ಹನಿ ಸುದ್ದಿ

ಸಂಗೊಳ್ಳಿ ರಾಯಣ್ಣ ಪ್ರತಿಮೆಗಾಗಿ ಬೆಳಗಾವಿ ಚಲೋ; ಪೊಲೀಸರಿಂದ ಹತ್ತಿಕ್ಕಲಾಗುತ್ತಿದೆ: ಕನ್ನಡ ಪರ ಹೋರಾಟಗಾರರ ಆಕ್ರೋಶ

ವರದಿಗಾರ (ಆ.27): ಸಂಗೊಳ್ಳಿ ರಾಯಣ್ಣರ ಪ್ರತಿಮೆಯನ್ನು ಕಿತ್ತು ಹಾಕಿರುವುದರ ವಿರುದ್ಧ ನಡೆಯುತ್ತಿರುವ “ಬೆಳಗಾವಿ ಚಲೋ” ಪ್ರತಿಭಟನೆಗೆ ಕ್ಷುಲ್ಲಕ ಕಾರಣ ನೀಡಿ ಪೊಲೀಸರಿಂದ ಹತ್ತಿಕ್ಕಲಾಗುತ್ತಿದೆ ಎಂದು ಕನ್ನಡ ಪರ ಹೋರಾಟಗಾರರು ಗುರುವಾರ ರಾತ್ರಿ ತಡೆಯಲು ಬಂದ ಪೊಲೀಸರ ಮುಂದೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ

ಗುರುವಾರ ರಾತ್ರಿ ಗೇಟಿಗೆ ಬೀಗ ಹಾಕಿ ನಮ್ಮನ್ನು ಆಹಾರ ಸೇವಿಸಲು ಬಿಡುತ್ತಿಲ್ಲವೆಂದು ಪೊಲೀಸರೊಂದಿಗಿನ ಮಾತುಕತೆಯಲ್ಲಿ, ನಾವು ಶಾಂತಿಯುತವಾತವಾಗಿ ನಮ್ಮ ಹಕ್ಕನ್ನು ಕೇಳಲು ಬಂದಿದ್ದೇವೆ. ಕೆಲವೊಂದು ನೆಪ ಹೇಳಿ ಯಾಕೆ ಹತ್ತಿಕ್ಕಲು ಪ್ರಯತ್ನಿಸುತ್ತೀರಿ. ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಪೊಲೀಸರ ಮುಂದೆ ಪ್ರತಿಭಟನಾಕಾರರು ಸ್ಪಷ್ಟ ಪಡಿಸಿದ್ದಾರೆ.

ಸರಕಾರ ಅಥವಾ ಮುಖ್ಯಮಂತ್ರಿಗಳನ್ನು ನಮ್ಮ ಬೇಡಿಕೆಗಳನ್ನು ಪೂರೈಸಿದ್ದಲ್ಲಿ ತಕ್ಷಣ ನಮ್ಮ ಹೋರಾಟವನ್ನು ಕೈ ಬಿಡುತ್ತೇವೆ ಎಂದು ಹೇಳಿದ್ದಾರೆ.

ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಪುನರ್ ಸ್ಥಾಪಿಸುವಂತೆ ಒತ್ತಾಯ

▪️ಇಂದು ಬೆಳಗಾವಿಯಲ್ಲಿ “ಬೆಳಗಾವಿ ಚಲೋ”

ವೀಡಿಯೋ ವೀಕ್ಷಿಸಿ

ತಡೆಯಲು ಬಂದ ಪೊಲೀಸರ ಕ್ರಮಕ್ಕೆ ಆಕ್ರೋಶ:
https://m.facebook.com/story.php?story_fbid=974949466356101&id=252303598620695

ಕಾರ್ಯಕ್ರಮದ ಬಗ್ಗೆ ವಿವರಣೆ ನೀಡುತ್ತಿರುವ ಆಯೋಜಕರು

https://m.facebook.com/story.php?story_fbid=974956649688716&id=252303598620695

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group