಸೀಮಾ ಅಬ್ದುಲ್ ರಹಿಮಾನ್(ಉಪಾಧ್ಯಕ್ಷರು ಇಂಗ್ಲಿಷ್ ಮೀಡಿಯಮ್ ಕಣ್ಣೂರು), E.K ಮಜೀದ್, ರಿಯಾಝ್ ಕಣ್ಣೂರು, ನಿಸಾರ್ ಉಳ್ಳಾಲ (ಸ್ಥಾಪಕರು ಬ್ಲಡ್ ಹೆಲ್ಪ್ ಕರ್ನಾಟಕ(ರಿ), A1 ಹೆಲ್ಪಿಂಗ್ ಫೌಂಡೇಶನ್ ಕಣ್ಣೂರು ಪದಾಧಿಕಾರಿಗಳು ಮತ್ತು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಕಾರ್ಯ ನಿರ್ವಾಹಕರು ಉಪಸ್ಥಿತರಿದ್ದರು. ಅಶ್ರಫ್ ಅರಬಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.
ರಕ್ತದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ, ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಕಣ್ಣೂರಿನ ಜನಸ್ನೇಹಿ ನಾಗರಿಕರಿಗೂ ಹಾಗೂ ಕಾರ್ಯಕ್ರಮದ ಯಶಸ್ವಿಗಾಗಿ ಹಗಳಿರುಲು ದುಡಿದ ಎಲ್ಲಾ ಕಾರ್ಯಕರ್ತರಿಗೂ,ಶಾಲಾ ಆಡಳಿತ ಮಂಡಳಿಗೂ,ಮಾಧ್ಯಮ ಪ್ರತಿನಿಧಿಗಳಿಗೂ ಸಂಘಟಕರು ಕೃತಜ್ಞತೆಯನ್ನು ತಿಳಿಸಿದ್ದಾರೆ.
