ರಾಷ್ಟ್ರೀಯ ಸುದ್ದಿ

ಕೆಪಿಎಸ್‌ಸಿಯಲ್ಲಿ ರಾಂಕ್‌ ಪಡೆದಿದ್ದರೂ ನಿರುದ್ಯೋಗದಿಂದ ಬೇಸತ್ತು ಯುವಕ ಆತ್ಮಹತ್ಯೆ

ವರದಿಗಾರ (ಆ.30): ಕೇರಳ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 76ನೇ ರಾಂಕ್ ಪಡೆದಿದ್ದರೂ ನಿರುದ್ಯೋಗಿಯಾಗಿದ್ದ 28 ವರ್ಷದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.

ತಿರುವನಂತಪುರಂ ಜಿಲ್ಲೆಯ ತಟ್ಟಿತ್ತಂಬಲಂ ನಿವಾಸಿ ಅನು ಆತ್ಮಹತ್ಯೆ ಮಾಡಿಕೊಂಡ ಯುವಕ. ಸಿವಿಲ್ ಅಬಕಾರಿ ಅಧಿಕಾರಿಗಳ ಪರೀಕ್ಷೆಯಲ್ಲಿ ಅನು 76 ನೇ ಸ್ಥಾನ ಪಡೆದಿದ್ದ. 2020 ರ ಏಪ್ರಿಲ್‌ನಲ್ಲಿ ಶ್ರೇಯಾಂಕ ಪಟ್ಟಿಯ ಅವಧಿ ಮುಗಿದ ನಂತರ ಆತ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ. ಪಿಎಸ್‌ಸಿ ಶ್ರೇಯಾಂಕ ಪಟ್ಟಿಯ ಸಿಂಧುತ್ವವನ್ನು ಇನ್ನೂ ಎರಡು ತಿಂಗಳು ವಿಸ್ತರಿಸಿದ್ದರೂ, 72 ಶ್ರೇಯಾಂಕಗಳವರೆಗೆ ಹೆಚ್ಚುವರಿಯಾಗಿ ಕೇವಲ 7 ಅಭ್ಯರ್ಥಿಗಳು  ಸಲಹಾ ಜ್ಞಾಪಕ ಪತ್ರ ಪಡೆದಿದ್ದರು.

ಮಾನಸಿಕ ಒತ್ತಡದಿಂದ ಯುವಕ ಆತ್ಮಹತ್ಯೆ ಪತ್ರ ಬರೆದು ನಂತರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನುಗೆ ನ್ಯಾಯ ದೊರಕಿಸಿಕೊಡಲು ಯುವ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ತಿಳಿಸಿದ್ದಾರೆ.

ಯುವಕನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ಪಿಎಸ್‍ಸಿ ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲಿಸುವಂತೆ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಒತ್ತಾಯಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group