ರಾಷ್ಟ್ರೀಯ ಸುದ್ದಿ

ದೇವರ ಆಟಕ್ಕಿಂತ ಮೊದಲಿನ ಆರ್ಥಿಕ ಹೀನಾಯ ಸ್ಥಿತಿಗೆ ಯಾರು ಕಾರಣ?; ಚಿದಂಬರಂ ಪ್ರಶ್ನೆ

ವರದಿಗಾರ (ಆ.29): ದೇವರ ಆಟದಿಂದಲೇ ದೇಶದ ಆರ್ಥಿಕ ಪರಿಸ್ಥಿತಿ ಕುಸಿತ ಎಂದು ಒಪ್ಪಿಕೊಂಡರೂ ದೇವರ ಆಟಕ್ಕಿಂತ ಮೊದಲಿನ ಆರ್ಥಿಕ ಹೀನಾಯ ಸ್ಥಿತಿಗೆ ಯಾರು ಕಾರಣ ? ಎಂದು ಮಾಜಿ ಹಣಕಾಸು ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಪಿ ಚಿಂದಂಬರಂ ಪ್ರಶ್ನಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕ ‘ದೇವರ ಕೆಲಸ’ ಆಗಿದ್ದರೆ, ಸಾಂಕ್ರಾಮಿಕ ರೋಗವು ಭಾರತಕ್ಕೆ ಬರುವ ಮೊದಲು 2017-18, 2018-19 ಮತ್ತು 2019-20ರ ಅವಧಿಯಲ್ಲಿ ದೇಶದ ಆರ್ಥಿಕತೆ ಕುಸಿದಿರುವುದನ್ನು ನೀವು ಹೇಗೆ ವಿವರಿಸುತ್ತೀರಿ? ದೇವರ ಸಂದೇಶವಾಹಕರಾಗಿ ದಯವಿಟ್ಟು ಹಣಕಾಸು ಸಚಿವರೇ ಉತ್ತರಿಸಿ ಎಂದು ಚಿದರಂಬರಂ ಟ್ವೀಟ್ ಮಾಡಿದ್ದಾರೆ.

ಆರ್ಥಿಕ ಕುಸಿತ ದೇವರ ಆಟ ಕಾರಣ ಎಂಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಈ ರೀತಿ ವ್ಯಂಗ್ಯವಾಡಿದ್ದಾರೆ.

ಕೊರೋನಾ ಸಾಂಕ್ರಾಮಿಕ ದೇವರ ಆಟವಾದರೆ ಸತತ ಮೂರು ವರ್ಷಗಳಿಂದ ಆರ್ಥಿಕತೆಯ ಅಸಮರ್ಪಕ ನಿರ್ವಹಣೆಯನ್ನು ಏನೆಂದು ಕರೆಯಬೇಕು? ಎಂದು ಚಿದಂಬರಂ ಕೇಳಿದ್ದಾರೆ.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group