ರಾಷ್ಟ್ರೀಯ ಸುದ್ದಿ

ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿ; ಸೋನಿಯಾ ಗಾಂಧಿ

‘ದ್ವೇಷ ಹರಡುತ್ತಿರುವ ಈ ಶಕ್ತಿಗಳು ಎಲ್ಲಾ ವರ್ಗಗಳ ಜನರ ಬಾಯಿ ಮುಚ್ಚಿಸಲು ಯತ್ನಿಸುತ್ತಿವೆ’

ವರದಿಗಾರ (ಆ.29): ದೇಶದಲ್ಲಿ ಕೆಲವು ಶಕ್ತಿಗಳು ದ್ವೇಷ ಹರಡುತ್ತಿದ್ದು, ಈ ಶಕ್ತಿಗಳು ಎಲ್ಲಾ ವರ್ಗಗಳ ಜನರ ಬಾಯಿ ಮುಚ್ಚಿಸಲು ಯತ್ನಿಸುತ್ತಿವೆ. ಎಲ್ಲರೂ ಮೌನವಾಗಿರಬೇಕು ಎಂದು ಈ ಶಕ್ತಿ ಬಯಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

ಈ ಶಕ್ತಿಗಳಿಂದಾಗಿ ಸಮಾಜ ಮತ್ತು ಪ್ರಜಾಪ್ರಭುತ್ವಕ್ಕೆ ಸವಾಲು ಎದುರಾಗಿದೆ. ಸಂಸತ್ತು ಮತ್ತು ವಿಧಾನಸಭೆಗಳು ಪ್ರಜಾಪ್ರಭುತ್ವದ ಆಧಾರಸ್ತಂಭ ಮತ್ತು ಪವಿತ್ರ ದೇಗುಲವಿದ್ದಂತೆ. ಅದನ್ನು ಕೇವಲ ಕಟ್ಟಡದಿಂದಲ್ಲ, ಬದಲಿಗೆ ಸ್ಫೂರ್ತಿಯಿಂದ ರಕ್ಷಿಸಬೇಕು. ನಮ್ಮ ಹಿರಿಯರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಆದರೆ, ಅವರ ಕನಸುಗಳನ್ನು ಪೂರೈಸಲು ಇನ್ನೂ ಸಾಕಷ್ಟು ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಚತ್ತೀಸ್‌ಗಢ ವಿಧಾನಸಭೆಯ ಹೊಸ ಕಟ್ಟಡದ ಶಾಸನವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಸೋನಿಯಾ,  ದೇಶದಲ್ಲಿ ಪರಸ್ಪರ ಅಪನಂಬಿಕೆ ಉಂಟಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ. ಪ್ರಜಾಪ್ರಭುತ್ವದ ಅಂಗಗಳು ಅಲುಗಾಡುತ್ತಿವೆ. ದೇಶದ ಪಿತಾಮಹ ಮಹತ್ಮಾ ಗಾಂಧಿ, ಪಂಡಿತ್‌ ಜವಹರ್‌ಲಾಲ್‌ ನೆಹರು, ಡಾ.ರಾಜೇಂದ್ರ ಪ್ರಸಾದ್, ಮತ್ತು ಬಾಬಾ ಸಾಹೆಬ್‌ ಡಾ.ಭೀಮ್‌ ರಾವ್‌ ಅಂಬೇಡ್ಕರ್‌ ಅವರು ಸ್ವಾತಂತ್ರ್ಯ ಬಂದು 73 ವರ್ಷಗಳ ನಂತರ ಇಂತಹ ಕಷ್ಟದ ಪರಿಸ್ಥಿತಿ ಎದುರಿಸಬೇಕು ಎಂದು ಊಹಿಸಿರಲೂ ಸಾಧ್ಯವಿಲ್ಲ ಎಂದು ಹೇಳಿದರು.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group