ರಾಷ್ಟ್ರೀಯ ಸುದ್ದಿ

ಸ್ವೀಡನ್ ಹಿಂಸಾಚಾರದಲ್ಲೂ ಮುಂದುವರಿದ ಬಿಜೆಪಿಯ ಸುಳ್ಳು ಸುದ್ದಿಯ ಚಾಳಿ

ಸ್ವೀಡನ್‌ ಹಿಂಸಾಚಾರ ಪ್ರಸ್ತಾಪಿಸಿ ಬಿಜೆಪಿ ವಕ್ತಾರನಿಂದ ಸುಳ್ಳು ಸುದ್ದಿ

ವರದಿಗಾರ (ಆ.30): ಚಂಢೀಗಡ ಬಿಜೆಪಿ ವಕ್ತಾರ ಹಾಗೂ ವಕೀಲ ಗೌರವ್ ಗೋಯಲ್ ಸ್ವೀಡನ್‌ನಲ್ಲಿ ನಡೆಯುತ್ತಿರುವ ಘಟನೆಯನ್ನು ಮುಂದಿಟ್ಟು ಸುಳ್ಳು ಸುದ್ದಿ ಹರಡಲು ಪ್ರಯತ್ನಿಸಿದ್ದಾರೆ. ಆದರೆ ಇದರ ಸತ್ಯಾಸತ್ಯತೆಯನ್ನು ಆಲ್ಟ್‌ ನ್ಯೂಸ್‌ ಬಹಿರಂಗಪಡಿಸಿದೆ.

ಜಿಹಾದಿಗಳಿಗೆ ಬರಲು ಸ್ವೀಡನ್ ಅವಕಾಶ ಕಲ್ಪಿಸಿದ್ದರಿಂದ ಅಲ್ಲಿ ನೂರಾರು ಮಹಿಳೆಯರು ಕ್ರೂರವಾಗಿ ಹತ್ಯೆಗೀಡಾಗಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಟ್ವೀಟ್‌ ಮಾಡಿ ಗಾಯಗೊಂಡ ಮಹಿಳೆಯರ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ಸ್ವೀಡನ್‌ನ ಸಹಿಷ್ಣುತೆ ಅವರನ್ನು ಕೊಲ್ಲಲು ದಾರಿ ಮಾಡಿಕೊಟ್ಟಿದೆ. ಜಿಹಾದಿಗಳಿಗೆ ಒಳಬರಲು ಸ್ವೀಡನ್ ಅವಕಾಶ ಮಾಡಿಕೊಟ್ಟಿತು ಮತ್ತು ಈಗ ಸ್ವೀಡನ್‌ನ ನಾಗರಿಕರು ಕ್ರೂರವಾಗಿ ಕೊಲ್ಲಲ್ಪಡುತ್ತಿದ್ದಾರೆ ಅಥವಾ ಗಾಯಗೊಂಡಿದ್ದಾರೆ, ಅದು ಅಪಘಾತವಲ್ಲ … ಇದು ಅವರು ಮಾಡಿದ ಆಯ್ಕೆ ಎಂದು ಗೌರವ್ ಗೋಯಲ್ ಟ್ವೀಟ್ ಮಾಡಿದ್ದಾರೆ.

ಆದರೆ ಇದು ಸುಳ್ಳು ಸುದ್ದಿಯಾಗಿದೆ. 8 ಮಂದಿ ಗಾಯಗೊಂಡ ಮಹಿಳೆಯರ ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದು, ಇದರು ಅಮೆರಿಕ ಮತ್ತು ಇಂಗ್ಲೆಂಡ್‌ನಲ್ಲಿ ಕೌಟುಂಬಿಕ ಹಿಂಸೆ, ಪೊಲೀಸರ ಹಿಂಸಾಚಾರ ಮತ್ತು ಗುಂಪು ದಾಳಿಯಲ್ಲಿ ಗಾಯಗೊಂಡವರ ಚಿತ್ರವಾಗಿದೆ. ಅದು ಕೂಡ 7-8 ವರ್ಷಗಳ ಹಿಂದಿನ ಚಿತ್ರಗಳಾಗಿವೆ ಎಂದು ಆಲ್ಟ್‌ ನ್ಯೂಸ್‌ನ ಮುಹಮ್ಮದ್ ಝುಬೈರ್ ಟ್ವೀಟ್ ಮಾಡಿ ಸತ್ಯವನ್ನು ಬಹಿರಂಗಪಡಿಸಿದ್ದಾರೆ.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group